ಮೊದಲನೆಯದಾಗಿ, ಒಂದು ಪಾತ್ರೆಯಲ್ಲಿ 2 ಕಪ್ ಫುಲ್ ಕ್ರೀಮ್ ಪೌಡರ್, 1 ಟೀಸ್ಪೂನ್ ಕಾರ್ನ್ ಫ್ಲೋರ್, 1 ಕಪ್ ಸಕ್ಕರೆ, ¼ ಟೀಸ್ಪೂನ್ ಅಡಿಗೆ ಸೋಡಾ ಮತ್ತು 1 ಕಪ್ ಹಾಲು ತೆಗೆದುಕೊಳ್ಳಿ.
ಎಲ್ಲವೂ ಸಂಯೋಜನೆ ಆಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಹಾಲಿನ ಮಿಶ್ರಣವನ್ನು ದೊಡ್ಡ ಕಡಾಯಿಗೆ ಸುರಿಯಿರಿ ಮತ್ತು ಕೈ ಆಡಿಸುತ್ತಿರಿ.
ಜ್ವಾಲೆಯನ್ನು ಮಧ್ಯಮವಾಗಿ ಇರಿಸಿ ಕೈ ಆಡಿಸುತ್ತಿರಿ.
ಮಿಶ್ರಣವು ಸ್ವಲ್ಪ ದಪ್ಪವಾಗಲು ಪ್ರಾರಂಭವಾಗುತ್ತದೆ.
3 ನಿಮಿಷಗಳ ನಂತರ, ಈ ಮಿಶ್ರಣವು ನೊರೆ ಮತ್ತು ರೇಷ್ಮೆಯಂತಹ ನಯವಾದ ವಿನ್ಯಾಸವನ್ನು ಪಡೆಯುತ್ತದೆ.
ಈಗ ಜ್ವಾಲೆಯನ್ನು ಆಫ್ ಮಾಡಿ ಮತ್ತು ಸಂಪೂರ್ಣವಾಗಿ ತಣ್ಣಗಾಗಿಸಿ. ಮಿಶ್ರಣವು ಸ್ವಲ್ಪ ತೆಳುವಿದ್ದಾಗಲೇ ಜ್ವಾಲೆಯನ್ನು ಆಫ್ ಮಾಡಲು ಖಚಿತಪಡಿಸಿಕೊಳ್ಳಿ. ಏಕೆಂದರೆ ತಣ್ಣಗಾದ ಮೇಲೆ ಅದು ದಪ್ಪವಾಗುವ ಸಾಧ್ಯತೆ ಇರುತ್ತದೆ.
ಅಂತಿಮವಾಗಿ, ಈ ಕಂಡೆನ್ಸ್ಡ್ ಮಿಲ್ಕ್ ಅಥವಾ ಮಿಲ್ಕ್‌ಮೇಡ್ ಆನಂದಿಸಲು ಸಿದ್ಧವಾಗಿದೆ.