Go Back
+ servings
kaju pista roll recipe
Print Pin
No ratings yet

ಕಾಜು ಪಿಸ್ತಾ ರೋಲ್ ರೆಸಿಪಿ | kaju pista roll in kannada

ಸುಲಭ ಕಾಜು ಪಿಸ್ತಾ ರೋಲ್ ಪಾಕವಿಧಾನ
ಕೋರ್ಸ್ ಸಿಹಿ
ಪಾಕಪದ್ಧತಿ ಭಾರತೀಯ
ಕೀವರ್ಡ್ ಕಾಜು ಪಿಸ್ತಾ ರೋಲ್ ರೆಸಿಪಿ
ತಯಾರಿ ಸಮಯ 10 minutes
ಫ್ರೀಜಿಂಗ್ ಸಮಯ 10 minutes
ಒಟ್ಟು ಸಮಯ 20 minutes
ಸೇವೆಗಳು 20 ತುಂಡುಗಳು
ಲೇಖಕ HEBBARS KITCHEN

ಪದಾರ್ಥಗಳು

ಗೋಡಂಬಿ ಪದರಕ್ಕಾಗಿ:

  • 1 ಕಪ್ ಗೋಡಂಬಿ
  • 1 ಕಪ್ ಹಾಲಿನ ಪುಡಿ ಸಿಹಿ ಇಲ್ಲದ್ದು
  • 1 ಕಪ್ ಸಕ್ಕರೆ ಪುಡಿ ಮಾಡಿದ
  • ¼ ಟೀಸ್ಪೂನ್ ಏಲಕ್ಕಿ ಪುಡಿ
  • 2 ಟೇಬಲ್ಸ್ಪೂನ್ ತುಪ್ಪ / ಬೆಣ್ಣೆ
  • ¼ ಕಪ್ ಹಾಲು

ಪಿಸ್ತಾ ಪದರಕ್ಕಾಗಿ:

  • 1 ಕಪ್ ಪಿಸ್ತಾ
  • 1 ಕಪ್ ಹಾಲಿನ ಪುಡಿ ಸಿಹಿ ಇಲ್ಲದ್ದು
  • 1 ಕಪ್ ಸಕ್ಕರೆ ಪುಡಿ ಮಾಡಿದ
  • ¼ ಟೀಸ್ಪೂನ್ ಏಲಕ್ಕಿ ಪುಡಿ
  • 2 ಟೇಬಲ್ಸ್ಪೂನ್ ತುಪ್ಪ / ಬೆಣ್ಣೆ
  • ಕೆಲವು ಹನಿಗಳು ಹಸಿರು ಆಹಾರ ಬಣ್ಣ (ಬೇಕಾದರೆ ಮಾತ್ರ)
  • ¼ ಕಪ್ ಹಾಲು

ಸೂಚನೆಗಳು

  • ಮೊದಲನೆಯದಾಗಿ, 1 ಕಪ್ ಗೋಡಂಬಿಯನ್ನು ಪಲ್ಸ್ ಮಾಡಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
  • ಗೋಡಂಬಿ ಪುಡಿಯನ್ನು ದೊಡ್ಡ ಬಟ್ಟಲಿನಲ್ಲಿ ಜರಡಿ, ದೊಡ್ಡ ಗೋಡಂಬಿ ತುಣುಕುಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ.
  • 1 ಕಪ್ ಹಾಲಿನ ಪುಡಿ, 1 ಕಪ್ ಸಕ್ಕರೆ ಪುಡಿ ಮತ್ತು ¼ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ.
  • ಎಲ್ಲವನ್ನೂ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿ, ಚೆನ್ನಾಗಿ ಮಿಶ್ರಣ ಮಾಡಿ.
  • ಈಗ 2 ಟೀಸ್ಪೂನ್ ತುಪ್ಪ ಸೇರಿಸಿ, ಮಿಶ್ರಣವು ತೇವವಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ¼ ಕಪ್ ಹಾಲು ಸೇರಿಸಿ, ಹಿಟ್ಟನ್ನು ಬೆರೆಸಲು ಪ್ರಾರಂಭಿಸಿ.
  • ಅಗತ್ಯವಿದ್ದರೆ ಇನ್ನೂ ಸ್ವಲ್ಪ ಹಾಲು ಸೇರಿಸಿ ಮೃದುವಾದ ಹಿಟ್ಟನ್ನಾಗಿ ಬೆರೆಸಿಕೊಳ್ಳಿ. ಪಕ್ಕಕ್ಕೆ ಇರಿಸಿ.
  • ಪಿಸ್ತಾ ಹಿಟ್ಟನ್ನು ತಯಾರಿಸಲು, 1 ಕಪ್ ಪಿಸ್ತಾವನ್ನು ಪಲ್ಸ್ ಮಾಡಿ ನುಣ್ಣಗೆ ಪುಡಿ ಮಾಡಿ.
  • ಪುಡಿಯನ್ನು ದೊಡ್ಡ ಬಟ್ಟಲಿನಲ್ಲಿ ಜರಡಿ.
  • 1 ಕಪ್ ಹಾಲಿನ ಪುಡಿ, 1 ಕಪ್ ಸಕ್ಕರೆ ಪುಡಿ ಮತ್ತು ¼ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ.
  • ಎಲ್ಲವನ್ನೂ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಈಗ 2 ಟೀಸ್ಪೂನ್ ತುಪ್ಪ, ಕೆಲವು ಹನಿ ಹಸಿರು ಆಹಾರ ಬಣ್ಣವನ್ನು ಸೇರಿಸಿ ಮಿಶ್ರಣವು ತೇವವಾಗುವವರೆಗೆ ಮಿಶ್ರಣ ಮಾಡಿ.
  • ನಂತರ, ¼ ಕಪ್ ಹಾಲು ಸೇರಿಸಿ ಹಿಟ್ಟನ್ನು ಬೆರೆಸಲು ಪ್ರಾರಂಭಿಸಿ.
  • ಅಗತ್ಯವಿದ್ದರೆ ಇನ್ನೂ ಸ್ವಲ್ಪ ಹಾಲು ಸೇರಿಸಿ ಮೃದುವಾದ ಹಿಟ್ಟನ್ನಾಗಿ ಮಾಡಿಕೊಳ್ಳಿ.
  • ಬೆಣ್ಣೆ ಕಾಗದವನ್ನು ಇರಿಸಿ, ಅದರ ಮೇಲೆ ಪಿಸ್ತಾ ಹಿಟ್ಟನ್ನು ತೆಳುವಾಗಿ ಲಟ್ಟಿಸಿ.
  • ಗೋಡಂಬಿ ಹಿಟ್ಟನ್ನು ಕೂಡ ತೆಳುವಾಗಿ ಲಟ್ಟಿಸಿಕೊಳ್ಳಿ.
  • ಈಗ ಗೋಡಂಬಿ ಪದರದ ಮೇಲೆ ಪಿಸ್ತಾ ಪದರವನ್ನು ಇರಿಸಿ.
  • ಪದರಗಳು ಒಂದರ ಮೇಲೊಂದು ಸರಿಯಾಗಿ ಇದೆಯಾ ಎಂದು ಖಚಿತಪಡಿಸಿ, ಸುತ್ತಿಕೊಳ್ಳಿ.
  • ಪ್ಲಾಸ್ಟಿಕ್ ನಿಂದ ಬಿಗಿಯಾಗಿ ಸುತ್ತಿ, 10 ನಿಮಿಷಗಳ ಕಾಲ ಫ್ರೀಜ್ ಮಾಡಿ.
  • ಈಗ ನಿಮ್ಮ ಆದ್ಯತೆಗೆ ಅನುಗುಣವಾಗಿ ದಪ್ಪ ಅಥವಾ ಸಪೂರವಾಗಿ ಕತ್ತರಿಸಿ.
  • ಅಂತಿಮವಾಗಿ, ಕಾಜು ಪಿಸ್ತಾ ರೋಲ್ ಒಂದು ವಾರ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿ ಆನಂದಿಸಿ.