Go Back
+ servings
roti sandwich recipe
Print Pin
No ratings yet

ರೋಟಿ ಸ್ಯಾಂಡ್‌ವಿಚ್ | roti sandwich in kannada | ಚಪಾತಿ ಸ್ಯಾಂಡ್‌ವಿಚ್

ಸುಲಭ ರೋಟಿ ಸ್ಯಾಂಡ್‌ವಿಚ್ ಪಾಕವಿಧಾನ | ಚಪಾತಿ ಸ್ಯಾಂಡ್‌ವಿಚ್
ಕೋರ್ಸ್ ಬೆಳಗಿನ ಉಪಾಹಾರ
ಪಾಕಪದ್ಧತಿ ಭಾರತೀಯ
ಕೀವರ್ಡ್ ರೋಟಿ ಸ್ಯಾಂಡ್‌ವಿಚ್
ತಯಾರಿ ಸಮಯ 5 minutes
ಅಡುಗೆ ಸಮಯ 15 minutes
ಒಟ್ಟು ಸಮಯ 20 minutes
ಸೇವೆಗಳು 6 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

  • 2 ಟೇಬಲ್ಸ್ಪೂನ್ ಎಣ್ಣೆ
  • ಈರುಳ್ಳಿ ಸಣ್ಣಗೆ ಕತ್ತರಿಸಿದ
  • 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • 1 ಮೆಣಸಿನಕಾಯಿ ಸಣ್ಣಗೆ ಕತ್ತರಿಸಿದ
  • 1 ಕ್ಯಾರೆಟ್ ತುರಿದ
  • 4 ಟೇಬಲ್ಸ್ಪೂನ್ ಎಲೆಕೋಸು ಸಣ್ಣಗೆ ಕತ್ತರಿಸಿದ
  • ½ ಕ್ಯಾಪ್ಸಿಕಂ ಸಣ್ಣಗೆ ಕತ್ತರಿಸಿದ
  • 3 ಟೇಬಲ್ಸ್ಪೂನ್ ಸಿಹಿ ಕಾರ್ನ್
  • 1 ಟೀಸ್ಪೂನ್ ಪಾವ್ ಭಾಜಿ ಮಸಾಲ
  • ½ ಟೀಸ್ಪೂನ್ ಉಪ್ಪು
  • ¼ ಟೀಸ್ಪೂನ್ ಅರಿಶಿನ
  • ½ ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
  • 3 ಟೇಬಲ್ಸ್ಪೂನ್ ಪನೀರ್ / ಕಾಟೇಜ್ ಚೀಸ್ ತುರಿದ
  • 2 ಟೇಬಲ್ಸ್ಪೂನ್ ಟೊಮೆಟೊ ಸಾಸ್
  • 1 ಟೀಸ್ಪೂನ್ ಚಿಲ್ಲಿ ಸಾಸ್

ಇತರ ಪದಾರ್ಥಗಳು:

  • 6 ರೋಟಿ / ಚಪಾತಿ ಉಳಿದಿರುವ
  • 3 ಟೀಸ್ಪೂನ್ ಹಸಿರು ಚಟ್ನಿ
  • 3 ಟೀಸ್ಪೂನ್ ಮೊಟ್ಟೆಯಿಲ್ಲದ ಮೇಯನೇಸ್
  • 1 ಸ್ಟಿಕ್ ಚೆಡ್ಡಾರ್ ಚೀಸ್
  • ಬೆಣ್ಣೆ ಟೋಸ್ಟಿಂಗ್ಗಾಗಿ

ಸೂಚನೆಗಳು

  • ಮೊದಲನೆಯದಾಗಿ, ದೊಡ್ಡ ಕಡಾಯಿನಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ ½ ಈರುಳ್ಳಿ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು 1 ಮೆಣಸಿನಕಾಯಿ ಹಾಕಿ. ಈರುಳ್ಳಿ ಸ್ವಲ್ಪ ಕುಗ್ಗುವವರೆಗೆ ಸಾಟ್ ಮಾಡಿ.
  • ಈಗ 1 ಕ್ಯಾರೆಟ್, 4 ಟೀಸ್ಪೂನ್ ಎಲೆಕೋಸು, ½ ಕ್ಯಾಪ್ಸಿಕಂ ಮತ್ತು 3 ಟೀಸ್ಪೂನ್ ಸಿಹಿ ಕಾರ್ನ್ ಸೇರಿಸಿ.
  • ತರಕಾರಿಗಳನ್ನು ಅತಿಯಾಗಿ ಬೇಯಿಸದೆ ಒಂದು ನಿಮಿಷ ಬೇಯಿಸಿ.
  • ಇದಲ್ಲದೆ, 1 ಟೀಸ್ಪೂನ್ ಪಾವ್ ಭಾಜಿ ಮಸಾಲ, ½ ಟೀಸ್ಪೂನ್ ಉಪ್ಪು, ¼ ಟೀಸ್ಪೂನ್ ಅರಿಶಿನ ಮತ್ತು ½ ಟೀಸ್ಪೂನ್ ಮೆಣಸಿನ ಪುಡಿ ಸೇರಿಸಿ.
  • ಒಂದು ನಿಮಿಷ ಅಥವಾ ರುಚಿ ಚೆನ್ನಾಗಿ ಹೀರಿಕೊಳ್ಳುವವರೆಗೆ ಸಾಟ್ ಮಾಡಿ.
  • ಈಗ 3 ಟೀಸ್ಪೂನ್ ಪನೀರ್, 2 ಟೀಸ್ಪೂನ್ ಟೊಮೆಟೊ ಸಾಸ್ ಮತ್ತು 1 ಟೀಸ್ಪೂನ್ ಚಿಲ್ಲಿ ಸಾಸ್ ಸೇರಿಸಿ.
  • ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಮಿಶ್ರಣ ಮಾಡಿ. ನಂತರ ಪಕ್ಕಕ್ಕೆ ಇರಿಸಿ.
  • ಈಗ, ಉಳಿದ ರೋಟಿ ಅಥವಾ ಚಪಾತಿ ತೆಗೆದುಕೊಂಡು, ಅದರ ಅರ್ಧ ಭಾಗಕ್ಕೆ, ½ ಟೀಸ್ಪೂನ್ ಹಸಿರು ಚಟ್ನಿಯನ್ನು ಹಾಗೂ ಉಳಿದ ಅರ್ಧ ಭಾಗಕ್ಕೆ, ½ ಟೀಸ್ಪೂನ್ ಮೇಯೊವನ್ನು ಹರಡಿ.
  • ರೋಟಿಯ ಮೇಲೆ ಉದಾರವಾಗಿ ಚೆಡ್ಡಾರ್ ಚೀಸ್ ಅನ್ನು ತುರಿಯಿರಿ.
  • ಈಗ ಇದರ ಅರ್ಧ ಭಾಗಕ್ಕೆ, ತಯಾರಿಸಿದ ತರಕಾರಿ ಸ್ಟಫಿಂಗ್ಅನ್ನು ಹರಡಿ.
  • ಈಗ ರೋಟಿಯ ಅರ್ಧವನ್ನು ಮಡಿಚಿ, ಸ್ಟಫಿಂಗ್ಅನ್ನು ಹಿಸುಕದೆ ನಿಧಾನವಾಗಿ ಒತ್ತಿರಿ.
  • ನಂತರ, ಒಂದು ಬದಿಯಲ್ಲಿ ½ ಚಮಚ ಬೆಣ್ಣೆಯನ್ನು ಹರಡಿ.
  • ಮಧ್ಯಮ ಜ್ವಾಲೆಯಲ್ಲಿ ತವಾ ಇಟ್ಟು, ರೋಟಿ ಸ್ಯಾಂಡ್‌ವಿಚ್ ಅನ್ನು ಟೋಸ್ಟ್ ಮಾಡಿ.
  • ಸ್ಯಾಂಡ್‌ವಿಚ್ ನ ಎರಡೂ ಬದಿಗಳಲ್ಲಿ ಬೆಣ್ಣೆಯನ್ನು ಹರಡಿ, ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವಂತೆ ಟೋಸ್ಟ್ ಮಾಡಲು ಖಚಿತಪಡಿಸಿಕೊಳ್ಳಿ.
  • ಅಂತಿಮವಾಗಿ, ಸಾಸ್‌ನೊಂದಿಗೆ ರೋಟಿ ಸ್ಯಾಂಡ್‌ವಿಚ್ ಅನ್ನು ಆನಂದಿಸಿ ಅಥವಾ ಮಕ್ಕಳ ಊಟದ ಡಬ್ಬಕ್ಕೆ ಪ್ಯಾಕ್ ಮಾಡಿ.