Go Back
+ servings
semiya custard falooda
Print Pin
No ratings yet

ವರ್ಮಿಸೆಲ್ಲಿ ಕಸ್ಟರ್ಡ್ ರೆಸಿಪಿ | vermicelli custard in kannada

ಸುಲಭ ವರ್ಮಿಸೆಲ್ಲಿ ಕಸ್ಟರ್ಡ್ ಪಾಕವಿಧಾನ
ಕೋರ್ಸ್ ಸಿಹಿ
ಪಾಕಪದ್ಧತಿ ಭಾರತೀಯ
ಕೀವರ್ಡ್ ವರ್ಮಿಸೆಲ್ಲಿ ಕಸ್ಟರ್ಡ್ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 20 minutes
ಒಟ್ಟು ಸಮಯ 30 minutes
ಸೇವೆಗಳು 4 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಸೇಮಿಯಾ ಕಸ್ಟರ್ಡ್ಗಾಗಿ:

  • ½ ಟೀಸ್ಪೂನ್ ತುಪ್ಪ
  • ½ ಕಪ್ ವರ್ಮಿಸೆಲ್ಲಿ / ಸೇಮಿಯಾ
  • 4 ಕಪ್ ಹಾಲು ಪೂರ್ಣ ಕೆನೆಯುಕ್ತ
  • ¼ ಟೀಸ್ಪೂನ್ ಕೇಸರ್ / ಕೇಸರಿ
  • ¼ ಕಪ್ ಸಕ್ಕರೆ
  • 2 ಟೇಬಲ್ಸ್ಪೂನ್ ಕಸ್ಟರ್ಡ್ ಪುಡಿ ವೆನಿಲ್ಲಾ
  • ½ ಕಪ್ ಹಾಲು

ಸರ್ವ್ ಮಾಡಲು (1 ಗ್ಲಾಸ್):

  • 2 ಟೇಬಲ್ಸ್ಪೂನ್ ಸಬ್ಜಾ
  • 2 ಟೇಬಲ್ಸ್ಪೂನ್ ದಾಳಿಂಬೆ
  • 5 ದ್ರಾಕ್ಷಿ ಕತ್ತರಿಸಿದ
  • 2 ಟೇಬಲ್ಸ್ಪೂನ್ ಮಾವು ಕತ್ತರಿಸಿದ
  • 2 ಟೇಬಲ್ಸ್ಪೂನ್ ಸೇಬು ಕತ್ತರಿಸಿದ
  • 2 ಟೇಬಲ್ಸ್ಪೂನ್ ಬೀಜಗಳು ಕತ್ತರಿಸಿದ
  • 2 ಟೇಬಲ್ಸ್ಪೂನ್ ಟುಟ್ಟಿ ಫ್ರುಟ್ಟಿ
  • 1 ಚೆರ್ರಿ

ಸೂಚನೆಗಳು

  • ಮೊದಲನೆಯದಾಗಿ, ಬಾಣಲೆಯಲ್ಲಿ ½ ಟೀಸ್ಪೂನ್ ತುಪ್ಪದ ಜೊತೆ ½ ಕಪ್ ವರ್ಮಿಸೆಲ್ಲಿ ಹುರಿಯಿರಿ.
  • ಸೇಮಿಯಾ ಗೋಲ್ಡನ್ ಬ್ರೌನ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
  • ದೊಡ್ಡ ಕಡಾಯಿಯಲ್ಲಿ, 4 ಕಪ್ ಹಾಲು ಮತ್ತು ¼ ಟೀಸ್ಪೂನ್ ಕೇಸರಿ ಸೇರಿಸಿ ಬಿಸಿ ಮಾಡಿ.
  • ಚೆನ್ನಾಗಿ ಬೆರೆಸಿ ಹಾಲನ್ನು ಕುದಿಸಿ.
  • ಹುರಿದ ಸೇಮಿಯಾವನ್ನು ಹಾಲಿನಲ್ಲಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಈಗ ¼ ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • 7 ನಿಮಿಷ ಅಥವಾ ಸೇಮಿಯಾ ಸಂಪೂರ್ಣವಾಗಿ ಬೇಯಿಸುವವರೆಗೆ ಕುದಿಸಿ.
  • ಸಣ್ಣ ಬಟ್ಟಲಿನಲ್ಲಿ 2 ಟೀಸ್ಪೂನ್ ಕಸ್ಟರ್ಡ್ ಪೌಡರ್ ಮತ್ತು ½ ಕಪ್ ಹಾಲು ತೆಗೆದುಕೊಳ್ಳಿ.
  • ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  • ಅದನ್ನು ಕಡಾಯಿ ಗೆ ಸುರಿಯಿರಿ ಮತ್ತು ನಿರಂತರವಾಗಿ ಬೆರೆಸಿರಿ.
  • ಹಾಲು ದಪ್ಪವಾಗುವವರೆಗೆ ಮತ್ತು ಕೆನೆಯುಕ್ತ ವಾಗುವವವರೆಗೆ ಚೆನ್ನಾಗಿ ಬೇಯಿಸಿ.
  • ಕಸ್ಟರ್ಡ್ ಸೆಮಿಯಾವನ್ನು ದೊಡ್ಡ ಬಟ್ಟಲಿನಲ್ಲಿ ವರ್ಗಾಯಿಸಿ.
  • ಸಂಪೂರ್ಣವಾಗಿ ತಣ್ಣಗಾಗಿಸಿ, ಹಾಗೂ 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ.
  • ಸರ್ವ್ ಮಾಡಲು, ಎತ್ತರದ ಗಾಜಿನ ಲೋಟೆಯನ್ನು ತೆಗೆದುಕೊಂಡು 2 ಟೀಸ್ಪೂನ್ ಸಬ್ಜಾ ಸೇರಿಸಿ. ಸಬ್ಜಾ ತಯಾರಿಸಲು, ಸಬ್ಜಾ ಬೀಜಗಳನ್ನು ನೀರಿನಲ್ಲಿ 15 ನಿಮಿಷಗಳ ಕಾಲ ಅಥವಾ ಅದು ಉಬ್ಬುವವರೆಗೆ ನೆನೆಸಿಡಿ.
  • ¼ ಕಪ್ ತಣ್ಣಗಾಗಿರುವ ವರ್ಮಿಸೆಲ್ಲಿ ಕಸ್ಟರ್ಡ್ ಸೇರಿಸಿ.
  • ಈಗ 2 ಟೀಸ್ಪೂನ್ ದಾಳಿಂಬೆ, 5 ದ್ರಾಕ್ಷಿ, 2 ಟೀಸ್ಪೂನ್ ಮಾವು ಮತ್ತು 2 ಟೀಸ್ಪೂನ್ ಸೇಬನ್ನು ಹಾಕಿ.
  • ಮತ್ತಷ್ಟು, ¼ ಕಪ್ ತಣ್ಣಗಾಗಿರುವ ವರ್ಮಿಸೆಲ್ಲಿ ಕಸ್ಟರ್ಡ್ ಅನ್ನು ಸುರಿಯಿರಿ.
  • 2 ಟೀಸ್ಪೂನ್ ಬೀಜಗಳು ಮತ್ತು 2 ಟೀಸ್ಪೂನ್ ಟುಟ್ಟಿ ಫ್ರೂಟಿಯೊಂದಿಗೆ ಟೊಪ್ಪಿನ್ಗ್ಸ್ ಮಾಡಿ.
  • ಅಂತಿಮವಾಗಿ, ಚೆರ್ರಿ ಜೊತೆ ಅಲಂಕರಿಸಿ ವರ್ಮಿಸೆಲ್ಲಿ ಕಸ್ಟರ್ಡ್ ಅನ್ನು ಆನಂದಿಸಿ.