Go Back
+ servings
Sprouted Green Moong Dal Pesarattu
Print Pin
No ratings yet

ಮೊಳಕೆ ಕಾಳಿನ ದೋಸೆ ರೆಸಿಪಿ | Sprouts Dosa in kannada

ಸುಲಭ ಮೊಳಕೆ ಕಾಳಿನ ದೋಸೆ ಪಾಕವಿಧಾನ - ತೂಕ ಇಳಿಸುವ ಪಾಕವಿಧಾನಗಳು
ಕೋರ್ಸ್ ಬೆಳಗಿನ ಉಪಾಹಾರ
ಪಾಕಪದ್ಧತಿ ಭಾರತೀಯ
ಕೀವರ್ಡ್ ಮೊಳಕೆ ಕಾಳಿನ ದೋಸೆ ರೆಸಿಪಿ
ತಯಾರಿ ಸಮಯ 5 minutes
ಅಡುಗೆ ಸಮಯ 10 minutes
ನೆನೆಸುವ ಸಮಯ 8 hours
ಒಟ್ಟು ಸಮಯ 8 hours 15 minutes
ಸೇವೆಗಳು 8 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

  • 1 ಕಪ್ ಹೆಸರುಕಾಳು
  • 1 ಕಟ್ಟು ಕೊತ್ತಂಬರಿಸೊಪ್ಪು
  • 1 ಇಂಚು ಶುಂಠಿ (ಕತ್ತರಿಸಿದ)
  • 3 ಮೆಣಸಿನಕಾಯಿ
  • 1 ಟೀಸ್ಪೂನ್ ಜೀರಿಗೆ
  • ½ ಕಪ್ ನೀರು
  • ½ ಟೀಸ್ಪೂನ್ ಉಪ್ಪು
  • ಆಲಿವ್ ಎಣ್ಣೆ (ಹುರಿಯಲು)

ಸೂಚನೆಗಳು

  • ಮೊದಲನೆಯದಾಗಿ, 1 ಕಪ್ ಹೆಸರುಕಾಳನ್ನು ರಾತ್ರಿಯಿಡೀ ನೆನೆಸಿ ಮತ್ತು ಮೊಳಕೆ ಕಾಳುಗಳನ್ನು ಪಡೆಯಲು ಬಟ್ಟೆಯಲ್ಲಿ ಕಟ್ಟಿ.
  • ಮೊಳಕೆಯೊಡೆದ ಹೆಸರುಕಾಳನ್ನು ಮಿಕ್ಸರ್ ಜಾರ್ ಗೆ ವರ್ಗಾಯಿಸಿ.
  • ಇದಕ್ಕೆ 1 ಕಟ್ಟು ಕೊತ್ತಂಬರಿ ಸೊಪ್ಪು, 1 ಇಂಚು ಶುಂಠಿ, 3 ಮೆಣಸಿನಕಾಯಿ, 1 ಟೀಸ್ಪೂನ್ ಜೀರಿಗೆ ಮತ್ತು ಅರ್ಧ ಕಪ್ ನೀರನ್ನು ಸೇರಿಸಿ.
  • ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾದ ಪೇಸ್ಟ್ ಗೆ ರುಬ್ಬಿಕೊಳ್ಳಿ.
  • ಹೆಸರುಕಾಳಿನ ಹಿಟ್ಟನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ.
  • ಅರ್ಧ ಟೀಸ್ಪೂನ್ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ತವಾವನ್ನು ಬಿಸಿ ಮಾಡಿ ಮತ್ತು ದೋಸೆ ಹಿಟ್ಟನ್ನು ಸಾಧ್ಯವಾದಷ್ಟು ತೆಳ್ಳಗೆ ಹರಡಿ.
  • ಕತ್ತರಿಸಿದ ಈರುಳ್ಳಿ ಮತ್ತು ಅರ್ಧ ಟೀಸ್ಪೂನ್ ಆಲಿವ್ ಎಣ್ಣೆಯನ್ನು ಸಿಂಪಡಿಸಿ.
  • ದೋಸೆ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ.
  • ತಿರುಗಿಸಿ ಮತ್ತು ಚೆನ್ನಾಗಿ ಬೇಯಿಸಿ.
  • ಅಂತಿಮವಾಗಿ, ಮಸಾಲೆಯುಕ್ತ ಚಟ್ನಿಯೊಂದಿಗೆ ಮೊಳಕೆ ಕಾಳಿನ ದೋಸೆಯನ್ನು ಆನಂದಿಸಿ.