ಮೊದಲನೆಯದಾಗಿ, ದೊಡ್ಡ ಮಿಶ್ರಣ ಬಟ್ಟಲಿನಲ್ಲಿ 3 ಕಪ್ ದೋಸೆ ಅಕ್ಕಿ ಮತ್ತು ½ ಟೀಸ್ಪೂನ್ ಮೆಥಿಯನ್ನು 5 ಗಂಟೆಗಳ ಕಾಲ ನೆನೆಸಿಡಿ. ಪರ್ಯಾಯವಾಗಿ, ಇಡ್ಲಿ ಅಕ್ಕಿ / ಸೋನಾ ಮಸೂರಿ ಅಕ್ಕಿ ಬಳಸಿ.
ಮತ್ತೊಂದು ಬಟ್ಟಲಿನಲ್ಲಿ 1 ಕಪ್ ಉದ್ದಿನ ಬೇಳೆಯನ್ನು 3 ಗಂಟೆಗಳ ಕಾಲ ನೆನೆಸಿಡಿ.
ಉದ್ದಿನ ಬೇಳೆಯಿಂದ ನೀರನ್ನು ತೆಗೆದು ಮತ್ತು ಅಗತ್ಯವಿರುವಂತೆ ನೀರನ್ನು ಸೇರಿಸಿ ನಯವಾಗಿ ಅರೆದು ಮಿಶ್ರಣ ಮಾಡಿ.
ಉದ್ದಿನ ಬೇಳೆ ನಯವಾಗಿ ಅರೆದು ಮತ್ತು ಕಲಸಿದ ಹಿಟ್ಟನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ.
ಪಾತ್ರೆಯಲ್ಲಿ ನೆನೆಸಿದ ಅಕ್ಕಿಯ ನೀರನ್ನು ತೆಗೆಯಬೇಕು.
ಅಗತ್ಯವಿರುವಷ್ಟು ನೀರನ್ನು ಸೇರಿಸಿ ಸ್ವಲ್ಪ ನಯವಾಗಿ ಅರೆಯಬೇಕು.
ಅಕ್ಕಿ ಹಿಟ್ಟನ್ನು ಮತ್ತು ಉದ್ದಿನ ಬೇಳೆ ಹಿಟ್ಟನ್ನು ಒಂದೆ ಬಟ್ಟಲಿಗೆ ವರ್ಗಾಯಿಸಿ.
ಈಗ ಪಾತ್ರೆಯಲ್ಲಿ 2 ಕಪ್ ತೊಳೆದು ಮತ್ತು ಹಿಸುಕಿದ ಮಂಡಕ್ಕಿಯನ್ನು ತೆಗೆದುಕೊಳ್ಳಿ.
ಮತ್ತು ನಯವಾದ ಅರೆದು ಮಿಶ್ರಣ ಮಾಡಿ. ಪರ್ಯಾಯವಾಗಿ, ಉಳಿದ ಅಕ್ಕಿ ಅಥವಾ ನೆನೆಸಿದ ಸಬುಡಾನಾ ಬಳಸಿ.
ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ 8-10 ಗಂಟೆಗಳ ಕಾಲ ಮುಚ್ಚಿ ಇಡಬೇಕು ಅಥವಾ ಹಿಟ್ಟಿನ ಹುದುಗುವಿಕೆ ಮತ್ತು ಹಿಟ್ಟು ಉಬ್ಬಿ ಜಾಸ್ತಿ ಆಗುವ ತನಕ ಬೆಚ್ಚಗಿನ ಸ್ಥಳದಲ್ಲಿ ಮುಚ್ಚಿ ಇಡಬೇಕು.
8 ಗಂಟೆಗಳ ನಂತರ, ಹಿಟ್ಟು ಚೆನ್ನಾಗಿ ಹುಳಿ ಬಂದು ಗಾಳಿಯು ತುಂಬುತ್ತದೆ ಅಂದರೆ ಚೆನ್ನಾಗಿ ಹುದುಗಿದೆ ಎಂದು ಸೂಚಿಸುತ್ತದೆ.
ಹಿಟ್ಟಿಗೆ 1½ ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಉಬ್ಬಿದ ಹಿಟ್ಟಿಗೆ ತೊಂದರೆಯಾಗದಂತೆ ನಿಧಾನವಾಗಿ ಮಿಶ್ರಣ ಮಾಡಿ.
ಹೆಂಚು ಅಥವಾ ಕಾವಲಿ ಬಿಸಿ ಮಾಡಿ ಮತ್ತು ಒಂದು ಸೌಟು ಹಿಟ್ಟನ್ನು ಹಾಕಿ.
ಸಾಮಾನ್ಯ ಮಸಾಲ ದೋಸದಂತೆ ಸ್ವಲ್ಪ ತೆಳ್ಳಗಿನ ವೃತ್ತಾಕಾರದ ಚಲನೆಯಲ್ಲಿ ಹರಡಿ.
ದೋಸೆ ಮೇಲೆ 2 ಟೀಸ್ಪೂನ್ ತುಪ್ಪವನ್ನು ಹರಡಿ.
ಕವರ್ ಮಾಡಿ ಮತ್ತು ದೋಸೆಯನ್ನು ಚಿನ್ನದ ಕಂದು ಬಣ್ಣಕ್ಕೆ ಹುರಿಯಿರಿ.
ಅಂತಿಮವಾಗಿ, ತುಪ್ಪ ಹುರಿದ ದೋಸೆಯನ್ನು ಅರ್ಧದಷ್ಟು ಮಡಚಿ ಮತ್ತು ಚಟ್ನಿಯೊಂದಿಗೆ ಬಡಿಸಿ.