Go Back
+ servings
dahi ki chatni
Print Pin
No ratings yet

ಮೊಸರು ಚಟ್ನಿ ರೆಸಿಪಿ | dahi chutney in kannada | ದಹಿ ಕಿ ಚಟ್ನಿ

ಸುಲಭ ಮೊಸರು ಚಟ್ನಿ ಪಾಕವಿಧಾನ | ದಹಿ ಕಿ ಚಟ್ನಿ | ಮೊಸರು ಪುದಿನಾ ಚಟ್ನಿ | ಮೊಸರು ಪುದಿನಾ ಡಿಪ್
ಕೋರ್ಸ್ ಚಟ್ನಿ
ಪಾಕಪದ್ಧತಿ ಭಾರತೀಯ
ಕೀವರ್ಡ್ ಮೊಸರು ಚಟ್ನಿ ರೆಸಿಪಿ
ತಯಾರಿ ಸಮಯ 5 minutes
ಅಡುಗೆ ಸಮಯ 2 minutes
ಒಟ್ಟು ಸಮಯ 7 minutes
ಸೇವೆಗಳು 1 ಕಪ್
ಲೇಖಕ HEBBARS KITCHEN

ಪದಾರ್ಥಗಳು

  • 1 ಕಪ್ ಕೊತ್ತಂಬರಿ
  • ¼ ಕಪ್ ಪುದಿನಾ / ಮಿಂಟ್
  • 2 ಹಸಿರು ಮೆಣಸಿನಕಾಯಿ
  • 1 ಬೆಳ್ಳುಳ್ಳಿ
  • 1 ಇಂಚು  ಶುಂಠಿ
  • ¾ ಕಪ್ ಹಂಗ್ ಮೊಸರು / ಗ್ರೀಕ್ ಮೊಸರು
  • ¼ ಟೀಸ್ಪೂನ್ ಜೀರಿಗೆ ಪುಡಿ
  • 2 ಟೇಬಲ್ಸ್ಪೂನ್ ನಿಂಬೆ ರಸ
  • ¼ ಟೀಸ್ಪೂನ್ ಚಾಟ್ ಮಸಾಲಾ
  • ¼ ಟೀಸ್ಪೂನ್ ಉಪ್ಪು

ಸೂಚನೆಗಳು

  • ಮೊದಲಿಗೆ, ಒಂದು ಸಣ್ಣ ಬ್ಲೆಂಡರ್ ನಲ್ಲಿ 1 ಕಪ್ ಕೊತ್ತಂಬರಿ, ¼ ಕಪ್ ಪುದಿನಾ, 2 ಹಸಿರು ಮೆಣಸಿನಕಾಯಿ, 1 ಬೆಳ್ಳುಳ್ಳಿ, 1 ಇಂಚು ಶುಂಠಿ ಮತ್ತು 2 ಟೇಬಲ್ಸ್ಪೂನ್ ನಿಂಬೆ ರಸವನ್ನು ತೆಗೆದುಕೊಳ್ಳಿ.
  • ಅಗತ್ಯವಿದ್ದರೆ ಮಾತ್ರ ನೀರನ್ನು ಸೇರಿಸಿ ನಯವಾದ ಪೇಸ್ಟ್ ಗೆ ಬ್ಲೆಂಡ್ ಮಾಡಿ.
  • ತಯಾರಾದ ಹಸಿರು ಚಟ್ನಿಯನ್ನು ದೊಡ್ಡ ಮಿಕ್ಸಿಂಗ್ ಬೌಲ್ ಗೆ ವರ್ಗಾಯಿಸಿ.
  • ¾ ಕಪ್ ಹಂಗ್ ಮೊಸರು ಸೇರಿಸಿ. ಹಂಗ್ ಮೊಸರು ತಯಾರಿಸಲು ಶ್ರೀಖಂಡ್ ಪಾಕವಿಧಾನವನ್ನು ನೋಡಿ.
  • ಜೊತೆಗೆ ¼ ಟೀಸ್ಪೂನ್ ಜೀರಿಗೆ ಪುಡಿ, ¼ ಟೀಸ್ಪೂಟ್ ಚಾಟ್ ಮಸಾಲಾ ಮತ್ತು ¼ ಟೀಸ್ಪೂನ್ ಉಪ್ಪನ್ನು ಸೇರಿಸಿ.
  • ಮೊಸರು ಮಸಾಲೆಗಳೊಂದಿಗೆ ಚೆನ್ನಾಗಿ ಸಂಯೋಜಿಸುತ್ತದೆ ಎಂದು ಖಚಿತಪಡಿಸಿಕೊಳ್ಳಿ.
  • ಅಂತಿಮವಾಗಿ, ಪನೀರ್ ಟಿಕ್ಕಾ ಅಥವಾ ಕಟ್ಲೆಟ್ ನೊಂದಿಗೆ ಮೊಸರು ಚಟ್ನಿಯನ್ನು ಸರ್ವ್ ಮಾಡಿ.