ಮೊದಲನೆಯದಾಗಿ, ಸಣ್ಣ ಬಟ್ಟಲಿನಲ್ಲಿ 1 ಟೇಬಲ್ಸ್ಪೂನ್ ಇನ್ಸ್ಟಂಟ್ ಕಾಫಿ ಪುಡಿ ಮತ್ತು 1 ಟೇಬಲ್ಸ್ಪೂನ್ ಕೋಕೋ ಪೌಡರ್ ತೆಗೆದುಕೊಳ್ಳಿ.
2 ಟೇಬಲ್ಸ್ಪೂನ್ ಬೆಚ್ಚಗಿನ ನೀರಿನ್ನು ಕರಗಿಸಿ.
ಚೋಕೊ-ಕಾಫಿ ಡಿಕಾಕ್ಷನ್ ಅನ್ನು ಬ್ಲೆಂಡರ್ ಗೆ ಸೇರಿಸಿ.
ಹಾಗೆಯೇ, 1 ಕಪ್ ಹಾಲು, 1 ಸ್ಕೂಪ್ ವೆನಿಲ್ಲಾ ಐಸ್ ಕ್ರೀಮ್ ಮತ್ತು 2 ಟೇಬಲ್ಸ್ಪೂನ್ ಚಾಕೊಲೇಟ್ ಸಾಸ್ ಸೇರಿಸಿ.
ನಂತರ, 1 ಟೇಬಲ್ಸ್ಪೂನ್ ಸಕ್ಕರೆ ಮತ್ತು 6 ಕ್ಯೂಬ್ ಐಸ್ ಸೇರಿಸಿ.
ಮಿಲ್ಕ್‌ಶೇಕ್ ನೊರೆಯಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
ಎತ್ತರದ ಗಾಜನ್ನು ತೆಗೆದುಕೊಂಡು ಗಾಜಿನ ಬದಿಗಳಲ್ಲಿ ಚಾಕೊಲೇಟ್ ಸಾಸ್ ಅನ್ನು ಹರಡಿ. ಎತ್ತರದ ಗಾಜಿನಲ್ಲಿ ಚಾಕೊಲೇಟ್ ಕೋಲ್ಡ್ ಕಾಫಿಯನ್ನು ಸುರಿಯಿರಿ.
ಅಂತಿಮವಾಗಿ, ವಿಪ್ಪ್ಡ್ ಕ್ರೀಮ್ ಮತ್ತು ಕಾಫಿ ಪುಡಿಯಿಂದ ಅಲಂಕರಿಸಿದ ಚಾಕೊಲೇಟ್ ಕೋಲ್ಡ್ ಕಾಫಿಯನ್ನು ಆನಂದಿಸಿ.