ಹಿಟ್ಟನ್ನು 20 ನಿಮಿಷಗಳ ಕಾಲ ವಿಶ್ರಮಿಸಲು ಬಿಟ್ಟ ನಂತರ, ಬೆರೆಸುವುದನ್ನು ಮುಂದುವರಿಸಿ.
ಸಣ್ಣ ಚೆಂಡು ಗಾತ್ರದ ಹಿಟ್ಟನ್ನು ತೆಗೆಯಿರಿ.
ಗೋಧಿ ಹಿಟ್ಟಿನೊಂದಿಗೆ ಡಸ್ಟ್ ಮಾಡಿ ತೆಳುವಾದ ದಪ್ಪಕ್ಕೆ ಲಟ್ಟಿಸಿರಿ. ಲಟ್ಟಿಸಿದ ರೊಟ್ಟಿಯ ಮೇಲೆ ಒಂದು ಟೀಸ್ಪೂನ್ ತುಪ್ಪ ಹರಡಿ.
ತಯಾರಾದ ಮಸಾಲಾ ಮಿಶ್ರಣದ 1 ಟೀಸ್ಪೂನ್ ಸಿಂಪಡಿಸಿ.
ಈಗ ಓರೆಕೋರೆ ಮಡಚಿ ಸುರುಳಿಯಾಕಾರದಂತೆ ರೋಲ್ ಮಾಡಿ.
ಒಂದು ಬದಿಯಲ್ಲಿ, 2 ಬೆಳ್ಳುಳ್ಳಿ ಮತ್ತು ½ ಟೀಸ್ಪೂನ್ ಎಳ್ಳು ಅಂಟಿಸಿರಿ.
ಗೋಧಿ ಹಿಟ್ಟು ಸಿಂಪಡಿಸಿ ಮತ್ತು ನಿಧಾನವಾಗಿ ಲಟ್ಟಿಸಿರಿ.
ಅಗತ್ಯವಿದ್ದರೆ ಗೋಧಿ ಹಿಟ್ಟನ್ನು ಸಿಂಪಡಿಸುವ ಮೂಲಕ ಸ್ವಲ್ಪ ದಪ್ಪ ದಪ್ಪಕ್ಕೆ ಲಟ್ಟಿಸಿರಿ.
ಈಗ ಜ್ವಾಲೆಯನ್ನು ಮಧ್ಯಮವಾಗಿಟ್ಟುಕೊಂಡು ಬಿಸಿ ತವಾದಲ್ಲಿ ಬೇಯಿಸಿ.
ಎರಡೂ ಬದಿಗಳಲ್ಲಿ ಎಣ್ಣೆ ಹರಡಿ ಎರಡೂ ಬದಿಗಳನ್ನು ರೋಸ್ಟ್ ಮಾಡಿ.
ಪರಾಟ ಗೋಲ್ಡನ್ ಬ್ರೌನ್ ಆಗುವವರೆಗೆ ಮತ್ತು ಪದರಗಳು ಪ್ರತ್ಯೇಕವಾಗುವವರೆಗೆ ಬೇಯಿಸಿ.
ಅಂತಿಮವಾಗಿ, ಮಸಾಲ ಲಚ್ಚಾ ಪರಾಟವನ್ನು ಪುಡಿಮಾಡಿ ಮತ್ತು ಬೆಣ್ಣೆಯೊಂದಿಗೆ ಆನಂದಿಸಿ.