Go Back
+ servings
how to make homemade garam masala spice mix powder
Print Pin
5 from 14 votes

ಗರಂ ಮಸಾಲಾ ರೆಸಿಪಿ | garam masala in kannada | ಗರಂ ಮಸಾಲೆ ಪುಡಿ

ಸುಲಭ ಗರಂ ಮಸಾಲಾ ಪಾಕವಿಧಾನ | ಗರಂ ಮಸಾಲೆ ಪುಡಿ
ಕೋರ್ಸ್ ಮಸಾಲೆ
ಪಾಕಪದ್ಧತಿ ಭಾರತೀಯ
ಕೀವರ್ಡ್ ಗರಂ ಮಸಾಲಾ ರೆಸಿಪಿ
ತಯಾರಿ ಸಮಯ 5 minutes
ಅಡುಗೆ ಸಮಯ 10 minutes
ಒಟ್ಟು ಸಮಯ 15 minutes
ಸೇವೆಗಳು 200 ಗ್ರಾಂ
ಲೇಖಕ HEBBARS KITCHEN

ಪದಾರ್ಥಗಳು

  • ¾ ಕಪ್ ಕೊತ್ತಂಬರಿ ಬೀಜ / ಧನಿಯಾ
  • ½ ಕಪ್ ಜೀರಿಗೆ / ಜೀರಾ
  • 1 ಟೀಸ್ಪೂನ್ ಓಮ ಕಾಳು
  • 2 ಟೇಬಲ್ಸ್ಪೂನ್ ಒಳ್ಳೆ ಮೆಣಸು / ಪೆಪ್ಪರ್
  • 3 ಒಣಗಿದ ಕೆಂಪು ಮೆಣಸಿನಕಾಯ
  • 5 ಸ್ಟಾರ್ ಸೋಂಪು / ಚಕ್ರ ಫೂಲ್
  • 3 ಇಂಚಿನ ದಾಲ್ಚಿನ್ನಿ
  • 2 ಮಾಸ್ / ಜಾವಿತ್ರಿ
  • 5 ಕಪ್ ಪು ಏಲಕ್ಕಿ
  • 2 ಜಾಯಿಕಾಯಿ / ಜೈಫಲ್
  • 3 ಟೀಸ್ಪೂನ್ ಏಲಕ್ಕಿ / ಎಲಾಚಿ
  • 1 ಟೇಬಲ್ಸ್ಪೂನ್ ಲವಂಗ
  • 2 ಟೀಸ್ಪೂನ್ ಫೆನ್ನೆಲ್ / ಬಡೇ ಸೋಂಪು
  • 5 ಬೇ ಎಲೆ / ತೇಜ್ ಪತ್ತಾ
  • 1 ಟೀಸ್ಪೂನ್ ಶುಂಠಿ ಪುಡಿ

ಸೂಚನೆಗಳು

  • ಮೊದಲನೆಯದಾಗಿ, ಬಾಣಲೆಯಲ್ಲಿ ¾ ಕಪ್ ಕೊತ್ತಂಬರಿ ಬೀಜ ತೆಗೆದುಕೊಂಡು ಕಡಿಮೆ ಉರಿಯಲ್ಲಿ ಹುರಿಯಿರಿ.
  • ಮಸಾಲೆಗಳು ಪರಿಮಳ ಬರುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
  • ಅದೇ ಬಾಣಲೆಯಲ್ಲಿ ½ ಕಪ್ ಜೀರಿಗೆ, 1 ಟೀಸ್ಪೂನ್ ಓಮ ಕಾಳು ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ.
  • ಪರಿಮಳ ಬರುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
  • ಹಾಗೆಯೇ, 2 ಟೀಸ್ಪೂನ್ ಒಳ್ಳೆ ಮೆಣಸು ಮತ್ತು 3 ಒಣಗಿದ ಕೆಂಪು ಮೆಣಸಿನಕಾಯಿ ತೆಗೆದುಕೊಳ್ಳಿ.
  • ಮೆಣಸಿನಕಾಯಿ ಗರಿಗರಿಯಾಗುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
  • ಈಗ 5 ಸ್ಟಾರ್ ಸೋಂಪು, 3 ಇಂಚಿನ ದಾಲ್ಚಿನ್ನಿ, 2 ಮೆಸ್, 5 ಕಪ್ಪು ಏಲಕ್ಕಿ, 2 ಜಾಯಿಕಾಯಿ, 3 ಟೀಸ್ಪೂನ್ ಏಲಕ್ಕಿ, 1 ಟೀಸ್ಪೂನ್ ಲವಂಗ, 2 ಟೀಸ್ಪೂನ್ ಬಡೇ ಸೋಂಪು ಮತ್ತು 5 ಬೇ ಎಲೆ ಸೇರಿಸಿ.
  • ಎಲ್ಲಾ ಮಸಾಲೆಗಳು ಸುಡದೆ ಪರಿಮಳ ಬರುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
  • ಎಲ್ಲಾ ಮಸಾಲೆಗಳನ್ನು ತಣ್ಣಗಾಗಿಸಿ ಮಿಕ್ಸಿಗೆ ವರ್ಗಾಯಿಸಿ.
  • ಈಗ ಮಿಕ್ಸರ್ ಗೆ 1 ಟೀಸ್ಪೂನ್ ಶುಂಠಿ ಪುಡಿಯನ್ನು ಸೇರಿಸಿ, ಒರಟಾದ ಪುಡಿಯನ್ನಾಗಿ ರುಬ್ಬಿಕೊಳ್ಳಿ.
  • ಅಂತಿಮವಾಗಿ, ಗರಂ ಮಸಾಲ ಸಿದ್ಧವಾಗಿದೆ. ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ ಮತ್ತು ಮೇಲೋಗರಗಳಿಗೆ ಅಗತ್ಯವಿರುವಂತೆ ಬಳಸಿ.