Go Back
+ servings
aloo ka halwa recipe
Print Pin
No ratings yet

ಆಲೂ ಕಾ ಹಲ್ವಾ ರೆಸಿಪಿ | aloo ka halwa in kannada | ಆಲೂಗಡ್ಡೆ ಹಲ್ವಾ

ಸುಲಭ ಆಲೂ ಕಾ ಹಲ್ವಾ ಪಾಕವಿಧಾನ | ಆಲೂಗಡ್ಡೆ ಹಲ್ವಾ | ಆಲೂ ಹಲ್ವಾ
ಕೋರ್ಸ್ ಸಿಹಿ
ಪಾಕಪದ್ಧತಿ ಉತ್ತರ ಭಾರತೀಯ
ಕೀವರ್ಡ್ ಆಲೂ ಕಾ ಹಲ್ವಾ ರೆಸಿಪಿ
ತಯಾರಿ ಸಮಯ 5 minutes
ಅಡುಗೆ ಸಮಯ 15 minutes
ಒಟ್ಟು ಸಮಯ 20 minutes
ಸೇವೆಗಳು 8 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

  • 5 ಆಲೂಗಡ್ಡೆ / ಆಲೂ
  • ½ ಕಪ್ ತುಪ್ಪ
  • 1 ಕಪ್ ಸಕ್ಕರೆ
  • ¼ ಟೀಸ್ಪೂನ್ ಕೇಸರಿ ಆಹಾರ ಬಣ್ಣ
  • ¼ ಟೀಸ್ಪೂನ್ ಏಲಕ್ಕಿ ಪುಡಿ

ಒಣ ಹಣ್ಣುಗಳನ್ನು ಹುರಿಯಲು:

  • 1 ಟೇಬಲ್ಸ್ಪೂನ್ ತುಪ್ಪ
  • 2 ಟೇಬಲ್ಸ್ಪೂನ್ ಒಣದ್ರಾಕ್ಷಿ
  • 2 ಟೇಬಲ್ಸ್ಪೂನ್ ಗೋಡಂಬಿ (ಕತ್ತರಿಸಿದ)
  • 2 ಟೇಬಲ್ಸ್ಪೂನ್ ಬಾದಾಮಿ (ಕತ್ತರಿಸಿದ)

ಸೂಚನೆಗಳು

  • ಮೊದಲಿಗೆ, ಪ್ರೆಷರ್ ಕುಕ್ಕರ್ ನಲ್ಲಿ 5 ಆಲೂಗಡ್ಡೆ ತೆಗೆದುಕೊಂಡು 5 ಸೀಟಿ ಬರಿಸಿ.
  • ಆಲೂಗಡ್ಡೆ ಸಿಪ್ಪೆಯನ್ನು ತೆಗೆದು ತುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
  • ದೊಡ್ಡ ಕಡೈನಲ್ಲಿ ½ ಕಪ್ ತುಪ್ಪ ತೆಗೆದುಕೊಂಡು ಬೇಯಿಸಿದ ಮತ್ತು ತುರಿದ ಆಲೂ ಸೇರಿಸಿ.
  • 5 ನಿಮಿಷಗಳ ಕಾಲ ಅಥವಾ ಆಲೂವಿನ ಬಣ್ಣ ಸ್ವಲ್ಪಮಟ್ಟಿಗೆ ಬದಲಾಗುವವರೆಗೂ ಹುರಿಯಿರಿ.
  • ಈಗ 1 ಕಪ್ ಸಕ್ಕರೆ ಮತ್ತು ¼ ಟೀಸ್ಪೂನ್ ಕೇಸರಿ ಆಹಾರ ಬಣ್ಣ ಸೇರಿಸಿ.
  • ಮಧ್ಯಮ ಜ್ವಾಲೆಯಲ್ಲಿಡಿ ಮತ್ತು ನಿರಂತರವಾಗಿ ಕೈ ಆಡಿಸಿ. ಸಕ್ಕರೆ ಕರಗಲು ಪ್ರಾರಂಭಿಸುತ್ತದೆ.
  • ತುಪ್ಪ ಬೇರ್ಪಡಿಸುವವರೆಗೂ ಮಧ್ಯಮ ಜ್ವಾಲೆಯ ಮೇಲೆ ಬೇಯಿಸಿ. ಇದು ಸುಮಾರು 15 ನಿಮಿಷಗಳು ತೆಗೆದುಕೊಳ್ಳುತ್ತದೆ. ಹಲ್ವಾ ತುಪ್ಪವನ್ನು ಬಿಡುಗಡೆ ಮಾಡಿ ಆಕಾರವನ್ನು ಹಿಡಿದಿಡಲು ಪ್ರಾರಂಭಿಸುತ್ತದೆ. ನಾವು ಹುಡುಕುತ್ತಿರುವ ಪರಿಪೂರ್ಣ ಸ್ಥಿರತೆ ಇದು.
  • ಪ್ಯಾನ್ ನಲ್ಲಿ 1 ಟೇಬಲ್ಸ್ಪೂನ್ ತುಪ್ಪ ಬಿಸಿ ಮಾಡಿ. 2 ಟೇಬಲ್ಸ್ಪೂನ್ ಒಣದ್ರಾಕ್ಷಿ, 2 ಟೇಬಲ್ಸ್ಪೂನ್ ಗೋಡಂಬಿ ಮತ್ತು 2 ಟೇಬಲ್ಸ್ಪೂನ್ ಬಾದಾಮಿ ಸೇರಿಸಿ.
  • ಬೀಜಗಳು ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವ ತನಕ ಕಡಿಮೆ ಜ್ವಾಲೆಯ ಮೇಲೆ ಹುರಿಯಿರಿ.
  • ಹಲ್ವಾಗೆ ಹುರಿದ ಬೀಜಗಳನ್ನು ವರ್ಗಾಯಿಸಿ, ¼ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಅಂತಿಮವಾಗಿ, ಆಲೂ ಕಾ ಹಲ್ವಾವನ್ನು ಹೆಚ್ಚು ಒಣ ಹಣ್ಣುಗಳೊಂದಿಗೆ ಟಾಪ್ ಮಾಡಿ ಆನಂದಿಸಿ.