ಮೊದಲನೆಯದಾಗಿ, ಒಂದು ದೊಡ್ಡ ಪಾತ್ರೆಯಲ್ಲಿ 3 ಕಪ್ ದೋಸೆ ಅಕ್ಕಿ ಮತ್ತು ½ ಟೀಸ್ಪೂನ್ ಮೆಥಿಯನ್ನು 5 ಗಂಟೆಗಳ ಕಾಲ ನೆನೆಸಿಡಿ. ಪರ್ಯಾಯವಾಗಿ, ಇಡ್ಲಿ ಅಕ್ಕಿ / ಸೋನಾ ಮಸೂರಿ ಅಕ್ಕಿ ಬಳಸಿ.
ಮತ್ತೊಂದು ಬಟ್ಟಲಿನಲ್ಲಿ 1 ಕಪ್ ಉದ್ದಿನ ಬೇಳೆಯನ್ನು 3 ಗಂಟೆಗಳ ಕಾಲ ನೆನೆಸಿಡಿ.
ಉದ್ದಿನ ಬೇಳೆಯಿಂದ ನೀರನ್ನು ತೆಗೆದು ಮತ್ತು ಅಗತ್ಯವಿರುವಂತೆ ನೀರನ್ನು ಸೇರಿಸಿ ನಯವಾಗಿ ಅರೆದು ಮಿಶ್ರಣ ಮಾಡಿ.
ಉದ್ದಿನ ಬೇಳೆ ನಯವಾದ ಮತ್ತು ಕಲಸಿದ ಹಿಟ್ಟನ್ನು ಒಂದು ದೊಡ್ಡ ಬಟ್ಟಲಿಗೆ ವರ್ಗಾಯಿಸಿ.
ಪಾತ್ರೆಯಲ್ಲಿ ನೆನೆಸಿದ ಅಕ್ಕಿಯ ನೀರನ್ನು ತೆಗೆಯಬೇಕು.
ಅಗತ್ಯವಿರುವಷ್ಟು ನೀರನ್ನು ಸೇರಿಸಿ ಸ್ವಲ್ಪ ಒರಟಾಗಿ ಅರೆಯಬೇಕು.
ಅಕ್ಕಿ ಹಿಟ್ಟನ್ನು ಉದ್ದಿನ ಬೇಳೆ ಹಿಟ್ಟಿನ ಬಟ್ಟಲಿಗೆ ವರ್ಗಾಯಿಸಿ.
ಈಗ ಪಾತ್ರೆಯಲ್ಲಿ 2 ಕಪ್ ತೊಳೆದು ಮತ್ತು ಹಿಸುಕಿದ ಮಂಡಕ್ಕಿಯನ್ನು ತೆಗೆದುಕೊಳ್ಳಿ.
ಮತ್ತು ನಯವಾಗಿ ಅರೆದು, ಅಕ್ಕಿ ಹಿಟ್ಟು, ಉದ್ದಿನ ಬೇಳೆ ಹಿಟ್ಟು ಚೆನ್ನಾಗಿ ಮಿಶ್ರಣ ಮಾಡಿ.
ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ 8-10 ಗಂಟೆಗಳ ಕಾಲ ಮುಚ್ಚಿ ಇಡಬೇಕು ಅಥವಾ ಹಿಟ್ಟಿನ ಹುದುಗುವಿಕೆ ಮತ್ತು ಹಿಟ್ಟು ಉಬ್ಬಿ ಜಾಸ್ತಿ ಅಗುವ ತನಕ ಬೆಚ್ಚಗಿನ ಸ್ಥಳದಲ್ಲಿ ಮುಚ್ಚಿ ಇಡಬೇಕು.
8 ಗಂಟೆಗಳ ನಂತರ, ಹಿಟ್ಟು ಹುಳಿ ಬಂದು ಚೆನ್ನಾಗಿ ಹುದುಗಿದೆ ಎಂದು ಸೂಚಿಸುತ್ತದೆ.