Go Back
+ servings
peanut rice recipe
Print Pin
No ratings yet

ಕಡಲೆಕಾಯಿ ಅನ್ನ ರೆಸಿಪಿ | peanut rice in kannada | ಶೇಂಗಾ ಮಸಾಲಾ ರೈಸ್

ಸುಲಭ ಕಡಲೆಕಾಯಿ ಅನ್ನ ಪಾಕವಿಧಾನ | ಶೇಂಗಾ ಮಸಾಲಾ ರೈಸ್
ಕೋರ್ಸ್ ಅನ್ನ - ರೈಸ್
ಪಾಕಪದ್ಧತಿ ದಕ್ಷಿಣ ಭಾರತೀಯ
ಕೀವರ್ಡ್ ಕಡಲೆಕಾಯಿ ಅನ್ನ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 5 minutes
ಒಟ್ಟು ಸಮಯ 15 minutes
ಸೇವೆಗಳು 2 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಮಸಾಲಾ ಪುಡಿಗಾಗಿ:

  • 1 ಟೀಸ್ಪೂನ್ ಎಣ್ಣೆ
  • 2 ಟೇಬಲ್ಸ್ಪೂನ್ ಕಡಲೆಕಾಯಿ (ಹುರಿದ)
  • 1 ಟೀಸ್ಪೂನ್ ಉದ್ದಿನ ಬೇಳೆ
  • 1 ಟೀಸ್ಪೂನ್ ಕಡ್ಲೆ ಬೇಳೆ
  • ½ ಟೀಸ್ಪೂನ್ ಜೀರಿಗೆ / ಜೀರಾ
  • 1 ಟೀಸ್ಪೂನ್ ಎಳ್ಳು
  • 3 ಒಣಗಿದ ಕಾಶ್ಮೀರಿ ಕೆಂಪು ಮೆಣಸಿನಕಾಯಿ
  • 2 ಟೇಬಲ್ಸ್ಪೂನ್ ತೆಂಗಿನಕಾಯಿ (ತುರಿದ)

ಇತರ ಪದಾರ್ಥಗಳು:

  • 2 ಟೀಸ್ಪೂನ್ ಎಣ್ಣೆ
  • 1 ಟೀಸ್ಪೂನ್ ಸಾಸಿವೆ
  • ಕೆಲವು ಕರಿ ಬೇವಿನ ಎಲೆಗಳು
  • 2 ಟೇಬಲ್ಸ್ಪೂನ್ ಕಡಲೆಕಾಯಿ
  • 2 ಕಪ್ ಅನ್ನ
  • ½ ಟೀಸ್ಪೂನ್ ಉಪ್ಪು

ಸೂಚನೆಗಳು

  • ಮೊದಲನೆಯದಾಗಿ, ಪ್ಯಾನ್ ನಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಹುರಿದ 2 ಟೇಬಲ್ಸ್ಪೂನ್ ಕಡಲೆಕಾಯಿ, 1 ಟೀಸ್ಪೂನ್ ಉದ್ದಿನ ಬೇಳೆ, 1 ಟೀಸ್ಪೂನ್ ಕಡ್ಲೆ ಬೇಳೆ, ½ ಟೀಸ್ಪೂನ್ ಜೀರಿಗೆ, 1 ಟೀಸ್ಪೂನ್ ಎಳ್ಳು ಮತ್ತು 3 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
  • ಮಸಾಲೆಗಳು ಪರಿಮಳ ಬರುವ ತನಕ ಕಡಿಮೆ ಜ್ವಾಲೆಯ ಮೇಲೆ ಹುರಿಯಿರಿ.
  • ಈಗ 2 ಟೇಬಲ್ಸ್ಪೂನ್ ತೆಂಗಿನಕಾಯಿ ಸೇರಿಸಿ ಒಂದು ನಿಮಿಷ ಹುರಿಯಿರಿ.
  • ಮಸಾಲೆಗಳನ್ನು ಸಂಪೂರ್ಣವಾಗಿ ತಣ್ಣಗಾಗಿಸಿ, ಯಾವುದೇ ನೀರನ್ನು ಸೇರಿಸದೇ ಉತ್ತಮ ಪುಡಿಗೆ ರುಬ್ಬಿಕೊಳ್ಳಿ. ಪಕ್ಕಕ್ಕೆ ಇರಿಸಿ.
  • ಈಗ ದೊಡ್ಡ ಕಡೈ ನಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, 1 ಟೀಸ್ಪೂನ್ ಸಾಸಿವೆ, ಕೆಲವು ಕರಿ ಬೇವಿನ ಎಲೆಗಳನ್ನು ಸೇರಿಸಿ.
  • ಅದು ಕುರುಕುಲಾಗುವ ತನಕ 2 ಟೇಬಲ್ಸ್ಪೂನ್ ಕಡಲೆಕಾಯಿಗಳನ್ನು ಸಾಟ್ ಮಾಡಿ.
  • ತಯಾರಾದ ಮಸಾಲಾ ಪೌಡರ್ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ, ಬೇಯಿಸಿದ 2 ಕಪ್ ರೈಸ್ ಸೇರಿಸಿ.
  • ಅನ್ನದ ಧಾನ್ಯಗಳನ್ನು ಮುರಿಯದೆ ಚೆನ್ನಾಗಿ ಮಿಶ್ರಮಾಡಿ.
  • ಮುಚ್ಚಿ 5 ನಿಮಿಷಗಳ ಕಾಲ ಅಥವಾ ಅನ್ನ ಸಂಪೂರ್ಣವಾಗಿ ಸುವಾಸನೆಯನ್ನು ಹೀರಿಕೊಳ್ಳುವ ತನಕ ಸಿಮ್ಮರ್ ನಲ್ಲಿಡಿ.
  • ಅಂತಿಮವಾಗಿ, ರಾಯಿತಾದೊಂದಿಗೆ ಕಡಲೆಕಾಯಿ ಅನ್ನವನ್ನು ಆನಂದಿಸಿ ಅಥವಾ ಊಟದ ಡಬ್ಬಕ್ಕೆ ಪ್ಯಾಕ್ ಮಾಡಿ.