ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ ¼ ಕಪ್ ಕಸ್ಟರ್ಡ್ ಪೌಡರ್ ಮತ್ತು 4 ಕಪ್ ಹಾಲು ತೆಗೆದುಕೊಳ್ಳಿ.
ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
ಮಿಶ್ರಣವನ್ನು ದೊಡ್ಡ ಕಡಾಯಿಗೆ ಸುರಿಯಿರಿ.
ನಿರಂತರವಾಗಿ ಕೈ ಆಡಿಸುತ್ತಾ ಮಧ್ಯಮ ಜ್ವಾಲೆಯ ಮೇಲೆ ಬೇಯಿಸಿ.
ಮಿಶ್ರಣವು ಕುದಿಯಲು ಬಂದ ನಂತರ ಬಾದಮ್ ಪುಡಿಯನ್ನು ಸೇರಿಸಿ. ಬಾದಮ್ ಪುಡಿಯನ್ನು ತಯಾರಿಸಲು, ¼ ಕಪ್ ಬಾದಾಮಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.
ಈಗ, ¼ ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮಿಶ್ರಣವು ದಪ್ಪವಾಗುವವರೆಗೆ ಕುದಿಸುವುದನ್ನು ಮುಂದುವರಿಸಿ. ಸರಿಸುಮಾರು 6 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಸಂಪೂರ್ಣವಾಗಿ ತಣ್ಣಗಾಗಿಸಿ, ದೊಡ್ಡ ಬಟ್ಟಲಿಗೆ ವರ್ಗಾಯಿಸಿ.
30 ನಿಮಿಷಗಳ ಕಾಲ ಅಥವಾ ಕಸ್ಟರ್ಡ್ ಮತ್ತಷ್ಟು ದಪ್ಪವಾಗುವವರೆಗೆ ಮುಚ್ಚಿ ಫ್ರಿಡ್ಜ್ ನಲ್ಲಿಡಿ.