ಮೊದಲನೆಯದಾಗಿ, ಬಾಣಲೆಯಲ್ಲಿ 1 ಟೀಸ್ಪೂನ್ ಕೊತ್ತಂಬರಿ ಬೀಜ, ½ ಟೀಸ್ಪೂನ್ ಜೀರಿಗೆ, ½ ಟೀಸ್ಪೂನ್ ಫೆನ್ನೆಲ್, ½ ಟೀಸ್ಪೂನ್ ಪೆಪರ್, ½ ಇಂಚಿನ ದಾಲ್ಚಿನ್ನಿ, 1 ಪಾಡ್ ಕಪ್ಪು ಏಲಕ್ಕಿ ಮತ್ತು 6 ಲವಂಗ ತೆಗೆದುಕೊಳ್ಳಿ.
1 ಸ್ಟಾರ್ ಸೋಂಪು, 1 ಬೇ ಎಲೆ, 1 ಟೀಸ್ಪೂನ್ ಎಳ್ಳು, 2 ಟೀಸ್ಪೂನ್ ಒಣ ತೆಂಗಿನಕಾಯಿ ಮತ್ತು 3 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
ಮಸಾಲೆಗಳು ಪರಿಮಳ ಆಗುವವರೆಗೆ ಕಡಿಮೆ ಉರಿಯಲ್ಲಿ ಡ್ರೈ ಆಗಿ ಹುರಿಯಿರಿ.
ಸಂಪೂರ್ಣವಾಗಿ ತಣ್ಣಗಾಗಿಸಿ, ಸಣ್ಣ ಮಿಕ್ಸಿ ಜಾರ್ಗೆ ವರ್ಗಾಯಿಸಿ.
½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಆಮ್ಚೂರ್, 1 ಟೀಸ್ಪೂನ್ ಸಕ್ಕರೆ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
ಸಣ್ಣ ಪುಡಿಯನ್ನಾಗಿ ರುಬ್ಬಿಕೊಳ್ಳಿ. ಈಗ ದಾಬೆಲಿ ಮಸಾಲ ಸಿದ್ಧವಾಗಿದೆ. ನಂತರ ಪಕ್ಕಕ್ಕೆ ಇರಿಸಿ.