Go Back
+ servings
beans ki sabji recipe
Print Pin
5 from 1 vote

ಬೀನ್ಸ್ ಕಿ ಸಬ್ಜಿ ರೆಸಿಪಿ | beans ki sabji in kannada | ಬೀನ್ಸ್ ಪಲ್ಯ

ಸುಲಭ ಬೀನ್ಸ್ ಕಿ ಸಬ್ಜಿ ಪಾಕವಿಧಾನ | ಬೀನ್ಸ್ ಪಲ್ಯ
ಕೋರ್ಸ್ ಸೈಡ್ ಡಿಶ್
ಪಾಕಪದ್ಧತಿ ಉತ್ತರ ಭಾರತೀಯ
ಕೀವರ್ಡ್ ಬೀನ್ಸ್ ಕಿ ಸಬ್ಜಿ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 10 minutes
ಒಟ್ಟು ಸಮಯ 20 minutes
ಸೇವೆಗಳು 3 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

  • 2 ಟೇಬಲ್ಸ್ಪೂನ್ ಎಣ್ಣೆ
  • ½ ಟೀಸ್ಪೂನ್ ಜೀರಿಗೆ
  • 1 ಟೀಸ್ಪೂನ್ ಕಸೂರಿ ಮೇಥಿ
  • 1 ಈರುಳ್ಳಿ ಸಣ್ಣಗೆ ಕತ್ತರಿಸಿದ
  • 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • 400 ಗ್ರಾಂ ಗ್ರಾಂ ಬೀನ್ಸ್ ಕತ್ತರಿಸಿದ
  • ½ ಟೀಸ್ಪೂನ್ ಅರಿಶಿನ
  • ½ ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
  • 1 ಟೀಸ್ಪೂನ್ ಕೊತ್ತಂಬರಿ ಪುಡಿ
  • ½ ಟೀಸ್ಪೂನ್ ಗರಂ ಮಸಾಲ
  • ½ ಟೀಸ್ಪೂನ್ ಆಮಚೂರ್ ಪುಡಿ
  • ¾ ಟೀಸ್ಪೂನ್ ಉಪ್ಪು
  • 1 ಟೊಮೆಟೊ ಸ್ಥೂಲವಾಗಿ ಕತ್ತರಿಸಿದ
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿದ

ಸೂಚನೆಗಳು

  • ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 2 ಟೇಬಲ್ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ ½ ಟೀಸ್ಪೂನ್ ಜೀರಿಗೆ ಮತ್ತು 1 ಟೀಸ್ಪೂನ್ ಕಸೂರಿ ಮೇಥಿ ಪರಿಮಳ ಬರುವವರೆಗೆ ಫ್ರೈ ಮಾಡಿ.
  • 1 ಈರುಳ್ಳಿ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಸಾಟ್ ಮಾಡಿ.
  • ಈಗ, 400 ಗ್ರಾಂ ಬೀನ್ಸ್ ಸೇರಿಸಿ 2 ನಿಮಿಷಗಳ ಕಾಲ ಫ್ರೈ ಮಾಡಿ.
  • ½ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಮೆಣಸಿನ ಪುಡಿ, 1 ಟೀಸ್ಪೂನ್ ಕೊತ್ತಂಬರಿ ಪುಡಿ, ½ ಟೀಸ್ಪೂನ್ ಗರಂ ಮಸಾಲ, ½ ಟೀಸ್ಪೂನ್ ಆಮ್ಚೂರ್ ಮತ್ತು ¾ ಟೀಸ್ಪೂನ್ ಉಪ್ಪು ಸೇರಿಸಿ.
  • ಒಂದು ನಿಮಿಷ ಅಥವಾ ಮಸಾಲೆ ಚೆನ್ನಾಗಿ ಬೆರೆಸುವವರೆಗೆ ಸಾಟ್ ಮಾಡಿ.
  • ಮುಚ್ಚಿ, 5 ನಿಮಿಷ ಅಥವಾ ಬೀನ್ಸ್ ಅರ್ಧ ಬೇಯುವವರೆಗೆ ಬೇಯಿಸಿ.
  • ಈಗ 1 ಟೊಮೆಟೊ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • 5 ನಿಮಿಷಗಳ ಕಾಲ ಅಥವಾ ಟೊಮ್ಯಾಟೊ ಮೃದುವಾಗುವವರೆಗೆ ಮುಚ್ಚಿ ಸಿಮ್ಮೆರ್ ನಲ್ಲಿಡಿ.
  • ಅಂತಿಮವಾಗಿ, ಚಪಾತಿ ಅಥವಾ ಅನ್ನದೊಂದಿಗೆ ಬೀನ್ಸ್ ಕಿ ಸಬ್ಜಿಯನ್ನು ಆನಂದಿಸಿ.