Go Back
+ servings
mix veg rice
Print Pin
No ratings yet

ವೆಜಿಟೇಬಲ್ ರೈಸ್ ರೆಸಿಪಿ | vegetable rice in kannada | ಮಿಕ್ಸ್ ವೆಜ್ ರೈಸ್

ಸುಲಭ ವೆಜಿಟೇಬಲ್ ರೈಸ್ ಪಾಕವಿಧಾನ | ಮಿಕ್ಸ್ ವೆಜ್ ರೈಸ್
ಕೋರ್ಸ್ ಅನ್ನ - ರೈಸ್
ಪಾಕಪದ್ಧತಿ ಭಾರತೀಯ
ಕೀವರ್ಡ್ ವೆಜಿಟೇಬಲ್ ರೈಸ್ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 9 minutes
ಒಟ್ಟು ಸಮಯ 19 minutes
ಸೇವೆಗಳು 2 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

  • 3 ಟೀಸ್ಪೂನ್ ಎಣ್ಣೆ
  • 1 ಬೇ ಎಲೆ / ತೇಜ್ ಪತ್ತಾ
  • 1 ಇಂಚಿನ ದಾಲ್ಚಿನ್ನಿ
  • 2 ಏಲಕ್ಕಿ
  • ½ ಈರುಳ್ಳಿ ಸಣ್ಣಗೆ ಕತ್ತರಿಸಿದ
  • 1 ಮೆಣಸಿನಕಾಯಿ ಸೀಳಿದ
  • 5 ಬೀನ್ಸ್ ಕತ್ತರಿಸಿದ
  • 1 ಕ್ಯಾರೆಟ್ ಕತ್ತರಿಸಿದ
  • 2 ಟೇಬಲ್ಸ್ಪೂನ್ ಬಟಾಣಿ
  • ¼ ಕ್ಯಾಪ್ಸಿಕಂ ಕತ್ತರಿಸಿದ
  • 1 ಕಪ್ ಬಾಸ್ಮತಿ ಅಕ್ಕಿ 20 ನಿಮಿಷ ನೆನೆಸಿ
  • 2 ಕಪ್ ನೀರು
  • 1 ಟೀಸ್ಪೂನ್ ಉಪ್ಪು
  • 1 ಟೀಸ್ಪೂನ್ ನಿಂಬೆ ರಸ
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿದ

ಸೂಚನೆಗಳು

  • ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 1 ಬೇ ಎಲೆ, 1 ಇಂಚಿನ ದಾಲ್ಚಿನ್ನಿ ಮತ್ತು 2 ಏಲಕ್ಕಿ ಪರಿಮಳ ಬರುವವರೆಗೆ ಹುರಿಯಿರಿ.
  • ಈಗ ½ ಈರುಳ್ಳಿ, 1 ಮೆಣಸಿನಕಾಯಿ ಸೇರಿಸಿ, ಅವು ಸ್ವಲ್ಪ ಕುಗ್ಗುವವರೆಗೆ ಸಾಟ್ ಮಾಡಿ.
  • ಈಗ 5 ಬೀನ್ಸ್, 1 ಕ್ಯಾರೆಟ್, 2 ಟೀಸ್ಪೂನ್ ಬಟಾಣಿ ಮತ್ತು ¼ ಕ್ಯಾಪ್ಸಿಕಂ ಸೇರಿಸಿ.
  • ತರಕಾರಿಗಳನ್ನು ಜಾಸ್ತಿ ಬೇಯಿಸದೆ 2 ನಿಮಿಷಗಳ ಕಾಲ ಹುರಿಯಿರಿ.
  • ಈಗ 1 ಕಪ್ ಬಾಸ್ಮತಿ ಅಕ್ಕಿ ಸೇರಿಸಿ (20 ನಿಮಿಷಗಳ ಕಾಲ ನೆನೆಸಿದ).
  • ಅಕ್ಕಿ ಮುರಿಯದ ಹಾಗೆ 2 ನಿಮಿಷ ಹುರಿಯಿರಿ.
  • ಇದಲ್ಲದೆ, 2 ಕಪ್ ನೀರು, 1 ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ.
  • ಚೆನ್ನಾಗಿ ಮಿಶ್ರಣ ಮಾಡಿ, 20 ನಿಮಿಷಗಳ ಕಾಲ ಸಿಮ್ಮೆರ್ ನಲ್ಲಿಟ್ಟು ಮುಚ್ಚಿಡಿ. ಅಥವಾ ಕುಕ್ಕರ್ ನಲ್ಲಿ ಮಧ್ಯಮ ಜ್ವಾಲೆಯ ಮೇಲೆ 2 ಸೀಟಿಗಳನ್ನು ಹಾಕಿರಿ.
  • 20 ನಿಮಿಷಗಳ ನಂತರ ತೆರೆದು, ನಿಧಾನವಾಗಿ ಬೆರೆಸಿ. ಅನ್ನ ಇನ್ನೂ ತೇವವಾಗಿರುತ್ತದೆ.
  • ಜ್ವಾಲೆಯನ್ನು ಆಫ್ ಮಾಡಿ, ಮುಚ್ಚಿ, 10 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.
  • ಅಂತಿಮವಾಗಿ, 2 ಟೀಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ರಾಯಿತಾ ಅಥವಾ ಮೇಲೋಗರದೊಂದಿಗೆ ವೆಜಿಟೇಬಲ್ ರೈಸ್ ಅನ್ನು ಆನಂದಿಸಿ.