Go Back
+ servings
how to make roti
Print Pin
No ratings yet

ರೋಟಿ ಮಾಡುವುದು ಹೇಗೆ | how to make roti | ಮೃದುವಾದ ಚಪಾತಿ | ಫುಲ್ಕಾ

ಸುಲಭ ರೊಟ್ಟಿ ಮಾಡುವುದು ಹೇಗೆ | ಮೃದುವಾದ ಚಪಾತಿ | ಫುಲ್ಕಾ
ಕೋರ್ಸ್ ರೋಟಿ
ಪಾಕಪದ್ಧತಿ ಭಾರತೀಯ
ಕೀವರ್ಡ್ ರೋಟಿ ಮಾಡುವುದು ಹೇಗೆ
ತಯಾರಿ ಸಮಯ 15 minutes
ಅಡುಗೆ ಸಮಯ 20 minutes
ವಿಶ್ರಾಂತಿ ಸಮಯ 20 minutes
ಒಟ್ಟು ಸಮಯ 55 minutes
ಸೇವೆಗಳು 15
ಲೇಖಕ HEBBARS KITCHEN

ಪದಾರ್ಥಗಳು

  • 3 ಕಪ್ ಗೋಧಿ ಹಿಟ್ಟು / ಅಟ್ಟಾ
  • 1 ಟೀಸ್ಪೂನ್ ಉಪ್ಪು
  • ಬೆಚ್ಚಗಿನ ನೀರು ಬೆರೆಸಲು
  • ಎಣ್ಣೆ ಹುರಿಯಲು

ಸೂಚನೆಗಳು

  • ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 3 ಕಪ್ ಗೋಧಿ ಹಿಟ್ಟು ಮತ್ತು 1 ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ. ಚೆನ್ನಾಗಿ ಬೆರೆಸಿ.
  • ಈಗ ಅಗತ್ಯವಿರುವಂತೆ ನೀರು ಸೇರಿಸಿ ಹಿಟ್ಟನ್ನು ಬೆರೆಸಿಕೊಳ್ಳಿ. ನೀರನ್ನು ಬಳಸುವುದರಿಂದ ಮೃದುವಾದ ಹಿಟ್ಟನ್ನು ತಯಾರಿಸಲು ಸಹಾಯ ಮಾಡುತ್ತದೆ.
  • ಹಿಟ್ಟನ್ನು ಪಂಚ್ ಮಾಡಿ ನೀರನ್ನು ಸಿಂಪಡಿಸಿ.
  • ಹಿಟ್ಟನ್ನು ತುಂಬಾ ಮೃದುವಾಗಿ ಹಾಗೂ ಅಂಟದ ತನಕ ನಾದಿಕೊಳ್ಳಿ. ಸರಿಸುಮಾರು 7 ನಿಮಿಷಗಳ ಕಾಲ ನಾದುವ ಅಗತ್ಯವಿರುತ್ತದೆ.
  • ಈಗ ಹಿಟ್ಟನ್ನು ಗಾಳಿಯಾಡದ ಡಬ್ಬಿಯಲ್ಲಿ ಇರಿಸಿ ಮತ್ತು 1 ಟೀಸ್ಪೂನ್ ಎಣ್ಣೆಯಿಂದ ಗ್ರೀಸ್ ಮಾಡಿ.
  • ಮುಚ್ಚಿ 20 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.

ಫುಲ್ಕಾ ತಯಾರಿಕೆ:

  • ಹಿಟ್ಟನ್ನು ಮತ್ತೆ ನಾದಿ ಚೆಂಡಿನ ಗಾತ್ರದ ಹಿಟ್ಟನ್ನು ತೆಗೆದು ಏಕರೂಪವಾಗಿ ಸುತ್ತಿಕೊಳ್ಳಿ.
  • ಗೋಧಿ ಹಿಟ್ಟಿನೊಂದಿಗೆ ಡಸ್ಟ್ ಮಾಡಿ ತೆಳುವಾಗಿ ಲಟ್ಟಿಸಿಕೊಳ್ಳಿ.
  • ಹೆಚ್ಚು ಒತ್ತಡ ಹಾಕದೆ ಲಟ್ಟಿಸಿರಿ.
  • ಲಟ್ಟಿಸಿಕೊಂಡ ಡಿಸ್ಕ್ ಅನ್ನು ಬಿಸಿ ತವಾದಲ್ಲಿ ಇರಿಸಿ. ಜ್ವಾಲೆಯು ಮಧ್ಯಮದಲ್ಲಿದೆಯಾ ಎಂದು ಖಚಿತಪಡಿಸಿಕೊಳ್ಳಿ.
  • ಬೇಸ್ ಅರ್ಧ ಬೇಯುವವರೆಗೆ ಬೇಯಿಸಿ. ಬೇಸ್ ಅರ್ಧ ಬೆಂದ ನಂತರ, ತಿರುಗಿಸಿ.
  • ಸಂಪೂರ್ಣವಾಗಿ ಇನ್ನೊಂದು ಬದಿಯನ್ನು ಬೇಯಿಸಿ.
  • ಈಗ ಅರ್ಧ ಬೆಂದ ಭಾಗವನ್ನು ಜ್ವಾಲೆಯ ಮೇಲೆ ಇರಿಸಿ.
  • ಜ್ವಾಲೆಯನ್ನು ಉಬ್ಬುವವರೆಗೆ ಹೆಚ್ಚಿಸಿ.
  • ತಿರುಗಿಸಿ ಎರಡೂ ಬದಿಯನ್ನು ಜ್ವಾಲೆಯಲ್ಲಿ ಬೇಯಿಸಿ.
  • ಅಂತಿಮವಾಗಿ, ಫುಲ್ಕಾ ಸಿದ್ಧವಾಗಿದೆ.

ರೋಟಿ ತಯಾರಿಕೆ:

  • ಮೊದಲನೆಯದಾಗಿ, ಲಟ್ಟಿಸಿದ ಹಿಟ್ಟನ್ನು ಬಿಸಿ ತವಾ ಮೇಲೆ ಹಾಕಿ.
  • ಬೇಸ್ ಸಂಪೂರ್ಣವಾಗಿ ಬೇಯಿಸುವವರೆಗೆ ಮಧ್ಯಮ ಉರಿಯಲ್ಲಿ ಇಡಿ.
  • ಬೇಸ್ ಸಂಪೂರ್ಣವಾಗಿ ಬೇಯಿಸಿದ ನಂತರ ತಿರುಗಿಸಿ. ರೋಟಿಯು ಪಫ್ ಅಪ್ ಆಗಲು ಪ್ರಾರಂಭಿಸುತ್ತದೆ.
  • ಒಂದು ಸಲ ರೋಟಿ ಪಫ್ ಆದ ನಂತರ ಏಕರೂಪವಾಗಿ ಪಫ್ ಮಾಡಲು, ನಿಧಾನವಾಗಿ ಒತ್ತಿರಿ.
  • ಅಂತಿಮವಾಗಿ, ರೋಟಿ ಸಿದ್ಧವಾಗಿದೆ.

ಚಪಾತಿ ತಯಾರಿಕೆ:

  • ಮೊದಲನೆಯದಾಗಿ, ಚೆಂಡಿನ ಗಾತ್ರದ ಗೋಧಿ ಹಿಟ್ಟನ್ನು ತೆಗೆದುಕೊಂಡು, ಹಿಟ್ಟಿನಿಂದ ಡಸ್ಟ್ ಮಾಡಿಕೊಳ್ಳಿ.
  • 5 ಸೆಂ.ಮೀ  ವ್ಯಾಸದ ದಪ್ಪ ಡಿಸ್ಕ್ಗೆ ಲಟ್ಟಿಸಿರಿ.
  • ಈಗ ½ ಟೀಸ್ಪೂನ್ ಎಣ್ಣೆಯನ್ನು ಏಕರೂಪವಾಗಿ ಹರಡಿ.
  • ತ್ರಿಕೋನಕ್ಕೆ ಮಡಚಿ ಮತ್ತು ಗೋಧಿ ಹಿಟ್ಟಿನಿಂದ ಡಸ್ಟ್ ಮಾಡಿಕೊಳ್ಳಿ.
  • ಹೆಚ್ಚು ಒತ್ತಡ ಹಾಕದೆ, ನಿಧಾನವಾಗಿ ಲಟ್ಟಿಸಿರಿ.
  • ತೆಳುವಾದ ಚಪಾತಿ ಹೊಂದಲು ಸಾಧ್ಯವಾದಷ್ಟು ತೆಳ್ಳಗೆ ಲಟ್ಟಿಸಿರಿ.
  • ಈಗ ಲಟ್ಟಿಸಿಕೊಂಡ ಚಪಾತಿಯನ್ನು ಬಿಸಿ ತವಾ ಮೇಲೆ ಇರಿಸಿ.
  • ಬೇಸ್ ಬೇಯುವವರೆಗೆ ಮಧ್ಯಮ ಉರಿಯಲ್ಲಿ ಇಡಿ.
  • ತಿರುಗಿಸಿ, ಎರಡೂ ಬದಿ ಬೇಯಿಸಿ.
  • ಒಂದು ಚಮಚ ಎಣ್ಣೆಯನ್ನು ಹರಡಿ ನಿಧಾನವಾಗಿ ಒತ್ತಿರಿ.
  • ಚಪಾತಿಯ ಎರಡೂ ಬದಿ ಚೆನ್ನಾಗಿ ಬೆಯುವವರೆಗೆ ಬೇಯಿಸಿ.
  • ಅಂತಿಮವಾಗಿ, ಚಪಾತಿ ಸಿದ್ಧವಾಗಿದೆ.