Go Back
+ servings
schezwan paneer recipe
Print Pin
No ratings yet

ಸೆಜ್ವಾನ್ ಪನೀರ್ ರೆಸಿಪಿ | schezwan paneer in kannada | ಪನೀರ್ ಸೆಜ್ವಾನ್

ಸುಲಭ ಸೆಜ್ವಾನ್ ಪನೀರ್ ಪಾಕವಿಧಾನ | ಪನೀರ್ ಸೆಜ್ವಾನ್
ಕೋರ್ಸ್ ಅಪೇಟೈಸರ್
ಪಾಕಪದ್ಧತಿ ಇಂಡೋ ಚೈನೀಸ್
ಕೀವರ್ಡ್ ಸೆಜ್ವಾನ್ ಪನೀರ್ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 20 minutes
ಒಟ್ಟು ಸಮಯ 30 minutes
ಸೇವೆಗಳು 2 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಹುರಿಯುವ ಪನೀರ್ಗಾಗಿ:

  • ½ ಕಪ್ ಮೈದಾ
  • ¼ ಕಪ್ ಕಾರ್ನ್ ಫ್ಲೋರ್
  • ¼ ಟೀಸ್ಪೂನ್ ಕಾಳು ಮೆಣಸು / ಪೆಪ್ಪರ್
  • ½ ಟೀಸ್ಪೂನ್ ಸೆಜ್ವಾನ್ ಸಾಸ್
  • ¼ ಟೀಸ್ಪೂನ್ ಉಪ್ಪು
  • ½ ಕಪ್ ನೀರು
  • 11 ತುಂಡು ಪನೀರ್ / ಕಾಟೇಜ್ ಚೀಸ್
  • ಎಣ್ಣೆ ಹುರಿಯಲು

ಇತರ ಪದಾರ್ಥಗಳು:

  • 3 ಟೀಸ್ಪೂನ್ ಎಣ್ಣೆ
  • 2 ಬೆಳ್ಳುಳ್ಳಿ ಸಣ್ಣಗೆ ಕತ್ತರಿಸಿದ
  • 1 ಇಂಚಿನ ಶುಂಠಿ ಸಣ್ಣಗೆ ಕತ್ತರಿಸಿದ
  • 1 ಚಿಲ್ಲಿ ಸೀಳಿದ
  • 4 ಟೇಬಲ್ಸ್ಪೂನ್ ಸ್ಪ್ರಿಂಗ್ ಈರುಳ್ಳಿ ಸಣ್ಣಗೆ ಕತ್ತರಿಸಿದ
  • ¼ ಈರುಳ್ಳಿ ಸಣ್ಣಗೆ ಕತ್ತರಿಸಿದ
  • ¼ ಕ್ಯಾಪ್ಸಿಕಂ ಹೋಳು
  • 2 ಟೇಬಲ್ಸ್ಪೂನ್ ಸೆಜ್ವಾನ್ ಸಾಸ್
  • 1 ಟೇಬಲ್ಸ್ಪೂನ್ ವಿನೆಗರ್
  • 1 ಟೇಬಲ್ಸ್ಪೂನ್ ಸೋಯಾ ಸಾಸ್
  • ¼ ಟೀಸ್ಪೂನ್ ಸಕ್ಕರೆ
  • ¼ ಟೀಸ್ಪೂನ್ ಉಪ್ಪು

ಸೂಚನೆಗಳು

  • ಮೊದಲನೆಯದಾಗಿ, ½  ಕಪ್ ಮೈದಾ ಮತ್ತು ¼ ಕಪ್ ಕಾರ್ನ್ ಫ್ಲೋರ್ ತೆಗೆದುಕೊಂಡು ಬ್ಯಾಟರ್ ತಯಾರಿಸಿ.
  • ¼ ಟೀಸ್ಪೂನ್ ಪೆಪ್ಪರ್, ½ ಟೀಸ್ಪೂನ್ ಸೆಜ್ವಾನ್ ಸಾಸ್ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
  • ½ ಕಪ್ ನೀರನ್ನು ಸೇರಿಸಿ ಉಂಡೆ ಮುಕ್ತ ನಯವಾದ ಬ್ಯಾಟರ್ ತಯಾರಿಸಿ.
  • 11 ಪನೀರ್ ತುಂಡುಗಳನ್ನು ಸೇರಿಸಿ ಮತ್ತು ಸಂಪೂರ್ಣವಾಗಿ ಅದ್ದಿ.
  • ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಆರೋಗ್ಯಕರ ಆಯ್ಕೆಗಾಗಿ ನೀವು ಶೇಲ್ಲೋ ಫ್ರೈ ಸಹ ಮಾಡಬಹುದು.
  • ಅವುಗಳು ಚಿನ್ನದ ಕಂದು ಬಣ್ಣ ಬರುವವರೆಗೆ ಹುರಿಯಿರಿ.
  • ಅಂತಿಮವಾಗಿ, ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಅಡಿಗೆ ಟವೆಲ್ ಮೇಲೆ ಹುರಿದ ಪನೀರ್ ಅನ್ನು ತೆಗೆಯಿರಿ. ನಂತರ ಪಕ್ಕಕ್ಕೆ ಇರಿಸಿ.

ಪನೀರ್ ಸೆಜ್ವಾನ್ ಪಾಕವಿಧಾನ:

  • ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 2 ಬೆಳ್ಳುಳ್ಳಿ, 1 ಇಂಚು ಶುಂಠಿ ಮತ್ತು 1 ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಜ್ವಾಲೆ ಹೆಚ್ಚಾಗಿಯೇ ಇರಲಿ.
  • ಹೆಚ್ಚಿನ ಜ್ವಾಲೆಯ ಮೇಲೆ ¼ ಈರುಳ್ಳಿ ಮತ್ತು 2 ಟೀಸ್ಪೂನ್ ಸ್ಪ್ರಿಂಗ್ ಈರುಳ್ಳಿ ಹಾಕಿ.
  • ಈಗ ¼ ಕ್ಯಾಪ್ಸಿಕಂ ಸೇರಿಸಿ, ಅವುಗಳು ಸ್ವಲ್ಪ ಬಣ್ಣವನ್ನು ಬದಲಾಯಿಸುವವರೆಗೆ ಸಾಟ್ ಮಾಡುವುದನ್ನು ಮುಂದುವರಿಸಿ.
  • ಹೆಚ್ಚುವರಿಯಾಗಿ 2 ಟೀಸ್ಪೂನ್ ಸೆಜ್ವಾನ್ ಸಾಸ್, 1 ಟೀಸ್ಪೂನ್ ವಿನೆಗರ್, 1 ಟೀಸ್ಪೂನ್ ಸೋಯಾ ಸಾಸ್, ¼ ಟೀಸ್ಪೂನ್ ಸಕ್ಕರೆ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
  • ಚೆನ್ನಾಗಿ ಮಿಶ್ರಣ ಮಾಡಿ ಒಂದು ನಿಮಿಷ ಬೇಯಿಸಿ.
  • ಕಾರ್ನ್‌ ಫ್ಲೋರ್ ಸ್ಲರ್ರಿ ಸೇರಿಸಿ. ಕಾರ್ನ ಫ್ಲೋರ್ ಸ್ಲರಿ ತಯಾರಿಸಲು 2 ಟೀಸ್ಪೂನ್ ಕಾರ್ನ್ ಫ್ಲೋರ್ ಅನ್ನು ¼ ಕಪ್ ನೀರಿನೊಂದಿಗೆ ಬೆರೆಸಿ.
  • ಗ್ರೇವಿ ಸ್ವಲ್ಪ ದಪ್ಪವಾಗುವವರೆಗೆ ಮತ್ತು ಹೊಳಪು ಬರುವವರೆಗೆ ಉತ್ತಮ ಮಿಶ್ರಣವನ್ನು ನೀಡಿ.
  • ಇದಕ್ಕೆ, ಹುರಿದ ಪನೀರ್ ಸೇರಿಸಿ.
  • ಸಾಸ್ ಚೆನ್ನಾಗಿ ಎಲ್ಲ ಪನೀರ್ ಗಳಿಗೂ ಲೇಪಿತವಾಗಿದೆಯಾ ಎಂದು ಖಚಿತಪಡಿಸಿಕೊಂಡು ನಿಧಾನವಾಗಿ ಮಿಶ್ರಣ ಮಾಡಿ.
  • ಅಂತಿಮವಾಗಿ, ಸೆಜ್ವಾನ್ ಪನೀರ್ ಅನ್ನು ಸರ್ವಿಂಗ್ ಬೌಲ್‌ಗೆ ವರ್ಗಾಯಿಸಿ ಮತ್ತು ಕತ್ತರಿಸಿದ ಸ್ಪ್ರಿಂಗ್ ಈರುಳ್ಳಿಯನ್ನು ಅಲಂಕರಿಸಿ. ಫ್ರೈಡ್ ರೈಸ್ ನೊಂದಿಗೆ ಬಡಿಸಿ.