Go Back
+ servings
banana flower recipes
Print Pin
5 from 14 votes

ಬಾಳೆ ಹೂವು ರೆಸಿಪಿಗಳು | banana flower recipes in kannada

ಸುಲಭ ಬಾಳೆ ಹೂವು ಪಾಕವಿಧಾನಗಳು
ಕೋರ್ಸ್ ಊಟ
ಪಾಕಪದ್ಧತಿ ದಕ್ಷಿಣ ಭಾರತೀಯ
ಕೀವರ್ಡ್ ಬಾಳೆ ಹೂವು ರೆಸಿಪಿಗಳು
ತಯಾರಿ ಸಮಯ 30 minutes
ಅಡುಗೆ ಸಮಯ 1 hour
ಒಟ್ಟು ಸಮಯ 1 hour 30 minutes
ಸೇವೆಗಳು 4 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

  • 1 ಬಾಳೆ ಹೂ / ಬಾಳೆ ಹೂವು

ಪದರಗಳನ್ನು ಬೇಯಿಸಲು

  • ನೀರು
  • ½ ಟೀಸ್ಪೂನ್ ಅರಿಶಿನ
  • 1 ಟೀಸ್ಪೂನ್ ಉಪ್ಪು

ಚಟ್ನಿಗಾಗಿ:

  • 3 ಟೀಸ್ಪೂನ್ ಎಣ್ಣೆ
  • 2 ಟೇಬಲ್ಸ್ಪೂನ್ ಕಡ್ಲೆ ಬೇಳೆ
  • 2 ಟೇಬಲ್ಸ್ಪೂನ್ ಉದ್ದಿನ ಬೇಳೆ 
  • 3 ಒಣಗಿದ ಕೆಂಪು ಮೆಣಸಿನಕಾಯಿ
  • 1 ಕಪ್ ತೆಂಗಿನಕಾಯಿ ತುರಿದ
  • ಸಣ್ಣ ಚೆಂಡು ಗಾತ್ರದ ಹುಣಸೆಹಣ್ಣು
  • 2 ಟೀಸ್ಪೂನ್ ಬೆಲ್ಲ
  • 1 ಟೀಸ್ಪೂನ್ ಉಪ್ಪು

ಹೂವುಗಳ ಬಣ್ಣ ಹಿಡಿದಿಡಲು:

  • ಕಪ್ ಮೊಸರು
  • 3 ಕಪ್ ನೀರು

ಬಾಳೆ ಹೂವುಗಳ ಚಿಪ್ಸ್ಗಾಗಿ:

  • ½ ಕಪ್ ಮೈದಾ
  • ½ ಕಪ್ ಕಾರ್ನ್ ಫ್ಲೋರ್
  • ½ ಟೀಸ್ಪೂನ್ ಅರಿಶಿನ
  • 1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
  • ½ ಟೀಸ್ಪೂನ್ ಗರಂ ಮಸಾಲ
  • ¼ ಟೀಸ್ಪೂನ್ ಒಳ್ಳೆ ಮೆಣಸು ಪುಡಿ
  • ½ ಟೀಸ್ಪೂನ್ ಚಾಟ್ ಮಸಾಲ
  • 1 ಟೀಸ್ಪೂನ್ ಶುಂಠಿ ಪೇಸ್ಟ್
  • ½ ಟೀಸ್ಪೂನ್ ಉಪ್ಪು
  • ¾ ಕಪ್ ನೀರು
  • ಎಣ್ಣೆ ಹುರಿಯಲು

ಬಾಳೆ ಹೂವಿನ ಹೃದಯ ಭಾಗ ಕುದಿಸಲು:

  • ನೀರು
  • ½ ಟೀಸ್ಪೂನ್ ಅರಿಶಿನ
  • 1 ಟೀಸ್ಪೂನ್ ಉಪ್ಪು

ಪಲ್ಯಗಾಗಿ:

  • 2 ಟೇಬಲ್ಸ್ಪೂನ್ ಎಣ್ಣೆ
  • 1 ಟೀಸ್ಪೂನ್ ಸಾಸಿವೆ
  • 1 ಟೀಸ್ಪೂನ್ ಕಡ್ಲೆ ಬೇಳೆ
  • 1 ಟೀಸ್ಪೂನ್ ಉದ್ದು ಬೇಳೆ
  • ಕೆಲವು ಕರಿಬೇವಿನ ಎಲೆಗಳು
  • 1 ಈರುಳ್ಳಿ ಸ ಣ್ಣಗೆ ಕತ್ತರಿಸಿ
  • 2 ಮೆಣಸಿನಕಾಯಿ ಸೀಳಿದ
  • 2 ಬೆಳ್ಳುಳ್ಳಿ ಪುಡಿಮಾಡಿದ
  • 1 ಇಂಚಿನ ಶುಂಠಿ ಸಣ್ಣಗೆ ಕತ್ತರಿಸಿದ
  • ½ ಟೀಸ್ಪೂನ್ ಉಪ್ಪು
  • 2 ಟೇಬಲ್ಸ್ಪೂನ್ ತೆಂಗಿನಕಾಯಿ ತುರಿದ
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿದ
  • 2 ಟೇಬಲ್ಸ್ಪೂನ್ ನಿಂಬೆ ರಸ

ಸೂಚನೆಗಳು

  • ಮೊದಲನೆಯದಾಗಿ, ದಳಗಳನ್ನು ಬಿಡಿಸಿ ಹೂವುಗಳನ್ನು ಸಂಗ್ರಹಿಸಿ.
  • ಈಗ ಸ್ವಚ್ಚ್ಚಗೊಳಿಸಿ, ಹೂಗೊಂಚಲುಗಳು, ಪದರಗಳು ಮತ್ತು ಹೃದಯ ಭಾಗ (ಕೊಚ್ಚಿ) ಬೇರೆ ಮಾಡಿ ಪಕ್ಕಕ್ಕೆ ಇರಿಸಿ.

ಚಟ್ನಿ ತಯಾರಿಕೆ:

  • ಮೊದಲನೆಯದಾಗಿ, ದೊಡ್ಡ ಪಾತ್ರೆಯಲ್ಲಿ ನೀರು, ½ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
  • ಕತ್ತರಿಸಿದ ಪದರಗಳನ್ನು ಸೇರಿಸಿ 5 ನಿಮಿಷಗಳ ಕಾಲ ಕುದಿಸಿ.
  • ನೀರು ಸೋಸಿ ಪಕ್ಕಕ್ಕೆ ಇರಿಸಿ.
  • ಬಾಣಲೆಯಲ್ಲಿ 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 2 ಟೀಸ್ಪೂನ್ ಕಡ್ಲೆ ಬೇಳೆ, 2 ಟೀಸ್ಪೂನ್ ಉದ್ದು ಬೇಳೆ, 3 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
  • ಪರಿಮಳ ಬರುವವರೆಗೆ ಕಡಿಮೆ ಜ್ವಾಲೆಯಲ್ಲಿ ಹುರಿಯಿರಿ.
  • ಸಂಪೂರ್ಣವಾಗಿ ತಣ್ಣಗಾಗಿಸಿ, ಮಿಕ್ಸರ್ ಗೆ ವರ್ಗಾಯಿಸಿ.
  • 1 ಕಪ್ ತೆಂಗಿನಕಾಯಿ, ಸಣ್ಣ ಚೆಂಡು ಗಾತ್ರದ ಹುಣಸೆಹಣ್ಣು, 2 ಟೀಸ್ಪೂನ್ ಬೆಲ್ಲ ಮತ್ತು 1 ಟೀಸ್ಪೂನ್ ಉಪ್ಪಿನೊಂದಿಗೆ ಬೇಯಿಸಿದ ಪದರಗಳನ್ನು ಸೇರಿಸಿ.
  • ಅಗತ್ಯವಿರುವಂತೆ ನೀರನ್ನು ಸೇರಿಸಿ ನುಣ್ಣಗೆ ಮಿಶ್ರಣ ಮಾಡಿ.
  • ಒಗ್ಗರಣೆ ಸೇರಿಸಿ. ಬಾಳೆ ಹೂವಿನ ಚಟ್ನಿ ಅಥವಾ ಪೂಂಬೆ ಚಟ್ನಿ ಬಿಸಿ ಅನ್ನದೊಂದಿಗೆ ಆನಂದಿಸಲು ಸಿದ್ಧವಾಗಿದೆ.

ಚಿಪ್ಸ್ ತಯಾರಿಕೆ:

  • ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ ¼ ಕಪ್ ಮೊಸರು ಮತ್ತು 3 ಕಪ್ ನೀರು ತೆಗೆದುಕೊಳ್ಳಿ.
  • ಚೆನ್ನಾಗಿ ಬೀಟ್ ಮಾಡಿ.
  • ಸ್ವಚ್ಚಗೊಳಿಸಿದ ಫ್ಲೋರೆಟ್‌ಗಳನ್ನು 10 ನಿಮಿಷಗಳ ಕಾಲ ನೆನೆಸಿಡಿ.
  • ನೀರನ್ನು ಸೋಸಿ ಪಕ್ಕಕ್ಕೆ ಇರಿಸಿ.
  • ದೊಡ್ಡ ಬಟ್ಟಲಿನಲ್ಲಿ ½ ಕಪ್ ಮೈದಾ, ½ ಕಪ್ ಕಾರ್ನ್ ಫ್ಲೋರ್ ತೆಗೆದುಕೊಳ್ಳಿ.
  • ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಗರಂ ಮಸಾಲ, ¼ ಟೀಸ್ಪೂನ್ ಪೆಪ್ಪರ್ ಪೌಡರ್, ½ ಟೀಸ್ಪೂನ್ ಚಾಟ್ ಮಸಾಲ, 1 ಟೀಸ್ಪೂನ್ ಶುಂಠಿ ಪೇಸ್ಟ್ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
  • ¾ ಕಪ್ ನೀರು ಸೇರಿಸಿ ದಪ್ಪ ಬ್ಯಾಟರ್ ತಯಾರಿಸಿ.
  • ಈಗ ಫ್ಲೋರೆಟ್ಸ್ ಗಳನ್ನು ಸೇರಿಸಿ ಒಂದೇ ರೀತಿಯಾಗಿ ಕೋಟ್ ಮಾಡಿ.
  • ಬಿಸಿ ಎಣ್ಣೆಯಲ್ಲಿ ಹುರಿಯಿರಿ.
  • ಒಮ್ಮೆ ಚಿಪ್ಸ್ ಕಂದು ಬಣ್ಣ ಬರುವವರೆಗೆ ಅಥವಾ ಗರಿಗರಿಯಾಗುವವರೆಗೆ ಹುರಿದು ಅಡಿಗೆ ಕಾಗದದ ಮೇಲೆ ತೆಗೆಯಿರಿ.
  • ಅಂತಿಮವಾಗಿ, ಬಾಳೆ ಹೂವಿನ ಚಿಪ್ಸ್ ಅನ್ನು ತಕ್ಷಣ ಆನಂದಿಸಿ.

ಬಾಳೆ ಹೂವಿನ ಪಲ್ಯ ತಯಾರಿಕೆ:

  • ಮೊದಲನೆಯದಾಗಿ, ದೊಡ್ಡ ಪಾತ್ರೆಯಲ್ಲಿ ನೀರು, ½ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
  • ಕತ್ತರಿಸಿದ ಬಾಳೆ ಹೂವನ್ನು ಸೇರಿಸಿ 10 ನಿಮಿಷ ಚೆನ್ನಾಗಿ ಕುದಿಸಿ.
  • ನೀರು ಸೋಸಿ ಪಕ್ಕಕ್ಕೆ ಇರಿಸಿ.
  • ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಕಡ್ಲೆ ಬೇಳೆ, 1 ಟೀಸ್ಪೂನ್ ಉದ್ದು ಬೇಳೆ, ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ.
  • ಇದಕ್ಕೆ 1 ಈರುಳ್ಳಿ, 2 ಮೆಣಸಿನಕಾಯಿ, 2 ಬೆಳ್ಳುಳ್ಳಿ, 1 ಇಂಚು ಶುಂಠಿ ಸೇರಿಸಿ.
  • ಬೇಯಿಸಿದ ಬಾಳೆ ಹೂವನ್ನು ಸೇರಿಸಿ, ½ ಟೀಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಮುಚ್ಚಳ ಮುಚ್ಚಿ 5-10 ನಿಮಿಷಗಳ ಕಾಲ ಅಥವಾ ಎಲ್ಲವೂ ಚೆನ್ನಾಗಿ ಬೇಯುವವರೆಗೆ ಸಣ್ಣ ಜ್ವಾಲೆಯಲ್ಲಿಡಿ.
  • ಈಗ 2 ಟೀಸ್ಪೂನ್ ತೆಂಗಿನಕಾಯಿ, 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು ಮತ್ತು 2 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
  • ಅಂತಿಮವಾಗಿ, ಬಾಳೆ ಹೂವಿನ ಪಲ್ಯವನ್ನು ಬಿಸಿ ಅನ್ನದ ಜೊತೆಗೆ ಆನಂದಿಸಿ.