Go Back
+ servings
how to make jeera rice
Print Pin
5 from 14 votes

ಜೀರಾ ರೈಸ್ ರೆಸಿಪಿ | jeera rice in kannada | ಜೀರಾ ಪುಲಾವ್

ಸುಲಭ ಜೀರಾ ರೈಸ್ ಪಾಕವಿಧಾನ | ಜೀರಾ ರೈಸ್ ಮಾಡುವುದು ಹೇಗೆ | ಜೀರಾ ಪುಲಾವ್
ಕೋರ್ಸ್ ಅನ್ನ - ರೈಸ್
ಪಾಕಪದ್ಧತಿ ಉತ್ತರ ಭಾರತೀಯ
ಕೀವರ್ಡ್ ಜೀರಾ ರೈಸ್ ರೆಸಿಪಿ
ತಯಾರಿ ಸಮಯ 5 minutes
ಅಡುಗೆ ಸಮಯ 10 minutes
ಒಟ್ಟು ಸಮಯ 15 minutes
ಸೇವೆಗಳು 2 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಬೇಯಿಸಿದ ಬಾಸ್ಮತಿ ಅಕ್ಕಿ ಬಳಸಿ (ದಾರಿ 1):

  • ½ ಕಪ್ ಬಾಸ್ಮತಿ ಅಕ್ಕಿ
  • 1 ಟೀಸ್ಪೂನ್ ಎಣ್ಣೆ
  • ½ ಟೀಸ್ಪೂನ್ ಉಪ್ಪು
  • 1 ಟೀಸ್ಪೂನ್ ತುಪ್ಪ
  • 1 ಟೀಸ್ಪೂನ್ ಜೀರಿಗೆ / ಜೀರಾ
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿದ
  • ನೀರು ನೆನೆಸಲು ಮತ್ತು ಕುದಿಸಲು

ಪ್ರೆಶರ್ ಕುಕ್ಕರ್ ಬಳಸಿ (ದಾರಿ 2):

  • 1 ಟೀಸ್ಪೂನ್ ತುಪ್ಪ
  • 1 ಟೀಸ್ಪೂನ್ ಜೀರಿಗೆ / ಜೀರಾ
  • ½ ಕಪ್ ಬಾಸ್ಮತಿ ಅಕ್ಕಿ
  • 1 ಕಪ್ ನೀರು
  • ¼ ಟೀಸ್ಪೂನ್ ಉಪ್ಪು
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿದ

ಸೂಚನೆಗಳು

ಬೇಯಿಸಿದ ಬಾಸ್ಮತಿ ಅಕ್ಕಿ ಬಳಸಿ:

  • ಮೊದಲನೆಯದಾಗಿ, ½ ಕಪ್ ಬಾಸ್ಮತಿ ಅಕ್ಕಿಯನ್ನು 20 ನಿಮಿಷಗಳ ಕಾಲ ನೆನೆಸಿಡಿ.
  • ಈಗ ದೊಡ್ಡ ಪಾತ್ರೆಯಲ್ಲಿ 4 ಕಪ್ ನೀರನ್ನು ಕುದಿಸಿ.
  • ನೀರು ಕುದಿಯಲು ಬಂದ ನಂತರ ನೆನೆಸಿದ ಅಕ್ಕಿಯೊಂದಿಗೆ 1 ಟೀಸ್ಪೂನ್ ಎಣ್ಣೆ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
  • ಚೆನ್ನಾಗಿ ಮಿಶ್ರಣ ಮಾಡಿ 8 ನಿಮಿಷ ಕುದಿಸಿ.
  • ಅಕ್ಕಿ ಸಂಪೂರ್ಣವಾಗಿ ಬೇಯುವವರೆಗೆ ಕುದಿಸಿ.
  • ಬಾಸ್ಮತಿ ಅಕ್ಕಿಯಿಂದ ನೀರನ್ನು ಹರಿಸಿ.
  • ಮತ್ತಷ್ಟು ಅಡುಗೆ ಮಾಡುವುದನ್ನು ತಡೆಯಲು 1 ಕಪ್ ತಣ್ಣೀರನ್ನು ಸುರಿಯಿರಿ. 15 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
  • ಈಗ ದೊಡ್ಡ ಕಡಾಯಿಯಲ್ಲಿ, 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ,1 ಟೀಸ್ಪೂನ್ ಜೀರಿಗೆ ಸೇರಿಸಿ.
  • ಈಗ ಬೇಯಿಸಿದ ಬಾಸ್ಮತಿ ಅಕ್ಕಿಯನ್ನು ಸೇರಿಸಿ. ನೀರನ್ನು ಸಂಪೂರ್ಣವಾಗಿ ಹರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ನಂತರ, ¼ ಟೀಸ್ಪೂನ್ ಉಪ್ಪು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ.
  • ಅಂತಿಮವಾಗಿ, 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ದಾಲ್ ನೊಂದಿಗೆ ಜೀರಾ ರೈಸ್ ಅನ್ನು ಆನಂದಿಸಿ.

ಪ್ರೆಶರ್ ಕುಕ್ಕರ್ ಬಳಸಿ:

  • ಮೊದಲನೆಯದಾಗಿ, ಕುಕ್ಕರ್‌ನಲ್ಲಿ 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ, 1 ಟೀಸ್ಪೂನ್ ಜೀರಿಗೆ ಸೇರಿಸಿ.
  • ಈಗ ½ ಕಪ್ ಬಾಸ್ಮತಿ ಅಕ್ಕಿ (20 ನಿಮಿಷಗಳ ಕಾಲ ನೆನೆಸಿ) ಸೇರಿಸಿ ಮತ್ತು ಒಂದು ನಿಮಿಷ ಹುರಿಯಿರಿ.
  • 1 ಕಪ್ ನೀರು, ¼ ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಮುಚ್ಚಿ, ಪ್ರೆಶರ್ ಕುಕ್ಕರ್ ನಲ್ಲಿ ಮಧ್ಯಮ ಜ್ವಾಲೆಯ ಮೇಲೆ 2 ಸೀಟಿಗಳನ್ನು ಬರಿಸಿ.
  • ಪ್ರೆಷರ್ ಹೋದ ನಂತರ, ಕುಕ್ಕರ್ ತೆರೆಯಿರಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ.
  • ಅಂತಿಮವಾಗಿ, 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ದಾಲ್ ನೊಂದಿಗೆ ಜೀರಾ ರೈಸ್ ಅನ್ನು ಆನಂದಿಸಿ.