ಮೊದಲಿಗೆ, ಕುಕ್ಕರ್ನಲ್ಲಿ ½ ಕಪ್ ಕಪ್ಪು ಉದ್ದಿನ ಬೇಳೆ ಮತ್ತು 2 ಟೇಬಲ್ಸ್ಪೂನ್ ರಾಜ್ಮಾವನ್ನು ತೆಗೆದುಕೊಳ್ಳಿ.
4 ಕಪ್ ನೀರು ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ.
8 ಸೀಟಿಗಳಿಗೆ ಅಥವಾ ಬೇಳೆ ಮೃದು ಮತ್ತು ಮೆತ್ತಗೆ ತಿರುಗುವ ತನಕ ಪ್ರೆಷರ್ ಕುಕ್ ಮಾಡಿ.
ಈಗ ದೊಡ್ಡ ಕಡೈನಲ್ಲಿ 1 ಟೇಬಲ್ಸ್ಪೂನ್ ಬೆಣ್ಣೆ ಮತ್ತು 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ.
1 ಟೀಸ್ಪೂನ್ ಜೀರಿಗೆ, 1 ಬೇ ಲೀಫ್, 2 ಏಲಕ್ಕಿ ಮತ್ತು 1 ಟೀಸ್ಪೂನ್ ಕಸೂರಿ ಮೇಥಿ ಸೇರಿಸಿ. ಮಸಾಲೆಗಳು ಪರಿಮಳ ಬರುವ ತನಕ ಸಾಟ್ ಮಾಡಿ.
ಈಗ, 1 ಈರುಳ್ಳಿ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು 1 ಮೆಣಸಿನಕಾಯಿ ಸೇರಿಸಿ.
ಈರುಳ್ಳಿ ಚಿನ್ನದ ಕಂದು ಬಣ್ಣಕ್ಕೆ ತಿರುಗುವ ತನಕ ಸಾಟ್ ಮಾಡಿ.
ಜ್ವಾಲೆಯನ್ನು ಕಡಿಮೆ ಇಟ್ಟು, ¼ ಟೀಸ್ಪೂನ್ ಅರಿಶಿನ, ¾ ಟೀಸ್ಪೂನ್ ಚಿಲ್ಲಿ ಪೌಡರ್, ½ ಟೀಸ್ಪೂನ್ ಗರಂ ಮಸಾಲಾ ಸೇರಿಸಿ.
ಈಗ 1½ ಕಪ್ ಟೊಮೆಟೊ ಪ್ಯೂರೀ ಸೇರಿಸಿ. ಟೊಮೆಟೊ ಪ್ಯೂರೀ ತಯಾರಿಸಲು 3 ದೊಡ್ಡ ಟೊಮೆಟೊಗಳನ್ನು ಮೃದುವಾದ ಪೇಸ್ಟ್ಗೆರುಬ್ಬಿಕೊಳ್ಳಿ.
ಮಿಶ್ರಣವನ್ನು ದಪ್ಪವಾಗಿಸುವ ತನಕ ಮತ್ತು ಬದಿಗಳಿಂದ ಎಣ್ಣೆ ಬಿಡುಗಡೆ ಮಾಡುವವರೆಗೂ ಚೆನ್ನಾಗಿ ಬೇಯಿಸಿ.
ಬೇಯಿಸಿದ ದಾಲ್, 1 ಟೀಸ್ಪೂನ್ ಉಪ್ಪು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಅಗತ್ಯವಿರುವಂತೆ ನೀರನ್ನು ಸೇರಿಸುವ ಮೂಲಕ ಸ್ಥಿರತೆಯನ್ನು ಹೊಂದಿಸಿ.
ಸುಡುವುದನ್ನು ತಡೆಯಲು ಕೈ ಆಡಿಸುತ್ತಾ 20 ನಿಮಿಷಗಳ ಕಾಲ ಸಿಮ್ಮರ್ ನಲ್ಲಿಡಿ.
ಈಗ 2 ಟೇಬಲ್ಸ್ಪೂನ್ ಕ್ರೀಮ್, 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
1 ಟೀಸ್ಪೂನ್ ಬೆಣ್ಣೆಯನ್ನು ಬಿಸಿಮಾಡುವ ಮೂಲಕ ಒಗ್ಗರಣೆಯನ್ನು ತಯಾರಿಸಿ.
3 ಬೆಳ್ಳುಳ್ಳಿ ಸೇರಿಸಿ ಮತ್ತು ಅವು ಗೋಲ್ಡನ್ ಬ್ರೌನ್ ಆಗುವ ತನಕ ರೋಸ್ಟ್ ಮಾಡಿ.
ಜ್ವಾಲೆಯನ್ನು ಆಫ್ ಮಾಡಿ ಮತ್ತು ಪಿಂಚ್ ಚಿಲ್ಲಿ ಪೌಡರ್ ಸೇರಿಸಿ. ಚೆನ್ನಾಗಿ ಬೆರೆಸಿ.
ದಾಲ್ ನ ಮೇಲೆ ಒಗ್ಗರಣೆ ಸುರಿಯಿರಿ ಮತ್ತು ಈಗ ಇದು ಪೂರೈಸಲು ಸಿದ್ಧವಾಗಿದೆ.
ಅಂತಿಮವಾಗಿ, ದಾಲ್ ಮಹಾರಾಣಿಯನ್ನು ಜೀರಾ ರೈಸ್ ಜೊತೆ ಆನಂದಿಸಿ.