ಮೊದಲಿಗೆ ಭಾರವಾದ-ತಳದ ಬಾಣಲೆಯಲ್ಲಿ 2 ಕಪ್ ತೆಳುವಾದ ಅವಲಕ್ಕಿಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ.
ಅವಲಕ್ಕಿಯನ್ನು ಗರಿಗರಿಯಾಗುವವರೆಗೆ ಹುರಿದು, ಪಕ್ಕಕ್ಕೆ ಇರಿಸಿ.
ದೊಡ್ಡ ಕಡಾಯಿಯಲ್ಲಿ 2 ಟೇಬಲ್ಸ್ಪೂನ್ ಎಣ್ಣೆ, 2 ಟೇಬಲ್ಸ್ಪೂನ್ ಕಡಲೆಕಾಯಿ ಸೇರಿಸಿ ಮತ್ತು ಕುರುಕುಲು ಆಗುವವರೆಗೆ ಹುರಿಯಿರಿ.
2 ಟೇಬಲ್ಸ್ಪೂನ್ ಪುಟಾಣಿ, 2 ಟೇಬಲ್ಸ್ಪೂನ್ ಗೋಡಂಬಿ, 2 ಟೇಬಲ್ಸ್ಪೂನ್ ಬಾದಾಮಿ ಮತ್ತು 2 ಟೇಬಲ್ಸ್ಪೂನ್ ಒಣ ತೆಂಗಿನಕಾಯಿ ಸೇರಿಸಿ.
ಬೀಜಗಳು ಕುರುಕುಲು ಆಗುವವರೆಗೆ ಹುರಿಯಿರಿ.
ಇದಲ್ಲದೆ 1 ಟೀಸ್ಪೂನ್ ಜೀರಿಗೆ, 2 ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ. ಒಗ್ಗರಣೆಯನ್ನು ಸಿಡಿಯಲು ಬಿಡಿ.
ಈಗ ½ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ಸಕ್ಕರೆ ಸೇರಿಸಿ.
ಮಸಾಲೆಗಳು ಸುವಾಸನೆಯುಕ್ತವಾಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
ಹುರಿದ ಪೋಹಾವನ್ನು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ.
ಎಲ್ಲವೂ ಚೆನ್ನಾಗಿ ಸಂಯೋಜಿಸಲ್ಪಡುವವರೆಗೆ ಮಿಶ್ರಣ ಮಾಡಿ. ಪೋಹಾ ಚಿವ್ಡಾ ಸಿದ್ಧವಾಗಿದೆ.
ಚಾಟ್ ತಯಾರಿಸಲು, ಒಂದು ಬೌಲ್ ನಲ್ಲಿ ½ ಈರುಳ್ಳಿ, ½ ಟೊಮೆಟೊ, 2 ಟೇಬಲ್ಸ್ಪೂನ್ ಸೌತೆಕಾಯಿ, ½ ಕ್ಯಾರೆಟ್ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸೇರಿಸಿ.
ಅಲ್ಲದೆ, ½ ನಿಂಬೆ, ½ ಟೀಸ್ಪೂನ್ ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ 1½ ಕಪ್ ತಯಾರಿಸಿದ ಪೋಹಾ ಚಿವ್ಡಾ ಮತ್ತು ½ ಕಪ್ ಮಿಕ್ಸ್ಚರ್ ಅನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
ಅಂತಿಮವಾಗಿ, ಈರುಳ್ಳಿಯೊಂದಿಗೆ ಟಾಪ್ ಮಾಡಿ ಪೋಹಾ ಚಿವ್ಡಾ ಚಾಟ್ ಅನ್ನು ಆನಂದಿಸಿ.