Go Back
+ servings
brinjal masala recipe
Print Pin
No ratings yet

ಬದನೆಕಾಯಿ ಮಸಾಲ | baingan masala in kannada | ಬೈಂಗನ್ ಮಸಾಲಾ

ಸುಲಭ ಬದನೆಕಾಯಿ ಮಸಾಲ ಪಾಕವಿಧಾನ | ಬೈಂಗನ್ ಮಸಾಲಾ | ಬಿಳಿಬದನೆ ಮಸಾಲಾ ಕರಿ
ಕೋರ್ಸ್ ಕರಿ
ಪಾಕಪದ್ಧತಿ ಭಾರತೀಯ
ಕೀವರ್ಡ್ ಬದನೆಕಾಯಿ ಮಸಾಲ
ತಯಾರಿ ಸಮಯ 15 minutes
ಅಡುಗೆ ಸಮಯ 30 minutes
ಒಟ್ಟು ಸಮಯ 45 minutes
ಸೇವೆಗಳು 6 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

  • 6 ಸಣ್ಣ ಗಾತ್ರದ ನೇರಳೆ ಬದನೆ / ಬೈಂಗನ್ / ಬಿಳಿಬದನೆ
  • 3 ಟೇಬಲ್ಸ್ಪೂನ್ ಎಣ್ಣೆ
  • ½ ಟೀಸ್ಪೂನ್ ಸಾಸಿವೆ
  • ¼ ಟೀಸ್ಪೂನ್ ಮೇಥಿ / ಮೆಂತ್ಯೆ ಬೀಜಗಳು
  • ಕೆಲವು ಕರಿ ಬೇವಿನ ಎಲೆಗಳು
  • 1 ಈರುಳ್ಳಿ (ಸಣ್ಣಗೆ ಕತ್ತರಿಸಿದ)
  • 1 ಕಪ್ ಹುಣಿಸೇಹಣ್ಣಿನ ಸಾರ
  • ½ ಟೀಸ್ಪೂನ್ ಬೆಲ್ಲ (ಐಚ್ಛಿಕ)
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)

ಈರುಳ್ಳಿ-ಟೊಮೆಟೊ ಪೇಸ್ಟ್ಗಾಗಿ:

  • 2 ಟೀಸ್ಪೂನ್ ಎಣ್ಣೆ
  • 1 ಈರುಳ್ಳಿ (ತೆಳುವಾಗಿ ಸೀಳಿದ)
  • 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ½ ಟೀಸ್ಪೂನ್ ಅರಿಶಿನ ಪೌಡರ್
  • 1 ಟೊಮೆಟೊ (ಸಣ್ಣಗೆ ಕತ್ತರಿಸಿದ)
  • 1 ಟೀಸ್ಪೂನ್ ಕೊತ್ತಂಬರಿ ಪೌಡರ್
  • ¼ ಟೀಸ್ಪೂನ್ ಜೀರಿಗೆ ಪುಡಿ
  • 1 ಟೀಸ್ಪೂನ್ ಕಾಶ್ಮೀರಿ ಮೆಣಸಿನ ಪುಡಿ
  • ½ ಟೀಸ್ಪೂನ್ ಗರಂ ಮಸಾಲಾ ಪೌಡರ್
  • ರುಚಿಗೆ ತಕ್ಕಷ್ಟು ಉಪ್ಪು

ಸ್ಟಫಿಂಗ್ ಗಾಗಿ:

  • 2 ಟೇಬಲ್ಸ್ಪೂನ್ ಎಳ್ಳು / ತಿಲ್
  • ½ ಕಪ್ ತೆಂಗಿನಕಾಯಿ (ತಾಜಾ / ಡೆಸಿಕೇಟೆಡ್ / ಒಣ)
  • ¼ ಕಪ್ ಕಡಲೇಕಾಯಿ (ಹುರಿದ ಮತ್ತು ಸಿಪ್ಪೆ ತೆಗೆದ
  • 1 ಟೀಸ್ಪೂನ್ ಕಾಶ್ಮೀರಿ ಮೆಣಸಿನ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು

ಸೂಚನೆಗಳು

ಬದನೆಕಾಯಿಯನ್ನು ಹೇಗೆ ಕತ್ತರಿಸುವುದು:

  • ಮೊದಲಿಗೆ, ಸಣ್ಣ ಮತ್ತು ನವಿರಾದ ಬದನೆಕಾಯಿಯನ್ನು ತೆಗೆದುಕೊಂಡು ಕೆಳಭಾಗದಲ್ಲಿ x ಆಗಿ ಕತ್ತರಿಸಿ.
  • ಅದರಲ್ಲಿ ಯಾವುದೇ ಹುಳುಗಳು ಇಲ್ಲ ಎಂದು ಖಚಿತಪಡಿಸಿಕೊಳ್ಳಿ.
  • ಅವುಗಳನ್ನು ಕಂದು ಬಣ್ಣ ಆಗುವುದನ್ನು ತಡೆಗಟ್ಟಲು ಮತ್ತು ಕಹಿಯನ್ನು ಕಡಿಮೆ ಮಾಡಲು ನೀರಿನಲ್ಲಿ ನೆನೆಸಿಡಿ.

ಈರುಳ್ಳಿ ಟೊಮೆಟೊ ಪೇಸ್ಟ್ ಪಾಕವಿಧಾನ:

  • ಮೊದಲಿಗೆ, ಕಡೈನಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಈರುಳ್ಳಿಯನ್ನು ಸೇರಿಸಿ. ಅದರ ಬಣ್ಣ ಬದಲಾಗುವ ತನಕ ಸಾಟ್ ಮಾಡಿ.
  • ಈಗ 1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಸಾಟ್ ಮಾಡುವುದನ್ನು ಮುಂದುವರಿಸಿರಿ.
  • ಟೊಮೆಟೊಗಳನ್ನು ಸೇರಿಸಿ ಮತ್ತು ಅವುಗಳು ಮೃದು ಮತ್ತು ಮೆತ್ತಗೆ ಆಗುವ ತನಕ ಸಾಟ್ ಮಾಡಿ.
  • ಇದಲ್ಲದೆ, ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಕೊತ್ತಂಬರಿ ಪುಡಿ, ¼ ಟೀಸ್ಪೂನ್ ಜೀರಾ ಪುಡಿ, 1 ಟೀಸ್ಪೂನ್ ಚಿಲ್ಲಿ ಪೌಡರ್, ½ ಟೀಸ್ಪೂನ್ ಗರಮ್ ಮಸಾಲಾ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
  • ಕಡಿಮೆ ಜ್ವಾಲೆಯ ಮೇಲೆ ಒಂದು ನಿಮಿಷಕ್ಕೆ ಸಾಟ್ ಮಾಡಿ.
  • ಒಮ್ಮೆ ಸಂಪೂರ್ಣವಾಗಿ ತಣ್ಣಗಾಗಿಸಿ ಬ್ಲೆಂಡರ್ಗೆ ವರ್ಗಾಯಿಸಿ.
  • ಮತ್ತು ಯಾವುದೇ ಹೆಚ್ಚುವರಿ ನೀರನ್ನು ಸೇರಿಸದೆ ಮೃದುವಾದ ಪೇಸ್ಟ್ಗೆ ರುಬ್ಬಿಕೊಳ್ಳಿ. ಪಕ್ಕಕ್ಕೆ ಇರಿಸಿ.

ಬದನೆಕಾಯಿ ಸ್ಟಫಿಂಗ್ ಪಾಕವಿಧಾನ:

  • ಮೊದಲಿಗೆ, 2 ಟೇಬಲ್ಸ್ಪೂನ್ ಎಳ್ಳು ಬೀಜಗಳನ್ನು ಸ್ವಲ್ಪ ಗೋಲ್ಡನ್ ಆಗುವ ತನಕ ಡ್ರೈ ಹುರಿಯಿರಿ.
  • ಈಗ ½ ಕಪ್ ತೆಂಗಿನಕಾಯಿ ಸೇರಿಸಿ ಮತ್ತು ಕಡಿಮೆ ಜ್ವಾಲೆಯ ಮೇಲೆ ಹುರಿಯಿರಿ.
  • ¼ ಕಪ್ ಹುರಿದ ಕಡಲೇಕಾಯಿ, 1 ಟೀಸ್ಪೂನ್ ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ.
  • ಒಂದು ನಿಮಿಷಕ್ಕೆ ಸಾಟ್ ಮಾಡಿ.
  • ಮತ್ತು ಯಾವುದೇ ನೀರನ್ನು ಸೇರಿಸದೆ ಒರಟಾದ ಪುಡಿಗೆ ರುಬ್ಬಿಕೊಳ್ಳಿ.

ಬದನೆಕಾಯಿ ಮಸಾಲ ಸಿದ್ಧತೆ ರೆಸಿಪಿ:

  • ಮೊದಲಿಗೆ, ಕತ್ತರಿಸಿದ ಬದನೆಕಾಯಿಯನ್ನು ತೆಗೆದುಕೊಳ್ಳಿ ಮತ್ತು ಸಾಧ್ಯವಾದಷ್ಟು ಸಿದ್ಧಪಡಿಸಿದ ಸ್ಟಫಿಂಗ್ ಅನ್ನು ಸ್ಟಫ್ ಮಾಡಿ.
  • ಮತ್ತು 3 ಟೇಬಲ್ಸ್ಪೂನ್ ಎಣ್ಣೆಯೊಂದಿಗೆ ಮಧ್ಯಮ ಜ್ವಾಲೆಯ ಮೇಲೆ ಫ್ರೈ ಮಾಡಿ.
  • ಮುಚ್ಚಿ 2-4 ನಿಮಿಷಗಳ ಕಾಲ ಸಿಮ್ಮರ್ ನಲ್ಲಿಡಿ.
  • ಈಗ ತಿರುಗಿಸಿ ಮತ್ತೆ 2 ನಿಮಿಷಗಳ ಕಾಲ ಮುಚ್ಚಿ ಸಿಮ್ಮರ್ ನಲ್ಲಿಡಿ.
  • ಅರ್ಧ ಬೇಯುವ ತನಕ ಬದನೆಯನ್ನು ಬೇಯಿಸಿ.
  • ನಂತರ, ತೆಗೆದು ಪಕ್ಕಕ್ಕೆ ಇರಿಸಿ.
  • ಈಗ ಅದೇ ಕಡೈನಲ್ಲಿ ಸಾಸಿವೆ ಬೀಜಗಳು, ಮೇಥಿ ಮತ್ತು ಕರಿ ಬೇವಿನ ಎಲೆಗಳನ್ನು ಸೇರಿಸಿ.
  • ಚಟಪಟವಾಗಲು ಬಿಡಿ.
  • ನಂತರ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಸಾಟ್ ಮಾಡಿ.
  • ತಯಾರಾದ ಈರುಳ್ಳಿ-ಟೊಮೆಟೊ ಪೇಸ್ಟ್ ಅನ್ನು ಸಹ ಸೇರಿಸಿ ಮತ್ತು ಸಾಟ್ ಮಾಡುವುದನ್ನು ಮುಂದುವರಿಸಿರಿ.
  • ಪೇಸ್ಟ್ ದಪ್ಪವಾಗಿ ಮತ್ತು ಎಣ್ಣೆಯು ಮಿಶ್ರಣದಿಂದ ಬೇರ್ಪಡಿಸುವ ತನಕ ಬೇಯಿಸಿ.
  • ಇದಲ್ಲದೆ, ಸ್ಟಫ್ಡ್ ಮತ್ತು ಹುರಿದ ಬದನೆಗಳನ್ನು ಇರಿಸಿ.
  • ಮತ್ತು ಹುಣಿಸೇಹಣ್ಣು ನೀರನ್ನು ಸುರಿಯಿರಿ. ಹುಣಿಸೇಹಣ್ಣು ನೀರನ್ನು ತಯಾರಿಸಲು, ಒಂದು ಸಣ್ಣ ಚೆಂಡಿನ ಗಾತ್ರದ ಹುಣಿಸೇಹಣ್ಣನ್ನು 1 ಕಪ್ ಬೆಚ್ಚಗಿನ ನೀರಿನಲ್ಲಿ 30 ನಿಮಿಷಗಳ ಕಾಲ ಇಟ್ಟು ಚೆನ್ನಾಗಿ ಹಿಸುಕಿ.
  • ಪರಿಮಳವನ್ನು ಹೆಚ್ಚಿಸಲು ಬೆಲ್ಲದ ತುಂಡು ಸೇರಿಸಿ.
  • ಬದನೆಯನ್ನು ಮುರಿಯದೆ ನಿಧಾನವಾಗಿ ಮಿಶ್ರಣ ಮಾಡಿ.
  • ಮುಚ್ಚಿ 5 ನಿಮಿಷಗಳ ಕಾಲ ಸಿಮ್ಮರ್ ನಲ್ಲಿಡಿ.
  • ಮಸಾಲಾ ಮತ್ತು ಬದನೆಯನ್ನು ಸುಡುವುದನ್ನು ತಪ್ಪಿಸಲು ಕೈ ಆಡಿಸುತ್ತಾ ಇರಿ.
  • ಬದನೆಕಾಯಿ ಸಂಪೂರ್ಣವಾಗಿ ಬೇಯುವ ತನಕ ಮುಚ್ಚಿ ಬೇಯಿಸಿ.
  • ಅಂತಿಮವಾಗಿ, ಬದನೆಕಾಯಿ ಮಸಾಲಾವನ್ನು, ಚಪಾತಿ ಅಥವಾ ರೋಟಿ ಜೊತೆ ಸೇವಿಸಿ.