Go Back
+ servings
coconut milk mango pudding
Print Pin
No ratings yet

ತೆಂಗಿನಕಾಯಿ ಪುಡ್ಡಿಂಗ್ ರೆಸಿಪಿ | coconut pudding in kannada

ಸುಲಭ ತೆಂಗಿನಕಾಯಿ ಪುಡ್ಡಿಂಗ್ ಪಾಕವಿಧಾನ | ತೆಂಗಿನಕಾಯಿ ಹಾಲು ಮಾವಿನ ಪುಡ್ಡಿಂಗ್ | ಕೊಕೊನಟ್ ಮಿಲ್ಕ್ ಜೆಲ್ಲಿ
ಕೋರ್ಸ್ ಸಿಹಿ
ಪಾಕಪದ್ಧತಿ ಭಾರತೀಯ
ಕೀವರ್ಡ್ ತೆಂಗಿನಕಾಯಿ ಪುಡ್ಡಿಂಗ್ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 30 minutes
ರೆಫ್ರಿಜೆರೇಟಿಂಗ್ ಸಮಯ 2 hours
ಒಟ್ಟು ಸಮಯ 2 hours 40 minutes
ಸೇವೆಗಳು 3 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

  • 2 ಕಪ್ ತೆಂಗಿನಕಾಯಿ (ತುರಿದ)
  • 3 ಏಲಕ್ಕಿ
  • 500 ಮಿಲಿ ಬೆಚ್ಚಗಿನ ನೀರು
  • 5 ಟೇಬಲ್ಸ್ಪೂನ್ ಕಾರ್ನ್ ಫ್ಲೋರ್
  • ½ ಕಪ್ ಸಕ್ಕರೆ
  • ಪಿಂಚ್ ಉಪ್ಪು

ಸೂಚನೆಗಳು

  • ಮೊದಲಿಗೆ, ಮಿಕ್ಸಿಯಲ್ಲಿ 2 ಕಪ್ ತೆಂಗಿನಕಾಯಿ, 3 ಏಲಕ್ಕಿ ತೆಗೆದುಕೊಳ್ಳಿ.
  • 500 ಮಿಲಿ ಬೆಚ್ಚಗಿನ ನೀರನ್ನು ಸೇರಿಸಿ ಮತ್ತು ಚೆನ್ನಾಗಿ ರುಬ್ಬಿಕೊಳ್ಳಿ.
  • ಮಸ್ಲಿನ್ ಬಟ್ಟೆಯನ್ನು ಬಳಸಿ ತೆಂಗಿನಕಾಯಿ ಹಾಲನ್ನು ಸೋಸಿರಿ. ಮೊದಲ ಸಾರ ತೆಂಗಿನಕಾಯಿ ಹಾಲು ಬಳಸಿ ಅಥವಾ ನೀವು ಟಿನ್ ನ 500 ಮಿಲಿ ತೆಂಗಿನಕಾಯಿ ಹಾಲು ಬಳಸಬಹುದು.
  • ಈಗ ತೆಂಗಿನ ಹಾಲನ್ನು ದೊಡ್ಡ ಬಟ್ಟಲಿನಲ್ಲಿ ತೆಗೆದುಕೊಳ್ಳಿ. 5 ಟೇಬಲ್ಸ್ಪೂನ್ ಕಾರ್ನ್ ಫ್ಲೋರ್, ½ ಕಪ್ ಸಕ್ಕರೆ ಮತ್ತು ಪಿಂಚ್ ಉಪ್ಪು ಸೇರಿಸಿ.
  • ಯಾವುದೇ ಉಂಡೆಗಳನ್ನೂ ಹೊಂದಿಲ್ಲ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಕಾರ್ನ್ ಫ್ಲೋರ್ ನ ಸ್ಥಳದಲ್ಲಿ ನೀವು ಕಸ್ಟರ್ಡ್ ಪೌಡರ್ ಅನ್ನು ಸಹ ಬಳಸಬಹುದು.
  • ಮಿಶ್ರಣವನ್ನು ದೊಡ್ಡದಾದ ಕಡೈ ಗೆ ವರ್ಗಾಯಿಸಿ.
  • ಇದು ದಪ್ಪವಾಗುವುವ ತನಕ ಕೈ ಆಡಿಸುತ್ತಾ ಇರಿ.
  • ಮಿಶ್ರಣವು ದಪ್ಪವಾಗಲು ಪ್ರಾರಂಭಿಸುತ್ತದೆ ಮತ್ತು ಹೊಳಪು ಕಾಣುತ್ತದೆ, ಅದು ಸರಿಯಾದ ಸ್ಥಿರತೆಯಾಗಿದೆ. ಅತಿ ಬೇಯಿಸುವುದರಿಂದ ಹಾರ್ಡ್ ಪುಡ್ಡಿಂಗ್ ಮಾಡುತ್ತದೆ. ಕಮ್ಮಿ ಬೇಯಿಸುವುದರಿಂದ ಜಿಗುಟಾಗಿ ಮತ್ತು ಹೊಂದಿಸಲು ಕಷ್ಟವಾಗುತ್ತದೆ.
  • ಮಿಶ್ರಣವನ್ನು ಎಣ್ಣೆಯಿಂದ ಗ್ರೀಸ್ ಮಾಡಿದ ಮೌಲ್ಡ್ ಗೆ ಸುರಿಯಿರಿ.
  • ಸಂಪೂರ್ಣವಾಗಿ ತಣ್ಣಗಾಗಿಸಿ ಹೊಂದಿಸಲು 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ.
  • ಅಂತಿಮವಾಗಿ, ತೆಂಗಿನಕಾಯಿ ಪುಡ್ಡಿಂಗ್ ಅನ್ನು ಆನಂದಿಸಿ.