ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 1 ಈರುಳ್ಳಿ, 3 ಟೀಸ್ಪೂನ್ ಸ್ವೀಟ್ ಕಾರ್ನ್, 1 ಟೊಮೆಟೊ, ½ ಕ್ಯಾಪ್ಸಿಕಂ ಮತ್ತು 3 ಟೀಸ್ಪೂನ್ ಪನೀರ್ ತೆಗೆದುಕೊಳ್ಳಿ.
ಈಗ ¼ ಟೀಸ್ಪೂನ್ ಪೆಪ್ಪರ್ ಪೌಡರ್, ½ ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇದಕ್ಕೆ ¼ ಕಪ್ ಮೇಯನೇಸ್, 2 ಟೀಸ್ಪೂನ್ ಟೊಮೆಟೊ ಸಾಸ್, 1 ಟೀಸ್ಪೂನ್ ಮೆಣಸಿನಕಾಯಿ ಸಾಸ್, 1 ಟೀಸ್ಪೂನ್ ಹಸಿರು ಚಟ್ನಿ ಮತ್ತು ¼ ಕಪ್ ಚೀಸ್ ಸೇರಿಸಿ.
ಎಲ್ಲವನ್ನೂ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಸ್ಟಫಿನ್ಗ್ ಸಿದ್ಧವಾಗಿದೆ.
ಈಗ 3 ಹೋಳು ಬ್ರೆಡ್ ತೆಗೆದುಕೊಂಡು ಬೆಣ್ಣೆಯನ್ನು ಹರಡಿ.
ಒಂದು ಸ್ಲೈಸ್ ಅಲ್ಲಿ 1 ಟೀಸ್ಪೂನ್ ಟೊಮೆಟೊ ಸಾಸ್ ಮತ್ತು ಇನ್ನೊಂದರಲ್ಲಿ 1 ಟೀಸ್ಪೂನ್ ಹಸಿರು ಚಟ್ನಿ ಹರಡಿ.
ಒಂದು ಬ್ರೆಡ್ ಸ್ಲೈಸ್ ನಲ್ಲಿ 2 ಟೀಸ್ಪೂನ್ ತಯಾರಾದ ಸ್ಟಫಿನ್ಗ್ ಅನ್ನು ಹರಡಿ.
ಇನ್ನೊಂದು ಬೆಣ್ಣೆಯಿಂದ ಲೇಪನವಾದ ಬ್ರೆಡ್ ಸ್ಲೈಸ್ ನೊಂದಿಗೆ ಮುಚ್ಚಿ.
ಈಗ 8 ಸ್ಲೈಸ್ ಸೌತೆಕಾಯಿ, 4 ಸ್ಲೈಸ್ ಟೊಮೆಟೊ, 2 ಟೀಸ್ಪೂನ್ ಆಲೂಗಡ್ಡೆ ಇಟ್ಟು, ಪಿಂಚ್ ಚಾಟ್ ಮಸಾಲ ಮತ್ತು 1 ಟೀಸ್ಪೂನ್ ಟೊಮೆಟೊ ಸಾಸ್ ಹಾಕಿ.
ಹಸಿರು ಚಟ್ನಿ ಯಿಂದ ಹರಡಿದ ಇನ್ನೊಂದು ಬ್ರೆಡ್ ಸ್ಲೈಸ್ನೊಂದಿಗೆ ಮುಚ್ಚಿ.
ಬೆಣ್ಣೆ ಲೇಪಿಸಿ ನಿಧಾನವಾಗಿ ಸ್ಯಾಂಡ್ವಿಚ್ ಒತ್ತಿ. ಚಿನ್ನದ ಕಂದು ಬಣ್ಣಕ್ಕೆ ಗ್ರಿಲ್ ಮಾಡಿ.
ಈಗ ಕಡೈನಲ್ಲಿ ಸ್ಯಾಂಡ್ವಿಚ್ ಇರಿಸಿ. ಸುಡುವುದನ್ನು ತಡೆಯಲು ಪ್ಲೇಟ್ ಅಥವಾ ಸ್ಟಾಂಡ್ ಇರಿಸಲು ನೋಡಿಕೊಳ್ಳಿ.
1 ಟೀಸ್ಪೂನ್ ಟೊಮೆಟೊ ಸಾಸ್, ½ ಟೀಸ್ಪೂನ್ ಚಿಲ್ಲಿ ಸಾಸ್, ¼ ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್ ಮತ್ತು ¼ ಟೀಸ್ಪೂನ್ ಮಿಕ್ಸೆಡ್ ಹರ್ಬ್ಸ್ ಗಳನ್ನು ಹರಡಿ.
ಏಕರೂಪವಾಗಿ ಹರಡಿ, ನೀವು ಪರ್ಯಾಯವಾಗಿ ಇಲ್ಲಿ ಪಿಜ್ಜಾ ಸಾಸ್ ಅನ್ನು ಬಳಸಬಹುದು.
2 ಟೀಸ್ಪೂನ್ ತುರಿದ ಪಿಜ್ಜಾ ಚೀಸ್ ಮೇಲೆ ಹರಡಿರಿ.
ಮುಚ್ಚಿ, 5 ನಿಮಿಷ ಅಥವಾ ಚೀಸ್ ಕರಗುವವರೆಗೆ ಬೇಯಿಸಿ.
ಅಂತಿಮವಾಗಿ, ಅರ್ಧ ತುಂಡು ಮಾಡಿ, ಆಲೂಗೆಡ್ಡೆ ಚಿಪ್ಸ್ನೊಂದಿಗೆ ಗ್ರಿಲ್ಲ್ಡ್ ಚೀಸ್ ಪಿಜ್ಜಾ ಸ್ಯಾಂಡ್ವಿಚ್ ಅನ್ನು ಆನಂದಿಸಿ.