Go Back
+ servings
arachuvitta sambar recipe
Print Pin
No ratings yet

ಅರಚುವಿತ್ತಾ ಸಾಂಬಾರ್ ರೆಸಿಪಿ | arachuvitta sambar in kannada

ಸುಲಭ ಅರಚುವಿತ್ತಾ ಸಾಂಬಾರ್ ಪಾಕವಿಧಾನ | ಅರೈತು ವಿತ್ತಾ ಸಾಂಬಾರ್ | ತಾಜಾ ರುಬ್ಬಿ ತಯಾರಿಸಿದ ಸಾಂಬಾರ್ ಪಾಕವಿಧಾನ
ಕೋರ್ಸ್ ಸಾಂಬಾರ್
ಪಾಕಪದ್ಧತಿ ತಮಿಳುನಾಡು
ಕೀವರ್ಡ್ ಅರಚುವಿತ್ತಾ ಸಾಂಬಾರ್ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 30 minutes
ಒಟ್ಟು ಸಮಯ 40 minutes
ಸೇವೆಗಳು 5 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಸಾಂಬಾರ್ ಮಸಾಲಕ್ಕಾಗಿ:

  • ½ ಟೇಬಲ್ಸ್ಪೂನ್ ಎಳ್ಳು ಎಣ್ಣೆ
  • 2 ಟೀಸ್ಪೂನ್ ಕೊತ್ತಂಬರಿ ಬೀಜ
  • 1 ಟೀಸ್ಪೂನ್ ಕಡ್ಲೆ ಬೇಳೆ
  • ¼ ಟೀಸ್ಪೂನ್ ಮೇಥಿ
  • ½ ಟೀಸ್ಪೂನ್ ಕರಿ ಮೆಣಸು
  • ½ ಟೀಸ್ಪೂನ್ ಜೀರಿಗೆ
  • 6 ಒಣಗಿದ ಕೆಂಪು ಮೆಣಸಿನಕಾಯಿ
  • ¼ ಕಪ್ ತೆಂಗಿನಕಾಯಿ (ತುರಿದ)
  • ½ ಕಪ್ ನೀರು (ರುಬ್ಬಲು)

ಇತರ ಪದಾರ್ಥಗಳು:

  • 2 ಟೇಬಲ್ಸ್ಪೂನ್ ಎಳ್ಳು ಎಣ್ಣೆ
  • 1 ಟೀಸ್ಪೂನ್ ಸಾಸಿವೆ
  • ¼ ಟೀಸ್ಪೂನ್ ಮೇಥಿ
  • 2 ಒಣಗಿದ ಕೆಂಪು ಮೆಣಸಿನಕಾಯಿ
  • ಕೆಲವು ಕರಿಬೇವಿನ ಎಲೆಗಳು
  • 10 ಶಾಲೋಟ್ಸ್
  • 4 ತುಂಡು ಡ್ರಮ್ ಸ್ಟಿಕ್
  • ½ ಬದನೆಕಾಯಿ (ಕತ್ತರಿಸಿದ)
  • ½ ಮೂಲಂಗಿ (ಕತ್ತರಿಸಿದ)
  • ½ ಟೀಸ್ಪೂನ್ ಅರಿಶಿನ
  • ½ ಟೀಸ್ಪೂನ್ ಉಪ್ಪು
  • 3 ಕಪ್ ನೀರು
  • ½ ಕಪ್ ಹುಣಸೆಹಣ್ಣಿನ ಸಾರ
  • ½ ಟೀಸ್ಪೂನ್ ಬೆಲ್ಲ
  • 1 ಕಪ್ ತೊಗರಿ ಬೇಳೆ (ಬೇಯಿಸಿದ)
  • ¾ ಟೀಸ್ಪೂನ್ ಉಪ್ಪು
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)

ಸೂಚನೆಗಳು

ಸಾಂಬಾರ್ ಮಸಾಲಾ ಪೇಸ್ಟ್ ತಯಾರಿಸುವುದು ಹೇಗೆ:

  • ಮೊದಲನೆಯದಾಗಿ, ಪ್ಯಾನ್ ನಲ್ಲಿ ½ ಟೇಬಲ್ಸ್ಪೂನ್ ಎಳ್ಳು ಎಣ್ಣೆ ಬಿಸಿ ಮಾಡಿ, 2 ಟೀಸ್ಪೂನ್ ಕೊತ್ತಂಬರಿ ಬೀಜ, 1 ಟೀಸ್ಪೂನ್ ಕಡ್ಲೆ ಬೇಳೆ, ¼ ಟೀಸ್ಪೂನ್ ಮೇಥಿ, ½ ಟೀಸ್ಪೂನ್ ಪೆಪ್ಪರ್, ½ ಟೀಸ್ಪೂನ್ ಜೀರಿಗೆ ಮತ್ತು 6 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
  • ಮಸಾಲೆಗಳು ಪರಿಮಳ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
  • ¼ ಕಪ್ ತೆಂಗಿನಕಾಯಿ ಸೇರಿಸಿ ಮತ್ತು ತೆಂಗಿನಕಾಯಿ ಪರಿಮಳ ಬರುವವರೆಗೆ ಒಂದು ನಿಮಿಷ ಹುರಿಯಿರಿ.
  • ಸಂಪೂರ್ಣವಾಗಿ ತಣ್ಣಗಾಗಿಸಿ, ಮತ್ತು ಮಿಕ್ಸಿ ಜಾರ್‌ಗೆ ವರ್ಗಾಯಿಸಿ.
  • ½ ಕಪ್ ನೀರು ಸೇರಿಸಿ ಮತ್ತು ರುಬ್ಬಿಕೊಳ್ಳಿ. ಅಂತಿಮವಾಗಿ, ಅರಚುವಿತ್ತಾ ಮಸಾಲ ಪೇಸ್ಟ್ ಸಿದ್ಧವಾಗಿದೆ.

ತಮಿಳು ಶೈಲಿಯ ಮಿಕ್ಸ್ ವೆಜ್ ಸಾಂಬಾರ್ ತಯಾರಿಸುವುದು ಹೇಗೆ:

  • ಮೊದಲನೆಯದಾಗಿ, ಕಡೈ ನಲ್ಲಿ 2 ಟೇಬಲ್ಸ್ಪೂನ್ ಎಳ್ಳು ಎಣ್ಣೆ ಬಿಸಿ ಮಾಡಿ, 1 ಟೀಸ್ಪೂನ್ ಸಾಸಿವೆ, ¼ ಟೀಸ್ಪೂನ್ ಮೇಥಿ, 2 ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ.
  • 10 ಶಾಲೋಟ್ಸ್ ಗಳನ್ನು ಸೇರಿಸಿ ಮತ್ತು ಒಂದು ನಿಮಿಷ ಬೇಯಿಸಿ.
  • 4 ತುಂಡು ಡ್ರಮ್ ಸ್ಟಿಕ್, ½ ಬದನೆಕಾಯಿ, ½ ಮೂಲಂಗಿ, ½ ಟೀಸ್ಪೂನ್ ಅರಿಶಿನ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
  • ತರಕಾರಿಗಳು ಪರಿಮಳ ಬರುವವರೆಗೆ ಒಂದು ನಿಮಿಷ ಬೇಯಿಸಿ.
  • ಈಗ 3 ಕಪ್ ನೀರು ಸುರಿಯಿರಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
  • ಮುಚ್ಚಿ 8 ನಿಮಿಷಗಳ ಕಾಲ ಅಥವಾ ತರಕಾರಿಗಳನ್ನು ಬಹುತೇಕ ಬೇಯುವವರೆಗೆ ಕುದಿಸಿ.
  • ಈಗ, ½ ಕಪ್ ಹುಣಸೆಹಣ್ಣು ಸಾರ ಮತ್ತು ½ ಟೀಸ್ಪೂನ್ ಬೆಲ್ಲ ಸೇರಿಸಿ.
  • ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷ ಅಥವಾ ಹುಣಸೆಹಣ್ಣಿನ ಕಚ್ಚಾ ಪರಿಮಳ ದೂರವಾಗುವವರೆಗೆ ಕುದಿಸಿ.
  • ತಯಾರಾದ ಮಸಾಲಾ ಪೇಸ್ಟ್, 1 ಕಪ್ ತೊಗರಿ ಬೇಳೆ ಮತ್ತು ¾ ಟೀಸ್ಪೂನ್ ಉಪ್ಪು ಸೇರಿಸಿ.
  • ಚೆನ್ನಾಗಿ ಮಿಶ್ರಣ ಮಾಡಿ 3 ನಿಮಿಷ ಅಥವಾ ಎಲ್ಲಾ ರುಚಿಗಳು ಚೆನ್ನಾಗಿ ಹೀರಿಕೊಳ್ಳುವವರೆಗೆ ಕುದಿಸಿ.
  • ಅಂತಿಮವಾಗಿ, 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತು ಬಿಸಿ ಅನ್ನದ ಜೊತೆಗೆ ಅರಚುವಿತ್ತಾ ಸಾಂಬಾರ್ ಅನ್ನು ಆನಂದಿಸಿ.