Go Back
+ servings
lal mirch ka achar
Print Pin
No ratings yet

ಸ್ಟಫ್ಡ್ ಕೆಂಪು ಮೆಣಸಿನ ಉಪ್ಪಿನಕಾಯಿ | lal mirch ka achar in kannada

ಸುಲಭ ಸ್ಟಫ್ಡ್ ಕೆಂಪು ಮೆಣಸಿನ ಉಪ್ಪಿನಕಾಯಿ
ಕೋರ್ಸ್ ಉಪ್ಪಿನಕಾಯಿ
ಪಾಕಪದ್ಧತಿ ರಾಜಸ್ಥಾನ
ಕೀವರ್ಡ್ ಸ್ಟಫ್ಡ್ ಕೆಂಪು ಮೆಣಸಿನ ಉಪ್ಪಿನಕಾಯಿ
ತಯಾರಿ ಸಮಯ 10 minutes
ಅಡುಗೆ ಸಮಯ 10 minutes
ಬಿಸಿಲಿನಲ್ಲಿಡುವ ಸಮಯ 7 days
ಒಟ್ಟು ಸಮಯ 7 days 20 minutes
ಸೇವೆಗಳು 1 ಜಾರ್
ಲೇಖಕ HEBBARS KITCHEN

ಪದಾರ್ಥಗಳು

  • 20 ಕೆಂಪು ಮೆಣಸಿನಕಾಯಿ
  • ¼ ಕಪ್ ಸಾಸಿವೆ
  • ¼ ಕಪ್ ಫೆನ್ನೆಲ್ / ಸೋಂಪು
  • ¼ ಜೀರಿಗೆ / ಜೀರಾ
  • 1 ಟೇಬಲ್ಸ್ಪೂನ್ ಮೇಥಿ  / ಮೆಂತ್ಯ
  • 1 ಟೀಸ್ಪೂನ್ ಕಲೋಂಜಿ ಬೀಜಗಳು
  • 2 ಟೇಬಲ್ಸ್ಪೂನ್ ಆಮ್ಚೂರ್
  • 1 ಟೀಸ್ಪೂನ್ ಅರಿಶಿನ
  • 2 ಟೇಬಲ್ಸ್ಪೂನ್ ಉಪ್ಪು
  • ½ ಟೀಸ್ಪೂನ್ ಹಿಂಗ್ / ಅಸಫೊಟಿಡಾ
  • 2 ಟೇಬಲ್ಸ್ಪೂನ್ ವಿನೆಗರ್
  • 1 ಕಪ್ ಸಾಸಿವೆ ಎಣ್ಣೆ

ಸೂಚನೆಗಳು

  • ಮೊದಲನೆಯದಾಗಿ, 20 ಕೆಂಪು ಮೆಣಸಿನಕಾಯಿ ತೆಗೆದುಕೊಂಡು ಅದರ ತೊಟ್ಟನ್ನು ತೆಗೆದುಹಾಕಿ. ಅದರಲ್ಲಿರುವ ಕೊಳಕು ಅಥವಾ ತೇವಾಂಶವನ್ನು ತೆಗೆದು ಮೆಣಸಿನಕಾಯಿಯನ್ನು ಸ್ವಚ್ಛಗೊಳಿಸಿ.
  • ಮೆಣಸಿನಕಾಯಿಯನ್ನು ಕತ್ತರಿಸಿ, ಬೀಜಗಳನ್ನು ತೆಗೆಯಿರಿ. ಬೀಜಗಳನ್ನು ತೆಗೆದುಹಾಕುವುದು ನಿಮ್ಮ ಆಯ್ಕೆಯಾಗಿದೆ. ನಂತರ ಇದನ್ನು ಪಕ್ಕಕ್ಕೆ ಇರಿಸಿ.
  • ಬಾಣಲೆಯಲ್ಲಿ ¼ ಕಪ್ ಸಾಸಿವೆ, ¼ ಕಪ್ ಫೆನ್ನೆಲ್, ¼ ಜೀರಿಗೆ ಮತ್ತು 1 ಟೀಸ್ಪೂನ್ ಮೆಂತೆ ತೆಗೆದುಕೊಳ್ಳಿ.
  • ಮಸಾಲೆಗಳು ಪರಿಮಳ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
  • ಸಂಪೂರ್ಣವಾಗಿ ತಣ್ಣಗಾಗಿಸಿ ಮತ್ತು ಒರಟಾದ ಪುಡಿಗೆ ಮಿಕ್ಸರ್ ರುಬ್ಬಿಕೊಳ್ಳಿ.
  • ಮಸಾಲಾ ಮಿಶ್ರಣವನ್ನು ಸಣ್ಣ ಬಟ್ಟಲಿಗೆ ವರ್ಗಾಯಿಸಿ.
  • 1 ಟೀಸ್ಪೂನ್ ಕಲೋಂಜಿ ಬೀಜಗಳು, 2 ಟೀಸ್ಪೂನ್ ಆಮ್ಚೂರ್, 1 ಟೀಸ್ಪೂನ್ ಅರಿಶಿನ, 2 ಟೀಸ್ಪೂನ್ ಉಪ್ಪು ಮತ್ತು ½ ಟೀಸ್ಪೂನ್ ಹಿಂಗ್ ಸೇರಿಸಿ.
  • ಇದಲ್ಲದೆ, 2 ಟೀಸ್ಪೂನ್ ವಿನೆಗರ್ ಸೇರಿಸಿ ಮತ್ತು ಎಲ್ಲಾ ಮಸಾಲೆಗಳು ಸೇರಿಕೊಳ್ಳುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
  • ತಯಾರಾದ ಉಪ್ಪಿನಕಾಯಿ ಮಸಾಲಾವನ್ನು ಮೆಣಸಿನಕಾಯಿಗೆ ತುಂಬಿಸಿ.
  • ಸ್ಟಫ್ಡ್ ಮೆಣಸಿನಕಾಯಿಯನ್ನು ದೊಡ್ಡ ಗಾಜಿನ ಜಾರ್ ಅಲ್ಲಿ ಇರಿಸಿ. ಹಾಗೆಯೇ, ಉಳಿದ ಮಸಾಲಾ ಮಿಶ್ರಣವನ್ನು ಸೇರಿಸಿ. ಪಕ್ಕಕ್ಕೆ ಇರಿಸಿ.
  • 1 ಕಪ್ ಸಾಸಿವೆ ಎಣ್ಣೆಯನ್ನು ಹೊಗೆ ಆಡುವವರೆಗೆ ಬಿಸಿ ಮಾಡಿ.
  • ಎಣ್ಣೆಯನ್ನು ಸಂಪೂರ್ಣವಾಗಿ ತಣ್ಣಗಾಗಿಸಿ, ಮತ್ತು ಸ್ಟಫ್ಡ್ ಮೆಣಸಿನಕಾಯಿಯ ಮೇಲೆ ಸುರಿಯಿರಿ.
  • ಎಲ್ಲಾ ಮೆಣಸಿನಕಾಯಿಗೆ ಎಣ್ಣೆ ಚೆನ್ನಾಗಿ ಲೇಪಿತವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.
  • ಮುಚ್ಚಿ, ಕನಿಷ್ಠ 7 ದಿನಗಳವರೆಗೆ ಅಥವಾ ಮೆಣಸಿನಕಾಯಿ ಸಂಪೂರ್ಣವಾಗಿ ಮೃದುವಾಗುವವರೆಗೆ, ಬಿಸಿಲಿನಲ್ಲಿ ಇಡಿ.
  • ಅಂತಿಮವಾಗಿ, ರೋಟಿಯೊಂದಿಗೆ ಸ್ಟಫ್ಡ್ ಕೆಂಪು ಮೆಣಸಿನ ಉಪ್ಪಿನಕಾಯಿಯನ್ನು ಆನಂದಿಸಿ.