Go Back
+ servings
achari aloo baingan
Print Pin
No ratings yet

ಅಚಾರೀ ಬೈಂಗನ್ ರೆಸಿಪಿ | achari baingan in kannada | ಬದನೆ ಉಪ್ಪಿನಕಾಯಿ

ಸುಲಭ ಅಚಾರೀ ಬೈಂಗನ್ ಪಾಕವಿಧಾನ | ಅಚಾರೀ ಆಲೂ ಬೈಂಗನ್ | ಬದನೆ ಉಪ್ಪಿನಕಾಯಿ
ಕೋರ್ಸ್ ಕರಿ
ಪಾಕಪದ್ಧತಿ ಪಂಜಾಬಿ
ಕೀವರ್ಡ್ ಅಚಾರೀ ಬೈಂಗನ್ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 30 minutes
ಒಟ್ಟು ಸಮಯ 40 minutes
ಸೇವೆಗಳು 5 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಉಪ್ಪಿನಕಾಯಿ ಮಸಾಲಾಗೆ:

  • 1 ಟೀಸ್ಪೂನ್ ಸಾಸಿವೆ
  • 2 ಟೀಸ್ಪೂನ್ ಕೊತ್ತಂಬರಿ ಬೀಜಗಳು
  • 1 ಟೀಸ್ಪೂನ್ ಫೆನ್ನೆಲ್/ ಸೋಂಪು
  • ½ ಟೀಸ್ಪೂನ್ ಕಲೊಂಜಿ
  • 1 ಟೀಸ್ಪೂನ್ ಜೀರಿಗೆ
  • ½ ಟೀಸ್ಪೂನ್ ಪೆಪ್ಪರ್
  • ¼ ಟೀಸ್ಪೂನ್ ಮೇಥಿ
  • 2 ಒಣಗಿದ ಕೆಂಪು ಮೆಣಸಿನಕಾಯಿ

ಕರಿಗಾಗಿ:

  • 2 ಟೇಬಲ್ಸ್ಪೂನ್ ಎಣ್ಣೆ
  • 2 ಬದನೆ (ಕತ್ತರಿಸಿದ)
  • 2 ಆಲೂಗಡ್ಡೆ (ಕತ್ತರಿಸಿದ)
  • 2 ಟೀಸ್ಪೂನ್ ಎಣ್ಣೆ
  • 1 ಬೇ ಲೀಫ್
  • 1 ಟೀಸ್ಪೂನ್ ಜೀರಿಗೆ
  • 1 ಇಂಚಿನ ದಾಲ್ಚಿನ್ನಿ
  • 2 ಏಲಕ್ಕಿ
  • ಪಿಂಚ್ ಹಿಂಗ್
  • 1 ಈರುಳ್ಳಿ (ಸಣ್ಣಗೆ ಕತ್ತರಿಸಿದ)
  • 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ½ ಟೀಸ್ಪೂನ್ ಅರಿಶಿನ
  • 1 ಟೀಸ್ಪೂನ್ ಚಿಲ್ಲಿ ಪೌಡರ್
  • ½ ಟೀಸ್ಪೂನ್ ಗರಂ ಮಸಾಲಾ
  • ½ ಟೀಸ್ಪೂನ್ ಉಪ್ಪು
  • 2 ಟೊಮೆಟೊ (ಸಣ್ಣಗೆ ಕತ್ತರಿಸಿದ)
  • 1 ಕಪ್ ನೀರು
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)
  • 1 ಟೀಸ್ಪೂನ್ ಕಸೂರಿ ಮೇಥಿ (ಪುಡಿಮಾಡಿದ)

ಸೂಚನೆಗಳು

ಉಪ್ಪಿನಕಾಯಿ ಮಸಾಲವನ್ನು ಮನೆಯಲ್ಲಿ ಹೇಗೆ ತಯಾರಿಸವುದು:

  • ಮೊದಲಿಗೆ, ಭಾರೀ-ತಳದ ಪ್ಯಾನ್ 1 ಟೀಸ್ಪೂನ್ ಸಾಸಿವೆ, 2 ಟೀಸ್ಪೂನ್ ಕೊತ್ತಂಬರಿ ಬೀಜಗಳು, 1 ಟೀಸ್ಪೂನ್ ಫೆನ್ನೆಲ್ ಮತ್ತು ½ ಟೀಸ್ಪೂನ್ ಕಲೊಂಜಿಯನ್ನು ತೆಗೆದುಕೊಳ್ಳಿ.
  • 1 ಟೀಸ್ಪೂನ್ ಜೀರಿಗೆ, ½ ಟೀಸ್ಪೂನ್ ಪೆಪ್ಪರ್, ¼ ಟೀಸ್ಪೂನ್ ಮೇಥಿ ಮತ್ತು 2 ಒಣಗಿದ ಕೆಂಪು ಮೆಣಸು ಸೇರಿಸಿ.
  • ಮಸಾಲೆಗಳು ಪರಿಮಳ ಬರುವ ತನಕ ಕಡಿಮೆ ಜ್ವಾಲೆಯ ಮೇಲೆ ಒಣ ಹುರಿಯಿರಿ.
  • ಸಂಪೂರ್ಣವಾಗಿ ತಣ್ಣಗಾದ ನಂತರ ಉತ್ತಮ ಪುಡಿಗೆ ರುಬ್ಬಿಕೊಳ್ಳಿ. ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಮಸಾಲಾ ಸಿದ್ಧವಾಗಿದೆ.

ಅಚಾರೀ ಆಲೂ ಬೈಂಗನ್ ಹೇಗೆ ತಯಾರಿಸುವುದು:

  • ಮೊದಲಿಗೆ, ಒಂದು ದೊಡ್ಡ ಕಡೈ ನಲ್ಲಿ 2 ಟೇಬಲ್ಸ್ಪೂನ್ ಎಣ್ಣೆ ಮತ್ತು 2 ಬದನೆ ಸೇರಿಸಿ.
  • ಮಧ್ಯಮ ಜ್ವಾಲೆಯ ಮೇಲೆ ನಿಧಾನವಾಗಿ ಹುರಿಯಿರಿ.
  • ಬದನೆ ಮೃದು ಕಂದು ಚುಕ್ಕೆಗಳು ಕಾಣಿಸಿಕೊಳ್ಳುವವರೆಗೂ ರೋಸ್ಟ್ ಮಾಡಿ.
  • ಈಗ ½ ಟೀಸ್ಪೂನ್ ಉಪ್ಪು ಸೇರಿಸಿ ಮತ್ತು ಒಂದು ನಿಮಿಷಕ್ಕೆ ಸಾಟ್ ಮಾಡಿ. ಇದು ಬದನೆಯ ಪರಿಮಳವನ್ನು ಹೆಚ್ಚಿಸುತ್ತದೆ.
  • ಹುರಿದ ಬ್ರಿಂಜಾಲ್ ಅನ್ನು ಪಕ್ಕಕ್ಕೆ ಇರಿಸಿ.
  • ಈಗ ಅದೇ ಎಣ್ಣೆಯಲ್ಲಿ ಮಧ್ಯಮ ಜ್ವಾಲೆಯ ಮೇಲೆ 2 ಆಲೂಗಡ್ಡೆ ಸೇರಿಸಿ ಮತ್ತು ಹುರಿಯಿರಿ.
  • ಆಲೂ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗಿ ತಿರುಗುವ ತನಕ ಏಕರೂಪವಾಗಿ ರೋಸ್ಟ್ ಮಾಡಿ.
  • ಆಲೂ ಇನ್ನೊಂದು ಬಟ್ಟಲಿನಲ್ಲಿ ತೆಗೆಯಿರಿ. ಪಕ್ಕಕ್ಕೆ ಇರಿಸಿ.
  • ಅದೇ ಕಡೈನಲ್ಲಿ 2 ಟೇಬಲ್ಸ್ಪೂನ್ ಎಣ್ಣೆ ಸೇರಿಸಿ. 1 ಬೇ ಎಲೆ, 1 ಟೀಸ್ಪೂನ್ ಜೀರಿಗೆ, 1 ಇಂಚಿನ ದಾಲ್ಚಿನ್ನಿ, 2 ಏಲಕ್ಕಿ ಮತ್ತು ಪಿಂಚ್ ಹಿಂಗ್ ಸೇರಿಸಿ.
  • ಮಸಾಲೆಗಳು ಪರಿಮಳ ಬರುವವವರೆಗೂ ಕಡಿಮೆ ಜ್ವಾಲೆಯ ಮೇಲೆ ಹುರಿಯಿರಿ.
  • ಈಗ 1 ಈರುಳ್ಳಿ ಮತ್ತು 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
  • ಈರುಳ್ಳಿ ಚಿನ್ನದ ಕಂದು ಬಣ್ಣ ಬರುವ ತನಕ ಹುರಿಯಿರಿ.
  • ಜ್ವಾಲೆಯನ್ನು ಕಡಿಮೆ ಇರಿಸಿ, ಉಪ್ಪಿನಕಾಯಿ ಮಸಾಲಾ, ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಗರಂ ಮಸಾಲಾ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
  • ಮಸಾಲೆಗಳು ಪರಿಮಳ ಬರುವವರೆಗೂ ಹುರಿಯಿರಿ.
  •  2 ಟೊಮೇಟೊ ಸೇರಿಸಿ ಮತ್ತು ಟೊಮೇಟೊ ಮೃದುವಾಗಿ ತಿರುಗವವರೆಗೂ ಬೇಯಿಸಿ.
  • ಹುರಿದ ಬದನೆ ಮತ್ತು ಆಲೂ ಸೇರಿಸಿ.
  • ಬ್ರಿಂಜಾಲ್ ಅನ್ನು ಮುರಿಯದೇ ನಿಧಾನವಾಗಿ ಮಿಶ್ರಣ ಮಾಡಿ.
  • 1 ಕಪ್ ನೀರನ್ನು ಸೇರಿಸಿ ಮತ್ತು ಅಗತ್ಯವಿರುವಂತೆ ಸ್ಥಿರತೆಯನ್ನು ಸರಿಹೊಂದಿಸಿ.
  • ಮುಚ್ಚಿ 10 ನಿಮಿಷಗಳ ಕಾಲ, ಅಥವಾ ಬದನೆ ಪರಿಮಳವನ್ನು ಹೀರಿಕೊಳ್ಳುವವರೆಗೂ ಸಿಮ್ಮರ್ ನಲ್ಲಿಡಿ.
  • ಈಗ 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು, 1 ಟೀಸ್ಪೂನ್ ಕಸೂರಿ ಮೇಥಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಅಂತಿಮವಾಗಿ, ರೋಟಿ ಅಥವಾ ಅನ್ನದೊಂದಿಗೆ ಅಚಾರೀ ಆಲೂ ಬೈಂಗನ್ ಆನಂದಿಸಿ.