Go Back
+ servings
roasted capsicum chutney recipe
Print Pin
No ratings yet

ಹುರಿದ ಕ್ಯಾಪ್ಸಿಕಂ ಚಟ್ನಿ ರೆಸಿಪಿ | roasted capsicum chutney in kannada

ಸುಲಭ ಹುರಿದ ಕ್ಯಾಪ್ಸಿಕಂ ಚಟ್ನಿ ಪಾಕವಿಧಾನ | ಸುಟ್ಟ ಕ್ಯಾಪ್ಸಿಕಂ ಚಟ್ನಿ | ರೋಸ್ಟೆಡ್ ಬೆಲ್ ಪೆಪ್ಪರ್ ಚಟ್ನಿ
ಕೋರ್ಸ್ ಚಟ್ನಿ
ಪಾಕಪದ್ಧತಿ ದಕ್ಷಿಣ ಭಾರತೀಯ
ಕೀವರ್ಡ್ ಹುರಿದ ಕ್ಯಾಪ್ಸಿಕಂ ಚಟ್ನಿ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 30 minutes
ಒಟ್ಟು ಸಮಯ 40 minutes
ಸೇವೆಗಳು 5 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ರೋಸ್ಟಿಂಗ್ಗಾಗಿ:

  • 2 ಕ್ಯಾಪ್ಸಿಕಂ
  • 2 ಟೊಮೆಟೊ
  • 1 ಇಡೀ ಬೆಳ್ಳುಳ್ಳಿ

ಮಸಾಲೆ ಮಿಶ್ರಣಕ್ಕಾಗಿ:

  • 2 ಟೀಸ್ಪೂನ್ ಎಣ್ಣೆ
  • 1 ಟೇಬಲ್ಸ್ಪೂನ್ ಉದ್ದಿನ ಬೇಳೆ
  • 1 ಟೇಬಲ್ಸ್ಪೂನ್ ಕಡ್ಲೆ ಬೇಳೆ
  • 1 ಟೀಸ್ಪೂನ್ ಕೊತ್ತಂಬರಿ ಬೀಜಗಳು
  • ½ ಟೀಸ್ಪೂನ್ ಜೀರಿಗೆ ಬೀಜಗಳು
  • 4 ಒಣಗಿದ ಕೆಂಪು ಮೆಣಸಿನಕಾಯಿ
  • ½ ಟೀಸ್ಪೂನ್ ಉಪ್ಪು

ಒಗ್ಗರಣೆಗಾಗಿಗಿ:

  • 2 ಟೇಬಲ್ಸ್ಪೂನ್ ಎಣ್ಣೆ
  • 1 ಟೀಸ್ಪೂನ್ ಸಾಸಿವೆ
  • 1 ಟೀಸ್ಪೂನ್ ಉದ್ದಿನ ಬೇಳೆ
  • ಪಿಂಚ್ ಹಿಂಗ್
  • 1 ಒಣಗಿದ ಕೆಂಪು ಮೆಣಸಿನಕಾಯಿ
  • ¼ ಟೀಸ್ಪೂನ್ ಅರಿಶಿನ
  • 1 ಟೀಸ್ಪೂನ್ ಮೆಣಸಿನ ಪುಡಿ
  • ½ ಕಪ್ ನೀರು

ಸೂಚನೆಗಳು

  • ಮೊದಲಿಗೆ, ಬರ್ನರ್ ನ ಮೇಲೆ 2 ಕ್ಯಾಪ್ಸಿಕಂ, 2 ಟೊಮೆಟೊ ಮತ್ತು 1 ಇಡೀ ಬೆಳ್ಳುಳ್ಳಿಯನ್ನು ಇರಿಸಿ.
  • ಮಧ್ಯಮ ಜ್ವಾಲೆಯನ್ನು ಇಟ್ಟುಕೊಂಡು ಎಲ್ಲಾ ಕಡೆಗಳಲ್ಲಿ ರೋಸ್ಟ್ ಮಾಡಿ.
  • ಸಿಪ್ಪೆಯನ್ನು ಸಂಪೂರ್ಣವಾಗಿ ಸುಟ್ಟುಕೊಳ್ಳಿ, ಇದು ಒಳಗಿನಿಂದ ಬೇಯಿಸಲು ಸಹಾಯ ಮಾಡುತ್ತದೆ.
  • ಈಗ ಸಂಪೂರ್ಣವಾಗಿ ತಂಪಾಗಿಸಿ, ಸಿಪ್ಪೆಯನ್ನು ತೆಗೆಯಿರಿ. ಅಲ್ಲದೆ, ಕ್ಯಾಪ್ಸಿಕಂ ನ ಬೀಜಗಳನ್ನು ತೆಗೆದುಹಾಕಿ.
  • ಒರಟಾದ ತುಂಡುಗಳಾಗಿ ಕತ್ತರಿಸಿ ಮಿಕ್ಸರ್ ಜಾರ್ಗೆ ವರ್ಗಾಯಿಸಿ. ಪಕ್ಕಕ್ಕೆ ಇರಿಸಿ.
  • ಪ್ಯಾನ್ ನಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ. 1 ಟೇಬಲ್ಸ್ಪೂನ್ ಉದ್ದಿನ ಬೇಳೆ, 1 ಟೇಬಲ್ಸ್ಪೂನ್ ಕಡ್ಲೆ ಬೇಳೆ, 1 ಟೀಸ್ಪೂನ್ ಕೊತ್ತಂಬರಿ ಬೀಜಗಳು, ½ ಟೀಸ್ಪೂನ್ ಜೀರಿಗೆ ಮತ್ತು 4 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
  • ಬೇಳೆ ಕುರುಕುಲಾಗಿ ಗೋಲ್ಡನ್ ಬ್ರೌನ್ ಗೆ ತಿರುಗುವವರೆಗೆ ರೋಸ್ಟ್ ಮಾಡಿ.
  • ಸಂಪೂರ್ಣವಾಗಿ ತಣ್ಣಗಾಗಿಸಿ, ಮಿಕ್ಸಿ ಜಾರ್ ಗೆ ವರ್ಗಾಯಿಸಿ.
  • ಅಲ್ಲದೆ, ½ ಟೀಸ್ಪೂನ್ ಉಪ್ಪು ಸೇರಿಸಿ ಮತ್ತು ಉತ್ತಮವಾದ ಪೇಸ್ಟ್ಗೆ ರುಬ್ಬಿಕೊಳ್ಳಿ. ಪಕ್ಕಕ್ಕೆ ಇರಿಸಿ.
  • ಒಗ್ಗರಣೆಯನ್ನು ತಯಾರಿಸಲು, 2 ಟೇಬಲ್ಸ್ಪೂನ್ ಎಣ್ಣೆ ಬಿಸಿ ಮಾಡಿ. 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ, ಪಿಂಚ್ ಹಿಂಗ್ ಮತ್ತು 1 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
  • ಈಗ ¼ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಮೆಣಸಿನ ಪುಡಿ ಸೇರಿಸಿ. ಮಸಾಲೆಗಳನ್ನು ಸುಡದೆ ಒಂದು ನಿಮಿಷ ಹುರಿಯಿರಿ.
  • ತಯಾರಾದ ಕ್ಯಾಪ್ಸಿಕಂ-ಬೆಳ್ಳುಳ್ಳಿ ಪೇಸ್ಟ್ ಗೆ ಒಗ್ಗರಣೆಯನ್ನು ಸುರಿಯಿರಿ ಮತ್ತು ಎಣ್ಣೆ ಬೇರ್ಪಡಿಸುವವರೆಗೂ ಬೇಯಿಸಿ.
  • ಇದಲ್ಲದೆ, ½ ಕಪ್ ನೀರು ಸೇರಿಸಿ ಮತ್ತು ಅಗತ್ಯವಿರುವ ಸ್ಥಿರತೆಯನ್ನು ಸರಿಹೊಂದಿಸಿ.
  • ಎಣ್ಣೆಯು ಚಟ್ನಿಯಿಂದ ಬೇರ್ಪಡಿಸುವವರೆಗೂ ಕುಕ್ ಮಾಡಿ.
  • ಅಂತಿಮವಾಗಿ, ಸುಟ್ಟ ಕ್ಯಾಪ್ಸಿಕಂ ಚಟ್ನಿ ಆನಂದಿಸಲು ಸಿದ್ಧವಾಗಿದೆ ಮತ್ತು ಫ್ರಿಡ್ಜ್ ನಲ್ಲಿಟ್ಟರೆ ಒಂದು ವಾರದವರೆಗೆ ಉಳಿಯುತ್ತದೆ.