Go Back
+ servings
green chutney lachha paratha
Print Pin
No ratings yet

ಚಟ್ನಿ ಪರಾಟ ರೆಸಿಪಿ | chutney paratha in kannada | ಚಟ್ನಿ ಸ್ಟಫ್ಡ್ ಪರೋಟ

ಸುಲಭ ಚಟ್ನಿ ಪರಾಟ ಪಾಕವಿಧಾನ | ಗ್ರೀನ್ ಚಟ್ನಿ ಲಚ್ಚಾ ಪರಾಟ | ಚಟ್ನಿ ಸ್ಟಫ್ಫ್ಡ್ ಪರೋಟ
ಕೋರ್ಸ್ ಪರಾಟ
ಪಾಕಪದ್ಧತಿ ಉತ್ತರ ಭಾರತೀಯ
ಕೀವರ್ಡ್ ಚಟ್ನಿ ಪರಾಟ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 30 minutes
ಒಟ್ಟು ಸಮಯ 40 minutes
ಸೇವೆಗಳು 10 ಪರೋಟ
ಲೇಖಕ HEBBARS KITCHEN

ಪದಾರ್ಥಗಳು

ಡಫ್ಗಾಗಿ:

  • 2 ಕಪ್ ಗೋಧಿ ಹಿಟ್ಟು
  • ¼ ಟೀಸ್ಪೂನ್ ಕ್ಯಾರೋಮ್ ಸೀಡ್ಸ್ / ಓಮ
  • 1 ಟೀಸ್ಪೂನ್ ಕಸೂರಿ ಮೇಥಿ
  • ½ ಟೀಸ್ಪೂನ್ ಉಪ್ಪು
  • ನೀರು (ಬೆರೆಸುವುದಕ್ಕಾಗಿ)
  • 2 ಟೇಬಲ್ಸ್ಪೂನ್ ಎಣ್ಣೆ

ಹಸಿರು ಚಟ್ನಿಗಾಗಿ:

  • 1 ಕಪ್ ಕೊತ್ತಂಬರಿ ಸೊಪ್ಪು
  • ½ ಕಪ್ ಮಿಂಟ್/ ಪುದೀನ  
  • 2 ಬೆಳ್ಳುಳ್ಳಿ
  • 1 ಇಂಚಿನ ಶುಂಠಿ
  • 2 ಮೆಣಸಿನಕಾಯಿ
  • ½ ಟೀಸ್ಪೂನ್ ಜೀರಾ ಪೌಡರ್
  • ½ ಟೀಸ್ಪೂನ್ ಆಮ್ಚೂರ್
  • ¼ ಟೀಸ್ಪೂನ್ ಪೆಪ್ಪರ್ ಪೌಡರ್
  • ½ ಟೀಸ್ಪೂನ್ ಚಾಟ್ ಮಸಾಲಾ
  • ¼ ಟೀಸ್ಪೂನ್ ಉಪ್ಪು
  • 2 ಟೇಬಲ್ಸ್ಪೂನ್ ಕಡಲೆಕಾಯಿ (ಹುರಿದ)
  • 2 ಟೇಬಲ್ಸ್ಪೂನ್  ನಿಂಬೆ ರಸ

ಇತರ ಪದಾರ್ಥಗಳು:

  • ಗೋಧಿ ಹಿಟ್ಟು (ಡಸ್ಟಿಂಗ್ ಗಾಗಿ)
  • ಎಣ್ಣೆ ಅಥವಾ ತುಪ್ಪ (ರೋಸ್ಟಿಂಗ್ಗಾಗಿ)
  • ಸೆಸೇಮ್ ಸೀಡ್ಸ್ (ರೋಲಿಂಗ್ಗಾಗಿ)

ಸೂಚನೆಗಳು

ಲಚ್ಚಾ ಪರಾಟದ ಹಿಟ್ಟನ್ನು ತಯಾರಿಸುವುದು ಹೇಗೆ:

  • ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 2 ಕಪ್ ಗೋಧಿ ಹಿಟ್ಟು, ¼ ಟೀಸ್ಪೂನ್ ಓಮ, 1 ಟೀಸ್ಪೂನ್ ಕಸೂರಿ ಮೇಥಿ ಮತ್ತು ½ ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
  • ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  • ಈಗ 1 ಕಪ್ ನೀರು ಸೇರಿಸಿ ಮತ್ತು ಹಿಟ್ಟನ್ನು ಬೆರೆಸಲು ಪ್ರಾರಂಭಿಸಿ.
  • 2 ಟೇಬಲ್ಸ್ಪೂನ್ ಎಣ್ಣೆ ಸೇರಿಸಿ ಮೃದುವಾದ ಹಿಟ್ಟನ್ನು ರೂಪಿಸಿಕೊಳ್ಳಿ.
  • ಮುಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ.

ಹಸಿರು ಚಟ್ನಿಯನ್ನು ಹೇಗೆ ತಯಾರಿಸುವುದು:

  • ಮೊದಲಿಗೆ, ಒಂದು ಮಿಕ್ಸರ್ ನಲ್ಲಿ 1 ಕಪ್ ಕೊತ್ತಂಬರಿ ಸೊಪ್ಪು, ½ ಕಪ್ ಪುದೀನ, 2 ಬೆಳ್ಳುಳ್ಳಿ, 1 ಇಂಚಿನ ಶುಂಠಿ ಮತ್ತು 2 ಮೆಣಸಿನಕಾಯಿಯನ್ನು ತೆಗೆದುಕೊಳ್ಳಿ.
  • ½ ಟೀಸ್ಪೂನ್ ಜೀರಿಗೆ ಪುಡಿ, ½ ಟೀಸ್ಪೂನ್ ಆಮ್ಚೂರ್, ¼ ಟೀಸ್ಪೂನ್ ಪೆಪ್ಪರ್ ಪೌಡರ್, ½ ಟೀಸ್ಪೂಟ್ ಚಾಟ್ ಮಸಾಲಾ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
  • ಅಲ್ಲದೆ, 2 ಟೇಬಲ್ಸ್ಪೂನ್ ಕಡಲೆಕಾಯಿ ಮತ್ತು 2 ಟೇಬಲ್ಸ್ಪೂನ್ ನಿಂಬೆ ರಸವನ್ನು ಸೇರಿಸಿ.  ಕಡಲೆಕಾಯಿಯು ಚಟ್ನಿಯನ್ನು ದಪ್ಪವನ್ನಾಗಿಸಿ ತೇವಾಂಶವನ್ನು ಹೀರಿಕೊಳ್ಳುವಂತೆ ಸಹಾಯ ಮಾಡುತ್ತದೆ.
  • ಮೃದುವಾದ ಪೇಸ್ಟ್ ಗೆ ರುಬ್ಬಿಕೊಳ್ಳಿ ಮತ್ತು ಈಗ ಹಸಿರು ಚಟ್ನಿ ಸಿದ್ಧವಾಗಿದೆ.

ಹಸಿರು ಚಟ್ನಿ ಲಚ್ಚಾ ಪರಾಟವನ್ನು ಫೋಲ್ಡ್ ಹೇಗೆ ಮಾಡುವುದು:

  • 20 ನಿಮಿಷಗಳ ಕಾಲ ಹಿಟ್ಟನ್ನು ಹಾಗೆಯೇ ಬಿಟ್ಟ ನಂತರ, ಸ್ವಲ್ಪ ನಾದಿಕೊಳ್ಳಿ.
  • ಸಣ್ಣ ಚೆಂಡಿನ ಗಾತ್ರದ ಹಿಟ್ಟು ತೆಗೆದು ರೋಲ್ ಮಾಡಿ.
  • ಗೋಧಿ ಹಿಟ್ಟನ್ನು ಡಸ್ಟ್ ಮಾಡಿ ತೆಳುವಾದ ದಪ್ಪಕ್ಕೆ ರೋಲ್ ಮಾಡಿ.
  • ರೋಟಿ ರೋಲ್ ಮಾಡಿದ ಮೇಲೆ 1 ಟೀಸ್ಪೂನ್ ಹಸಿರು ಚಟ್ನಿಯನ್ನು ಅದಕ್ಕೆ ಹರಡಿ.
  • ಈಗ ಝಿಗ್-ಜಾಗ್ ನಂತೆ ಫೋಲ್ಡ್ ಮಾಡಿ ಮತ್ತು ಸುರುಳಿಯಾಗಿ ರೋಲ್ ಮಾಡಿ.
  • ಒಂದು ಬದಿಯಲ್ಲಿ, 1 ಟೀಸ್ಪೂನ್ ಎಳ್ಳು ಬೀಜಗಳನ್ನು ಅಂಟಿಸಿರಿ.
  • ಗೋಧಿ ಹಿಟ್ಟು ಸಿಂಪಡಿಸಿ ನಿಧಾನವಾಗಿ ರೋಲ್ ಮಾಡಿ.
  • ಅಗತ್ಯವಿದ್ದರೆ ಇನ್ನಷ್ಟು ಗೋಧಿ ಹಿಟ್ಟನ್ನು ಚಿಮುಕಿಸುವ ಮೂಲಕ ಸ್ವಲ್ಪ ದಪ್ಪಕ್ಕೆ ರೋಲ್ ಮಾಡಿ.
  • ಈಗ ಮಧ್ಯಮ ಜ್ವಾಲೆಯ ಮೇಲೆ ಬಿಸಿ ತವಾದಲ್ಲಿ ಬೇಯಿಸಿ.
  • ಎರಡೂ ಬದಿಗಳಲ್ಲಿ ಎಣ್ಣೆ ಹರಡಿ.
  • ಪರಾಟ ಗೋಲ್ಡನ್ ಬ್ರೌನ್ ಆಗುವವರೆಗೆ ಮತ್ತು ಲೇಯರ್ ಗಳು ಪ್ರತ್ಯೇಕವಾಗುವವರೆಗೂ ಕುಕ್ ಮಾಡಿ.
  • ಅಂತಿಮವಾಗಿ, ಹಸಿರು ಚಟ್ನಿ ಲಚ್ಚಾ ಪರಾಟವನ್ನು ಕ್ರಶ್ ಮಾಡಿ ಬೆಣ್ಣೆಯೊಂದಿಗೆ ಆನಂದಿಸಿ.