Go Back
+ servings
malai kofta recipe
Print Pin
No ratings yet

ಮಲೈ ಕೋಫ್ತಾ ರೆಸಿಪಿ | malai kofta in kannada | ಮಲೈ ಕೋಫ್ತಾ ಕರಿ

ಸುಲಭ ಮಲೈ ಕೋಫ್ತಾ ಪಾಕವಿಧಾನ | ಮಲೈ ಕೋಫ್ತಾ ಕರಿ
ಕೋರ್ಸ್ ಕರಿ
ಪಾಕಪದ್ಧತಿ ಪಂಜಾಬಿ
ಕೀವರ್ಡ್ ಮಲೈ ಕೋಫ್ತಾ ರೆಸಿಪಿ
ತಯಾರಿ ಸಮಯ 15 minutes
ಅಡುಗೆ ಸಮಯ 50 minutes
ಒಟ್ಟು ಸಮಯ 1 hour 5 minutes
ಸೇವೆಗಳು 5 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಕೋಫ್ತಾಕ್ಕಾಗಿ:

  • 3 ಆಲೂಗಡ್ಡೆ ಬೇಯಿಸಿದ ಮತ್ತು ಹಿಸುಕಿದ
  • ¾ ಕಪ್ ಪನೀರ್ / ಕಾಟೇಜ್ ಚೀಸ್ ತುರಿದ
  • 1 ಮೆಣಸಿನಕಾಯಿ ಸಣ್ಣಗೆ ಕತ್ತರಿಸಿದ
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿದ
  • ¼ ಟೀಸ್ಪೂನ್ ಜೀರಿಗೆ ಪುಡಿ
  • ½ ಟೀಸ್ಪೂನ್ ಉಪ್ಪು
  • 2 ಟೇಬಲ್ಸ್ಪೂನ್ ಒಣದ್ರಾಕ್ಷಿ
  • 2 ಟೇಬಲ್ಸ್ಪೂನ್ ಗೋಡಂಬಿ ಕತ್ತರಿಸಿದ
  • 2 ಟೇಬಲ್ಸ್ಪೂನ್ ಮೈದಾ
  • ಎಣ್ಣೆ ಹುರಿಯಲು

ಈರುಳ್ಳಿ ಟೊಮೆಟೊ ಪ್ಯೂರೀಗಾಗಿ:

  • 2 ಟೇಬಲ್ಸ್ಪೂನ್ ಎಣ್ಣೆ
  • 1 ಈರುಳ್ಳಿ ಹೋಳು ಮಡಿದ
  • 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • 2 ಟೊಮೆಟೊ ಹೋಳು ಮಾಡಿದ
  • 2 ಟೇಬಲ್ಸ್ಪೂನ್ ಗೋಡಂಬಿ

ಮೇಲೋಗರಕ್ಕಾಗಿ:

  • 1 ಟೇಬಲ್ಸ್ಪೂನ್ ಬೆಣ್ಣೆ
  • 2 ಟೇಬಲ್ಸ್ಪೂನ್ ಎಣ್ಣೆ
  • 1 ಟೀಸ್ಪೂನ್ ಜೀರಿಗೆ
  • 2 ಏಲಕ್ಕಿ
  • 1 ಬೇ ಎಲೆ
  • 1 ಇಂಚಿನ ದಾಲ್ಚಿನ್ನಿ
  • 2 ಲವಂಗ
  • 1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
  • ½ ಟೀಸ್ಪೂನ್ ಅರಿಶಿನ
  • ¾ ಟೇಬಲ್ಸ್ಪೂನ್ ಕೊತ್ತಂಬರಿ ಪುಡಿ
  • ¼ ಟೀಸ್ಪೂನ್ ಜೀರಿಗೆ ಪುಡಿ
  • 1 ಟೀಸ್ಪೂನ್ ಉಪ್ಪು
  • ¼ ಕಪ್ ಕ್ರೀಮ್ / ಮಲೈ
  • ½ ಕಪ್ ನೀರು
  • 1 ಟೀಸ್ಪೂನ್ ಕಸೂರಿ ಮೇಥಿ ಪುಡಿಮಾಡಲಾಗಿದೆ
  • ¼ ಟೀಸ್ಪೂನ್ ಗರಂ ಮಸಾಲ

ಸೂಚನೆಗಳು

ಕೋಫ್ತಾ ತಯಾರಿಕೆ:

  • ಮೊದಲನೆಯದಾಗಿ, ದೊಡ್ಡ ಮಿಶ್ರಣ ಬಟ್ಟಲಿನಲ್ಲಿ 3 ಆಲೂಗಡ್ಡೆ ಮತ್ತು ¾ ಕಪ್ ಪನೀರ್ ತೆಗೆದುಕೊಳ್ಳಿ.
  • 1 ಮೆಣಸಿನಕಾಯಿ, 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು, ¼ ಟೀಸ್ಪೂನ್ ಜೀರಿಗೆ ಪುಡಿ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
  • ಕೋಫ್ತಾ ಕುರುಕಲು ಆಗಲು, 2 ಟೀಸ್ಪೂನ್ ಒಣದ್ರಾಕ್ಷಿ ಮತ್ತು 2 ಟೀಸ್ಪೂನ್ ಗೋಡಂಬಿ ಸೇರಿಸಿ.
  • ಎಲ್ಲಾ ಮಸಾಲೆಗಳು ಚೆನ್ನಾಗಿ ಸಂಯೋಜಿಸಲ್ಪಟ್ಟಿದೆಯೇ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  • ಈಗ 2 ಟೀಸ್ಪೂನ್ ಮೈದಾ ಸೇರಿಸಿ, ಮೃದುವಾದ ಹಿಟ್ಟನ್ನಾಗಿ ಚೆನ್ನಾಗಿ ಮಿಶ್ರಣ ಮಾಡಿ. ಮೈದಾ ತೇವಾಂಶವನ್ನು ಹೀರಿಕೊಳ್ಳಲು ಮತ್ತು ಮಿಶ್ರಣವನ್ನು ಚೆನ್ನಾಗಿ ಬಂಧಿಸಲು ಸಹಾಯ ಮಾಡುತ್ತದೆ.
  • ಎಣ್ಣೆಯಿಂದ ಕೈಯನ್ನು ಗ್ರೀಸ್ ಮಾಡುವ ಮೂಲಕ ಸಣ್ಣ ಚೆಂಡು ಗಾತ್ರದ ಕೋಫ್ತಾವನ್ನು ತಯಾರಿಸಿ.
  • ಮಧ್ಯಮ ಬಿಸಿ ಎಣ್ಣೆಯ ಮೇಲೆ ಡೀಪ್ ಫ್ರೈ ಮಾಡಿ.
  • ಸಾಂದರ್ಭಿಕವಾಗಿ ಬೆರೆಸಿ, ಕೋಫ್ತಾಗಳನು ಏಕರೂಪವಾಗಿ ಬೇಯಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ಕೋಫ್ತಾ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಫ್ರೈ ಮಾಡಿ.
  • ಕೋಫ್ತಾಗಳನ್ನು ತೆಗೆದು, ಪಕ್ಕಕ್ಕೆ ಇರಿಸಿ.

ಮಲೈ ಕೋಫ್ತಾಕ್ಕೆ ಮೇಲೋಗರ ತಯಾರಿಕೆ:

  • ಮೊದಲನೆಯದಾಗಿ, ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, 1 ಈರುಳ್ಳಿ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.
  • ಈರುಳ್ಳಿಯನ್ನು, ಅದರ ಬಣ್ಣ ಸ್ವಲ್ಪ ಬದಲಾಗುವವರೆಗೆ ಸಾಟ್ ಮಾಡಿ.
  • ಈಗ, 2 ಟೊಮೆಟೊ ಸೇರಿಸಿ, ಸ್ವಲ್ಪ ಸಾಟ್ ಮಾಡಿ.
  • ನಂತರ, 2 ಟೀಸ್ಪೂನ್ ಗೋಡಂಬಿ ಸೇರಿಸಿ ಮತ್ತು ಟೊಮ್ಯಾಟೊ ಸಂಪೂರ್ಣವಾಗಿ ಮೃದುವಾಗುವವರೆಗೆ ಸಾಟ್ ಮಾಡಿ.
  • ಸಂಪೂರ್ಣವಾಗಿ ತಣ್ಣಗಾಗಿಸಿ, ಬ್ಲೆಂಡರ್ಗೆ ವರ್ಗಾಯಿಸಿ.
  • ಅಗತ್ಯವಿದ್ದರೆ ನೀರನ್ನು ಸೇರಿಸಿ ನಯವಾದ ಪೇಸ್ಟ್ ಗೆ ರುಬ್ಬಿಕೊಳ್ಳಿ.
  • ಸಿಪ್ಪೆ ಮತ್ತು ಬೀಜಗಳನ್ನು ತೊಗೆದುಹಾಕಲು ಈ ಮಿಶ್ರಣವನ್ನು ಫಿಲ್ಟರ್ ಮಾಡಿ.
  • ರೇಷ್ಮೆಯಂತಹ ನಯವಾದ ಈರುಳ್ಳಿ-ಟೊಮೆಟೊ ಪ್ಯೂರೀಯನ್ನು ಪಡೆಯುವವರೆಗೆ ಫಿಲ್ಟರ್ ಮಾಡಿ. ಪಕ್ಕಕ್ಕೆ ಇರಿಸಿ.
  • ದೊಡ್ಡ ಕಡಾಯಿಯಲ್ಲಿ 1 ಟೀಸ್ಪೂನ್ ಬೆಣ್ಣೆ ಮತ್ತು 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ.
  • 1 ಟೀಸ್ಪೂನ್ ಜೀರಿಗೆ, 2 ಏಲಕ್ಕಿ, 1 ಬೇ ಎಲೆ, 1 ಇಂಚಿನ ದಾಲ್ಚಿನ್ನಿ, 2 ಲವಂಗ ಸೇರಿಸಿ. ಅದು ಸುವಾಸನೆ ಬರುವವರೆಗೆ ಫ್ರೈ ಮಾಡಿ.
  • ಈಗ ಜ್ವಾಲೆಯನ್ನು ಕಡಿಮೆ ಇರಿಸಿ, 1 ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಅರಿಶಿನ, ¾ ಟೀಸ್ಪೂನ್ ಕೊತ್ತಂಬರಿ ಪುಡಿ ಮತ್ತು ¼ ಟೀಸ್ಪೂನ್ ಜೀರಿಗೆ ಪುಡಿ ಸೇರಿಸಿ.
  • ಮಸಾಲೆಗಳು ಪರಿಮಳ ಬರುವವರೆಗೆ ಸಾಟ್ ಮಾಡಿ.
  • ತಯಾರಾದ ಈರುಳ್ಳಿ ಟೊಮೆಟೊ ಪ್ಯೂರೀ, ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಮುಚ್ಚಿ, ಮಿಶ್ರಣವು ದಪ್ಪವಾಗಲು ಪ್ರಾರಂಭವಾಗುವವರೆಗೆ ಮತ್ತು ಎಣ್ಣೆ ಬದಿಗಳಿಂದ ಬೇರ್ಪಡಿಸುವವರೆಗೆ ಕುದಿಸಿ.
  • ಈಗ ¼ ಕಪ್ ಕ್ರೀಮ್ ಸೇರಿಸಿ, ಅದನ್ನು ಚೆನ್ನಾಗಿ ಸಂಯೋಜಿಸುವವರೆಗೆ, ಕಡಿಮೆ ಉರಿಯಲ್ಲಿ ಮಿಶ್ರಣ ಮಾಡಿ.
  • ½ ಕಪ್ ನೀರನ್ನು ಸೇರಿಸಿ, ಅಗತ್ಯವಿರುವಂತ ಸ್ಥಿರತೆಯನ್ನು ಹೊಂದಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಮೇಲೋಗರವನ್ನು ಕುದಿಸಿ, 1 ಟೀಸ್ಪೂನ್ ಕಸೂರಿ ಮೇಥಿ ಮತ್ತು ¼ ಟೀಸ್ಪೂನ್ ಗರಂ ಮಸಾಲಾ ಸೇರಿಸಿ. ಚೆನ್ನಾಗಿ ಬೆರೆಸಿ.
  • ಅಂತಿಮವಾಗಿ, ಕೋಫ್ತಾ ಮೇಲೆ ಈ ಮೇಲೋಗರವನ್ನು ಸುರಿಯಿರಿ ಮತ್ತು ಮಲೈ ಕೋಫ್ತಾ ಆನಂದಿಸಲು ಸಿದ್ಧವಾಗಿದೆ.