- ಮೊದಲನೆಯದಾಗಿ, ದೊಡ್ಡ ಪಾತ್ರೆಯಲ್ಲಿ 6 ಕಪ್ ನೀರು, 1 ಟೀಸ್ಪೂನ್ ಎಣ್ಣೆ ಮತ್ತು ½ ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ. 
- ನೀರನ್ನು ಕುದಿಸಿ. 
- ಈಗ, ಬಾಸ್ಮತಿ ಅಕ್ಕಿಯನ್ನು ಸೇರಿಸಿ (20 ನಿಮಿಷ ನೆನೆಸಿದ). ನೀರು ಚೆನ್ನಾಗಿ ಸೋಸುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ನೆನೆಸಿದ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ. 
- ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ಅಥವಾ ಅಕ್ಕಿ ಸಂಪೂರ್ಣವಾಗಿ ಬೇಯುವವರೆಗೆ ಕುದಿಸಿ. 
- ಅಡುಗೆ ಪ್ರಕ್ರಿಯೆಯನ್ನು ನಿಲ್ಲಿಸಲು ಅಕ್ಕಿಯನ್ನು ಸೋಸಿ ತೆಗೆದು, ಅದಕ್ಕೆ1 ಕಪ್ ತಣ್ಣೀರು ಸುರಿಯಿರಿ. ಸಂಪೂರ್ಣವಾಗಿ ತಂಪಾಗಲು ಬಿಡಿ. 
- ಈಗ ದೊಡ್ಡ ಕಡಾಯಿಯಲ್ಲಿ 4 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 250 ಗ್ರಾಂ ಅಣಬೆಗಳನ್ನು ಹಾಕಿ. 
- ಎಣ್ಣೆಯನ್ನು ಏಕರೂಪವಾಗಿ ಎಲ್ಲಾ ಅಣಬೆಗಳಿಗೆ ಲೇಪಿಸುವಂತೆ, 2 ನಿಮಿಷಗಳ ಕಾಲ ಬೆರೆಸಿ ಫ್ರೈ ಮಾಡಿ,. 
- ಸಿಮ್ಮೆರ್ ನಲ್ಲಿಟ್ಟು, 3 ನಿಮಿಷ ಅಥವಾ ಅಣಬೆಗಳನ್ನು ಚೆನ್ನಾಗಿ ಬೇಯುವವರೆಗೆ ಬೇಯಿಸಿ,. 
- ಅಣಬೆಗಳನ್ನು ಜಾಸ್ತಿ ಬೇಯಿಸದೆ, ಪಕ್ಕಕ್ಕೆ ಇರಿಸಿ. 
- ಅದೇ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ 1 ಮೆಣಸಿನಕಾಯಿ, 3 ಬೆಳ್ಳುಳ್ಳಿ ಸೇರಿಸಿ. 
- ಈಗ ½ ಈರುಳ್ಳಿ, 2 ಟೀಸ್ಪೂನ್ ಸ್ಪ್ರಿಂಗ್ ಈರುಳ್ಳಿ ಸೇರಿಸಿ, ಹೆಚ್ಚಿನ ಉರಿಯಲ್ಲಿ ಸಾಟ್ ಮಾಡಿ. 
- ½ ಕ್ಯಾರೆಟ್, 5 ಬೀನ್ಸ್, ½ ಕ್ಯಾಪ್ಸಿಕಂ ಸೇರಿಸಿ, ಹೆಚ್ಚಿನ ಜ್ವಾಲೆಯ ಮೇಲೆ ಫ್ರೈ ಮಾಡಿ. 
- ತರಕಾರಿಗಳನ್ನು ಜಾಸ್ತಿ ಬೇಯಿಸಬೇಡಿ. 
- ಈಗ ಹುರಿದ ಅಣಬೆಗಳು ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ. 
- ಮಧ್ಯದಲ್ಲಿ ಜಾಗವನ್ನು ಮಾಡಿ, 2 ಟೀಸ್ಪೂನ್ ಸೋಯಾ ಸಾಸ್ ಮತ್ತು 1 ಟೀಸ್ಪೂನ್ ವಿನೆಗರ್ ಸೇರಿಸಿ. 
- ಚೆನ್ನಾಗಿ ಸೇರಿಸಿ, ಹೆಚ್ಚಿನ ಜ್ವಾಲೆಯ ಮೇಲೆ ಫ್ರೈ ಮಾಡಿ. 
- ಬೇಯಿಸಿದ ಅನ್ನ, 1 ಟೀಸ್ಪೂನ್ ಕಾಳು ಮೆಣಸು ಪುಡಿ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ. 
- ಅನ್ನ ಮುರಿಯದೆ ನಿಧಾನವಾಗಿ ಮಿಶ್ರಣ ಮಾಡಿ. 
- ಅಂತಿಮವಾಗಿ, ಸ್ಪ್ರಿಂಗ್ ಈರುಳ್ಳಿಯಿಂದ ಅಲಂಕರಿಸಿದ ಮಶ್ರೂಮ್ ಫ್ರೈಡ್ ರೈಸ್ ಅನ್ನು ಆನಂದಿಸಿ.