ಮೊದಲನೆಯದಾಗಿ, 5 ತುಂಡು ಬ್ರೆಡ್ ಗಳನ್ನು ತೆಗೆದುಕೊಂಡು, ಬದಿಗಳನ್ನು ಟ್ರಿಮ್ ಮಾಡಿ.
ಟರ್ನಿಂಗ್ ಟೇಬಲ್ ಮೇಲೆ ಬ್ರೆಡ್ ತುಂಡು ಇರಿಸಿ. ಒಂದು ಟೀಸ್ಪೂನ್ ಚೆರ್ರಿ ಸಿರಪ್ ನೊಂದಿಗೆ ಬ್ರಷ್ ಮಾಡಿ.
ಈಗ ಅದರ ಮೇಲೆ ಒಂದು ಟೇಬಲ್ಸ್ಪೂನ್ ಫ್ರಾಸ್ಟಿಂಗ್ ಅನ್ನು ಹರಡಿ.
ಮತ್ತೊಂದು ಬ್ರೆಡ್ ಸ್ಲೈಸ್ ಇರಿಸಿ. ಚೆರ್ರಿ ಸಿರಪ್ ಮತ್ತು ಫ್ರಾಸ್ಟಿಂಗ್ ಅನ್ನು 5 ಸ್ಲೈಸ್ ಗಳಿಗೂ ಪುನರಾವರ್ತಿಸಿ.
ಕೊನೆಯ ಬ್ರೆಡ್ ಸ್ಲೈಸ್ ನಲ್ಲಿ, ಬದಿಗಳಲ್ಲಿ ಏಕರೂಪವಾಗಿ ಫ್ರಾಸ್ಟಿಂಗ್ ನೊಂದಿಗೆ ಕವರ್ ಮಾಡಿ.
ಪೀಲರ್ ಬಳಸಿ ಡಾರ್ಕ್ ಚಾಕೊಲೇಟ್ ಅನ್ನು ತುರಿಯಿರಿ.
ಬ್ಲಾಕ್ ಫಾರೆಸ್ಟ್ ಕೇಕ್ ಪಾಕವಿಧಾನದಲ್ಲಿ ಮಾಡಿದಂತೆ, ಡಾರ್ಕ್ ಚಾಕೊಲೇಟ್ ನ ತುರಿದಿದ್ದನ್ನು ಕೇಕ್ ನ ಬದಿಗಳಲ್ಲಿ ಅಂಟಿಸಿ.
ಅದನ್ನು ಮೇಲೆ ಸಹ ಸಿಂಪಡಿಸಿ ಮತ್ತು ಏಕರೂಪವಾಗಿ ಅಂಟಿಕೊಳ್ಳುತ್ತಿದೆಯೇ ಎಂದು ಖಚಿತಪಡಿಸಿಕೊಂಡು ನಿಧಾನವಾಗಿ ಟ್ಯಾಪ್ ಮಾಡಿ.
ವಿಪ್ಪಿಂಗ್ ಕ್ರೀಮ್ ಅನ್ನು ಸ್ಟಾರ್ ನೋಜ್ಝಲ್ ಪೈಪಿಂಗ್ ಬ್ಯಾಗ್ ಗೆ ತುಂಬಿಸಿ. ಹಿಂಡಿ, ಕೇಕ್ ಮೇಲೆ ವಿನ್ಯಾಸವನ್ನು ರಚಿಸಿ.
ಚೆರ್ರಿ ಜೊತೆಗೆ ಟಾಪ್ ಮಾಡಿ, ಕೇಕ್ ಸುಂದರವಾಗಿ ಕಾಣುತ್ತದೆ.
ಹಾಗೆಯೇ, ಕೇಕ್ ನ ಬದಿಗಳಲ್ಲೂ ಫ್ರಾಸ್ಟಿಂಗ್ನಿಂದ ಅಲಂಕರಿಸಿ.
ಅಂತಿಮವಾಗಿ, 30 ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿಟ್ಟು ಬ್ರೆಡ್ ಕೇಕ್ ಪಾಕವಿಧಾನವನ್ನು ಆನಂದಿಸಿ.