ಮೊದಲಿಗೆ, ಪ್ಯಾನ್ ನಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, 2 ಮೆಣಸಿನಕಾಯಿ ಮತ್ತು ½ ಟೀಸ್ಪೂನ್ ಚಿಲ್ಲ್ಲಿ ಫ್ಲೇಕ್ಸ್ ಸೇರಿಸಿ ಸಾಟ್ ಮಾಡಿ.
½ ಈರುಳ್ಳಿ ಸೇರಿಸಿ ಮತ್ತು ಈರುಳ್ಳಿ ಸ್ವಲ್ಪ ಕುಗ್ಗುವ ತನಕ ಸಾಟ್ ಮಾಡಿ.
ಈಗ 1 ಕ್ಯಾರೆಟ್, 5 ಬೀನ್ಸ್, 3 ಟೇಬಲ್ಸ್ಪೂನ್ ಸ್ವೀಟ್ ಕಾರ್ನ್ ಮತ್ತು ½ ಕ್ಯಾಪ್ಸಿಕಮ್ ಸೇರಿಸಿ.
ತರಕಾರಿಗಳನ್ನು ಜಾಸ್ತಿ ಬೇಯಿಸದೇ ಒಂದು ನಿಮಿಷಕ್ಕೆ ಸಾಟ್ ಮಾಡಿ.
ಜ್ವಾಲೆ ಕಡಿಮೆ ಇಟ್ಟು ½ ಟೀಸ್ಪೂನ್ ಜೀರಾ ಪುಡಿ, ½ ಟೀಸ್ಪೂನ್ ಕೊತ್ತಂಬರಿ ಪೌಡರ್, 1 ಟೀಸ್ಪೂನ್ ಆಮ್ಚೂರ್, ½ ಟೀಸ್ಪೂನ್ ಗರಮ್ ಮಸಲಾ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
ಮಸಾಲೆಗಳು ಪರಿಮಳ ಬರುವವರೆಗೂ ಒಂದು ನಿಮಿಷಕ್ಕೆ ಸಾಟ್ ಮಾಡಿ.
ತರಕಾರಿಗಳನ್ನು ತಣ್ಣಗಾಗಿಸಿ ಅವುಗಳನ್ನು ದೊಡ್ಡ ಬೌಲ್ಗೆ ವರ್ಗಾಯಿಸಿ.
3 ಆಲೂಗಡ್ಡೆ, 2 ಟೇಬಲ್ಸ್ಪೂನ್ ಪನೀರ್, 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ¼ ಕಪ್ ಬ್ರೆಡ್ ಕ್ರಂಬ್ಸ್ ಸೇರಿಸಿ ಮತ್ತು ಮೃದುವಾದ ಹಿಟ್ಟನ್ನು ರೂಪಿಸಿ. ತರಕಾರಿಗಳಲ್ಲಿನ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಬ್ರೆಡ್ ಕ್ರಂಬ್ಸ್ ಸಹಾಯ ಮಾಡುತ್ತದೆ.
ಎಣ್ಣೆಯಿಂದ ಕೈಗಳನ್ನು ಗ್ರೀಸ್ ಮಾಡಿ ಚೆಂಡು ಗಾತ್ರದ ಮಿಶ್ರಣವನ್ನು ತೆಗೆಯಿರಿ.
ಐಸ್ ಕ್ರೀಮ್ ಸ್ಟಿಕ್ಗೆ ಒತ್ತಿ ಕಬಾಬ್ನಂತಹ ಆಕಾರ ಮಾಡಿ. ನಿಮ್ಮ ಆಯ್ಕೆಗೆ ನೀವು ಆಕಾರ ಮಾಡಬಹುದು.
ಸ್ಲರಿ ತಯಾರಿಸಲು, ದೊಡ್ಡ ಬಟ್ಟಲಿನಲ್ಲಿ 1 ಕಪ್ ಮೈದಾ, ½ ಕಪ್ ಕಾರ್ನ್ ಹಿಟ್ಟು, ¼ ಟೀಸ್ಪೂನ್ ಪೆಪ್ಪರ್ ಪೌಡರ್ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
ಯಾವುದೇ ಉಂಡೆಗಳನ್ನೂ ಹೊಂದಿಲ್ಲವೆಂದು ಖಚಿತಪಡಿಸಿಕೊಳ್ಳಿ.
ಈಗ ಸ್ಟಿಕ್ ಅನ್ನು ಸ್ಲರ್ರಿ ಗೆ ಡಿಪ್ ಮಾಡಿ ಬ್ರೆಡ್ ಕ್ರಂಬ್ಸ್ ನೊಂದಿಗೆ ಕೋಟ್ ಮಾಡಿ.
ಮಧ್ಯಮ ಜ್ವಾಲೆಯಲ್ಲಿಟ್ಟು ಬಿಸಿ ಎಣ್ಣೆಯಲ್ಲಿ ಹುರಿಯಿರಿ.
ಫ್ಲಿಪ್ ಮಾಡಿ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗಿ ತಿರುಗುವವರೆಗೂ ಏಕರೂಪವಾಗಿ ಫ್ರೈ ಮಾಡಿ.
ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಟಿಶ್ಯೂ ಪೇಪರ್ ಮೇಲೆ ಹರಿಸಿ.
ಅಂತಿಮವಾಗಿ, ಟೊಮೆಟೊ ಸಾಸ್ನೊಂದಿಗೆ ಕ್ರಿಸ್ಪಿ ವೆಜ್ ಸ್ಟಾರ್ಟರ್ ಆನಂದಿಸಿ.