Go Back
+ servings
potato chips recipe
Print Pin
No ratings yet

ಪೊಟಾಟೋ ಚಿಪ್ಸ್ ರೆಸಿಪಿ | potato chips in kannada | ಆಲೂಗೆಡ್ಡೆ ಚಿಪ್ಸ್

ಸುಲಭ ಪೊಟಾಟೋ ಚಿಪ್ಸ್ ಪಾಕವಿಧಾನ | ಆಲೂಗೆಡ್ಡೆ ಚಿಪ್ಸ್
ಕೋರ್ಸ್ ತಿಂಡಿಗಳು
ಪಾಕಪದ್ಧತಿ ಅಂತಾರಾಷ್ಟ್ರೀಯ
ಕೀವರ್ಡ್ ಪೊಟಾಟೋ ಚಿಪ್ಸ್ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 15 minutes
ಒಟ್ಟು ಸಮಯ 25 minutes
ಸೇವೆಗಳು 1 ಬಾಕ್ಸ್
ಲೇಖಕ HEBBARS KITCHEN

ಪದಾರ್ಥಗಳು

  • 3 ಆಲೂಗಡ್ಡೆ ದೊಡ್ಡದು
  • 4 ಕಪ್  ತಣ್ಣಗಿರುವ ನೀರು ತೊಳೆಯಲು
  • 1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
  • ½ ಟೀಸ್ಪೂನ್ ಉಪ್ಪು
  • ಎಣ್ಣೆ ಹುರಿಯಲು

ಸೂಚನೆಗಳು

  • ಮೊದಲನೆಯದಾಗಿ, ದೊಡ್ಡ ಆಲೂಗಡ್ಡೆಯ ಸಿಪ್ಪೆ ತೆಗೆಯಿರಿ. ಒಳ್ಳೆಯ ಸ್ಲೈಸ್ಗಳನ್ನು ಪಡೆಯಲು ದೊಡ್ಡ ಆಲೂಗಡ್ಡೆ ಬಳಸಲು ಖಚಿತಪಡಿಸಿಕೊಳ್ಳಿ.
  • ಆಲೂಗಡ್ಡೆಯನ್ನು ಸಾಧ್ಯವಾದಷ್ಟು ತೆಳ್ಳಗೆ ಕತ್ತರಿಸಿ.
  • ಈಗ ಆಲೂಗೆಡ್ಡೆ ಸ್ಲೈಸ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ ತಣ್ಣಗಾದ ನೀರನ್ನು ಸೇರಿಸಿ.
  • ಚೆನ್ನಾಗಿ ತೊಳೆಯಿರಿ ಮತ್ತು ಕಿಚನ್ ಟವೆಲ್ ಮೇಲೆ ಹರಡಿ.
  • ಹೆಚ್ಚುವರಿ ನೀರನ್ನು ಉಜ್ಜಿಕೊಳ್ಳಿ. ಇದು ಎಣ್ಣೆ ಮೈಮೇಲೆ ಹಾರುವುದನ್ನು ತಡೆಯಲು ಸಹಾಯ ಮಾಡುತ್ತದೆ.
  • ಕತ್ತರಿಸಿದ ಆಲೂಗಡ್ಡೆಯನ್ನು ಬಿಸಿ ಎಣ್ಣೆಯಲ್ಲಿ ಬಿಡಿ. ತುಂಬಾ ಸ್ಲೈಸ್ಗಳನ್ನು ಒಂದೇ ಸಲ ಹಾಕಬೇಡಿ.
  • ಆಗಾಗ ಕೈ ಆಡಿಸುತ್ತಾ ಮಧ್ಯಮ ಉರಿಯಲ್ಲಿ ಹುರಿಯಿರಿ.
  • ಚಿಪ್ಸ್ ಗರಿಗರಿಯಾಗುವವರೆಗೆ ಫ್ರೈ ಮಾಡಿ.
  • ಕೋಲಾಂಡರ್ ನಿಂದ ಹೆಚ್ಚುವರಿ ಎಣ್ಣೆಯನ್ನು ಸೋಸಿರಿ. ಅಡುಗೆ ಕಾಗದದ ಮೇಲೆ ಹಾಕಬೇಡಿ ಏಕೆಂದರೆ ಇದರಿಂದ ಚಿಪ್ಸ್ ಮೆತ್ತಗಾಗಬಹುದು.
  • ಈಗ 1 ಟೀಸ್ಪೂನ್ ಮೆಣಸಿನ ಪುಡಿ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
  • ಎಲ್ಲಾ ಮಸಾಲೆಗಳನ್ನು ಲೇಪಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ ಹಾಗೂ ಚೆನ್ನಾಗಿ ಟಾಸ್ ಮಾಡಿ ಮಿಶ್ರಣ ಮಾಡಿ.
  • ಅಂತಿಮವಾಗಿ, ಆಲೂಗೆಡ್ಡೆ ಚಿಪ್ಸ್ ಪಾಕವಿಧಾನವನ್ನು ಆನಂದಿಸಿ ಹಾಗೂ ಒಂದು ವಾರದವರೆಗೆ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಬಹುದು.