Go Back
+ servings
nankhatai recipe
Print Pin
No ratings yet

ನಾನ್ ಖಟಾಯ್ ರೆಸಿಪಿ | nankhatai in kannada | ನಾನ್ ಖಟಾಯಿ ಬಿಸ್ಕತ್ತು

ಸುಲಭ ನಾನ್ ಖಟಾಯ್ ಪಾಕವಿಧಾನ | ನಾನ್ ಖಟಾಯಿ ಬಿಸ್ಕತ್ತು
ಕೋರ್ಸ್ ಕುಕೀಸ್
ಪಾಕಪದ್ಧತಿ ಭಾರತೀಯ
ಕೀವರ್ಡ್ ನಾನ್ ಖಟಾಯ್ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 15 minutes
ಒಟ್ಟು ಸಮಯ 25 minutes
ಸೇವೆಗಳು 14 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಕುಕೀ ಹಿಟ್ಟಿಗೆ:

  • ½ ಕಪ್ (120 ಮಿಲಿ) ತುಪ್ಪ
  • ¾ ಕಪ್ (80 ಗ್ರಾಂ) ಪುಡಿ ಸಕ್ಕರೆ
  • 1 ಕಪ್ (155 ಗ್ರಾಂ) ಮೈದಾ
  • ¾ ಕಪ್ (90 ಗ್ರಾಂ) ಬೇಸನ್ / ಕಡಲೆ ಹಿಟ್ಟು
  • 2 ಟೇಬಲ್ಸ್ಪೂನ್ (20 ಗ್ರಾಂ) ರವೆ /ಸೂಜಿ ಸಣ್ಣ(ನಯವಾದ)
  • ½ ಟೀಸ್ಪೂನ್ ಬೇಕಿಂಗ್ ಪೌಡರ್
  • ¼ ಟೀಸ್ಪೂನ್ ಏಲಕ್ಕಿ ಪುಡಿ
  • ಪಿಂಚ್ ಉಪ್ಪು
  • 2 ಟೇಬಲ್ಸ್ಪೂನ್ ಹಾಲು

ಕುಕ್ಕರ್‌ನಲ್ಲಿ ಬೇಕ್ ಮಾಡಲು:

  • 2 ಕಪ್ ಉಪ್ಪು ಅಥವಾ ಮರಳು

ಸೂಚನೆಗಳು

  • ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ ½ ಕಪ್ ತುಪ್ಪ ತೆಗೆದುಕೊಳ್ಳಿ. ದಪ್ಪ ತುಪ್ಪವನ್ನು ತೆಗೆದುಕೊಳ್ಳಲು ಖಚಿತಪಡಿಸಿಕೊಳ್ಳಿ.
  • ¾ ಕಪ್ ಪುಡಿ ಸಕ್ಕರೆ ಸೇರಿಸಿ ಮತ್ತು ಕಡಿಮೆ ವೇಗದಲ್ಲಿ ಬೀಟ್ ಮಾಡಿ.
  • ತುಪ್ಪ ಮತ್ತು ಸಕ್ಕರೆಯನ್ನು ಬೀಟ್ ಮಾಡಲು ನೀವು ವಿಸ್ಕರ್ ಬಳಸಬಹುದು.
  • ಮಿಶ್ರಣವು ಕ್ರೀಮಿ ಮತ್ತು ಬಿಳಿ ಬಣ್ಣಕ್ಕೆ ತಿರುಗುವವರೆಗೆ ಬೀಟ್ ಮಾಡಿ.
  • ಒಂದು ಜರಡಿ ಇರಿಸಿ, 1 ಕಪ್ ಮೈದಾ, ¾ ಕಪ್ ಬೇಸನ್, 2 ಟೀಸ್ಪೂನ್ ರವೆ, ½ ಟೀಸ್ಪೂನ್ ಬೇಕಿಂಗ್ ಪೌಡರ್, ¼ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು ಪಿಂಚ್ ಉಪ್ಪು ಸೇರಿಸಿ.
  • ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಹಿಟ್ಟು ಜರಡಿ.
  • ಹಿಟ್ಟು ತೇವವಾಗಿದೆಯೇ ಎಂದು ಖಚಿತಪಡಿಸಿಕೊಂಡು ಹಿಸುಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಹಿಟ್ಟು ಒಣಗಿದ್ದರೆ 2 ಟೀಸ್ಪೂನ್ ಹಾಲು ಸೇರಿಸಿ ಮಿಶ್ರಣ ಮಾಡಿ.
  • ಮೃದುವಾದ ಹಿಟ್ಟನ್ನು ರೂಪಿಸುವ ಮಿಶ್ರಣವನ್ನಾಗಿ ಪಡೆಯಿರಿ.
  • ಪ್ರೆಶರ್ ಕುಕ್ಕರ್‌ನಲ್ಲಿ ಕುಕೀಸ್ ಅನ್ನು ತಯಾರಿಸಲು 1½ ಕಪ್ ಉಪ್ಪನ್ನು ಸೇರಿಸಿ ಮತ್ತು ಸಣ್ಣ ಕಪ್ ಅಥವಾ ಕುಕ್ಕರ್ ರಾಕ್ ಅನ್ನು ಇರಿಸಿ. ಹಾಗೆಯೇ, ಅದರ ಮೇಲೆ ಒಂದು ಪ್ಲೇಟ್ ಅನ್ನು ಇರಿಸಿ.
  • ಗ್ಯಾಸ್ಕೆಟ್ ಮತ್ತು ಶಿಳ್ಳೆ ಇಡದೆ ಕುಕ್ಕರ್ ಮುಚ್ಚಳವನ್ನು ಮುಚ್ಚಿ. 5 ರಿಂದ 10 ನಿಮಿಷಗಳ ಕಾಲ ಬಿಸಿ ಮಾಡಿ. ಪರಿಣಾಮವಾಗಿ, ಇದು ಪ್ರಿ ಹೀಟೆಡ್ ಓವೆನ್ ನ ವಾತಾವರಣವನ್ನು ನೀಡುತ್ತದೆ.
  • ಈಗ ಚೆಂಡಿನ ಗಾತ್ರದ ಹಿಟ್ಟನ್ನು ತೆಗೆದು, ರೋಲ್ ಮಾಡಿ ಮಧ್ಯದಲ್ಲಿ ಡೆಂಟ್ ಮಾಡಿ.
  • ಕುಕೀಸ್ ಹಿಟ್ಟನ್ನು ಪ್ಲೇಟ್ ಮೇಲೆ ಇರಿಸಿ. ನಡುವೆ ಉತ್ತಮ ಜಾಗವನ್ನು ನೀಡಿ.
  • ಕತ್ತರಿಸಿದ ಗೋಡಂಬಿ ಬೀಜಗಳನ್ನು ಕುಕಿಸ್ ನಲ್ಲಿ ಸ್ಟಫ್ ಮಾಡಿ.
  • ಈಗ ಮಧ್ಯಮ ಉರಿಯಲ್ಲಿ 15 ನಿಮಿಷಗಳ ಕಾಲ ಮುಚ್ಚಿ ಬೇಯಿಸಿ. ನೀವು ಪರ್ಯಾಯವಾಗಿ, 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 15 ನಿಮಿಷಗಳ ಕಾಲ ಪ್ರಿ ಹೀಟೆಡ್ ಓವೆನ್ ನಲ್ಲಿ ಬೇಕ್ ಮಾಡಬಹುದು.
  • ಕುಕೀ ಆರಂಭದಲ್ಲಿ ಮೃದುವಾಗಿರುತ್ತದೆ. ಸಂಪೂರ್ಣವಾಗಿ ತಣ್ಣಗಾದ ನಂತರ ನಾನ್ ಖಟಾಯ್ ಕುಕೀ ಗರಿಗರಿಯಾಗಿ ಕುರುಕುಲಾದಂತೆ ತಿರುಗುತ್ತದೆ.
  • ಅಂತಿಮವಾಗಿ, ನಾನ್ ಖಟಾಯ್ ಅನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ, ಒಂದು ವಾರ ಆನಂದಿಸಿ.