ವೆಜಿಟೇಬಲ್ ರೈಸ್ ರೆಸಿಪಿ | vegetable rice in kannada | ಮಿಕ್ಸ್ ವೆಜ್ ರೈಸ್

ಈ ಪೋಸ್ಟ್ ಅನ್ಯ ಭಾಷೆಯಲ್ಲಿ ಉಪಲಬ್ದವಿದೆ ಆಂಗ್ಲ (English)

ವೆಜಿಟೇಬಲ್ ರೈಸ್ ಪಾಕವಿಧಾನ | ಮಿಕ್ಸ್ ವೆಜ್ ರೈಸ್ | ಇನ್ಸ್ಟಂಟ್ ಒನ್ ಪಾಟ್ ವೆಜಿಟಬಲ್ ರೈಸ್ನ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಇದು ರೈಸ್ ಮತ್ತು ತರಕಾರಿಗಳ ಆಯ್ಕೆಯೊಂದಿಗೆ ತಯಾರಿಸಿದ ಸರಳ ಮತ್ತು ಪೌಷ್ಠಿಕಾಂಶದ ಇನ್ಸ್ಟಂಟ್ ಒನ್ ಪಾಟ್ ಊಟದ ಪಾಕವಿಧಾನವಾಗಿದೆ. ಇದು ಪರಿಪೂರ್ಣವಾದ ತ್ವರಿತ ಮಧಾಹ್ನ ಊಟ ಡಬ್ಬದ ಪಾಕವಿಧಾನವಾಗಿದೆ. ಬಿಡುವಿಲ್ಲದ ಬೆಳಿಗ್ಗೆಯ ಸಮಯದಲ್ಲಿ, ಕ್ಷಣಾರ್ಧದಲ್ಲಿ ಇದನ್ನು ತಯಾರಿಸಬಹುದು. ರಾಯಿತಾ ಅಥವಾ ದಾಲ್ ಪಾಕವಿಧಾನದ ಆಯ್ಕೆಯೊಂದಿಗೆ ಬಡಿಸಿದಾಗ ಇದು ಉತ್ತಮ ರುಚಿ ನೀಡುತ್ತದೆ, ಆದರೆ, ಹಾಗೆಯೇ ಸವಿಯಲು ಕೂಡ ರುಚಿಯಾಗಿರುತ್ತದೆ.ವೆಜಿಟೇಬಲ್ ರೈಸ್ ಪಾಕವಿಧಾನವೆಜಿಟೇಬಲ್ ರೈಸ್ ಪಾಕವಿಧಾನ | ಮಿಕ್ಸ್ ವೆಜ್ ರೈಸ್ | ಇನ್ಸ್ಟಂಟ್ ಒನ್ ಪಾಟ್ ವೆಜಿಟಬಲ್ ರೈಸ್ನ ಹಂತ ಹಂತವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಪುಲಾವ್ ಅಥವಾ ರೈಸ್ ಪಾಕವಿಧಾನಗಳು ಅನೇಕ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಊಟ ಡಬ್ಬದ ಪಾಕವಿಧಾನಗಳಾಗಿವೆ. ತರಕಾರಿಗಳು ಅಥವಾ ಇತರ ಸಾಮಗ್ರಿಗಳೊಂದಿಗೆ ತಯಾರಿಸಿದ ಅನೇಕ ಫ್ಲೇವರ್ ಮತ್ತು ಪರಿಮಳಯುಕ್ತ ಭಾರತೀಯ ಪುಲಾವ್ ಪಾಕವಿಧಾನಗಳಿವೆ. ಆದಾಗ್ಯೂ, ಈ ಪಾಕವಿಧಾನ ವಿಶಿಷ್ಟವಾಗಿದೆ ಮತ್ತು ವೆಜಿಟೇಬಲ್ ರೈಸ್ ಪಾಕವಿಧಾನ ಎಂದು ಕರೆಯಲ್ಪಡುವ ಇದು, ತರಕಾರಿ ಹಾಗೂ ಮಸಾಲೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ.

ಮಿಕ್ಸ್ ವೆಜ್ ರೈಸ್‌ನ ಈ ಪಾಕವಿಧಾನವು ಕೆಲವು ಸೂಕ್ಷ್ಮ ಬದಲಾವಣೆಗಳೊಂದಿಗೆ ನನ್ನ ಹಿಂದಿನ ತರಕಾರಿ ಪುಲಾವ್ ಪಾಕವಿಧಾನದ ಪೋಸ್ಟ್‌ಗೆ ಹೋಲುತ್ತದೆ. ಮೂಲತಃ, ಅನ್ನವನ್ನು ಮೊದಲೇ ಬೇಯಿಸಿ, ಸಣ್ಣಗೆ ಕತ್ತರಿಸಿದ ತರಕಾರಿಗಳೊಂದಿಗೆ ಬೆರೆಸಿ ಹುರಿಯಲಾಗುತ್ತದೆ. ಆದರೆ ಪುಲಾವ್ ಪಾಕವಿಧಾನಗಳಲ್ಲಿರುವಂತೆ, ಒಣ ಮಸಾಲೆಗಳು ಮತ್ತು ಸೊಪ್ಪುಗಳನ್ನು ಉತ್ತಮವಾದ ಪೇಸ್ಟ್ ಗೆ ರುಬ್ಬಲಾಗುತ್ತದೆ ಮತ್ತು ಅದನ್ನು ಅಕ್ಕಿಯೊಂದಿಗೆ ಬೇಯಿಸಲಾಗುತ್ತದೆ. ಈ ಫ್ಲೇವರ್ ಮತ್ತು ಮಸಾಲೆಗಳು ಅನ್ನದ ಜೊತೆ ಸೇರಿ ಅದು ಆರೊಮ್ಯಾಟಿಕ್ ಮತ್ತು ಟೇಸ್ಟಿಯನ್ನಾಗಿ ಮಾಡುತ್ತದೆ. ಆದರೆ ಈ ವಿವರವಾದ ಪಾಕವಿಧಾನವನ್ನು ಅನುಸರಿಸಲು ನಿಮ ಬಳಿ ಹೆಚ್ಚು ಸಮಯ ಇಲ್ಲದಿರಬಹುದು. ಆದ್ದರಿಂದ ನೀವು ಈ ತ್ವರಿತ ಮತ್ತು ಸುಲಭವಾದ ವೆಜಿಟೇಬಲ್ ರೈಸ್ ಪಾಕವಿಧಾನವನ್ನು ತಯಾರಿಸಬಹುದು. ಬಹುಶಃ ಇದನ್ನು ಮಸಾಲೆಗಳು ಮತ್ತು ತರಕಾರಿಗಳೊಂದಿಗೆ ಬೆರೆಸಿ ಹುರಿದುದರಿಂದ ಭಾರತೀಯ ಸ್ಟಿರ್ ಫ್ರೈಡ್ ರೆಸಿಪಿ ಎಂದೂ ಕರೆಯಬಹುದು.

ಮಿಕ್ಸ್ ವೆಜ್ ರೈಸ್ವೆಜಿಟೇಬಲ್ ರೈಸ್ ಪಾಕವಿಧಾನಕ್ಕಾಗಿ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲನೆಯದಾಗಿ, ಪಾಕವಿಧಾನವು ನೆನೆಸಿದ ಬಾಸ್ಮತಿ ಅಕ್ಕಿಯೊಂದಿಗೆ ತಯಾರಿಸಬೇಕಾಗುತ್ತದೆ. ನೀವು ಉಳಿದ ಅನ್ನದೊಂದಿಗೆ ಫ್ರೈ ಮಾಡಬಹುದು ಆದರೆ ಅಕ್ಕಿಯನ್ನು ಬೇರ್ಪಡಿಸಲು ಖಚಿತಪಡಿಸಿಕೊಳ್ಳಬಹುದು. ಎರಡನೆಯದಾಗಿ, ತರಕಾರಿಗಳನ್ನು ಸಣ್ಣಗೆ ಕತ್ತರಿಸುವುದನ್ನು ಖಚಿತಪಡಿಸಿಕೊಳ್ಳಿ. ಆದ್ದರಿಂದ ಇದು ಸುಲಭವಾಗಿ ಕಡೈನಲ್ಲಿ ಬೇಯುತ್ತದೆ. ಆದರೆ ತರಕಾರಿಗಳನ್ನು ಜಾಸ್ತಿ ಬೇಯಿಸಬೇಡಿ. ಅದು ಅದರ ಕುರುಕಲು ಮತ್ತು ವಿನ್ಯಾಸವನ್ನು ಹಿಡಿದಿಟ್ಟುಕೊಳ್ಳಬೇಕು. ಕೊನೆಯದಾಗಿ, ಈ ರೈಸ್ ಪಾಕವಿಧಾನದೊಂದಿಗೆ ನೀವು ಸೈಡ್ ಡಿಶ್ ಬಯಸಿದರೆ, ಅದನ್ನು ಮೂಂಗ್ ದಾಲ್ ಅಥವಾ ದಾಲ್ ತಡ್ಕಾ ಪಾಕವಿಧಾನದೊಂದಿಗೆ ಬಡಿಸಿ.

ಅಂತಿಮವಾಗಿ, ವೆಜಿಟೇಬಲ್ ರೈಸ್ ಪಾಕವಿಧಾನದ ಈ ಪೋಸ್ಟ್‌ನೊಂದಿಗೆ ನನ್ನ ಇತರ ಜನಪ್ರಿಯ ಭಾರತೀಯ ಅನ್ನದ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ. ಇದು ಪುದಿನಾ ರೈಸ್, ವೆಜ್ ಪುಲಾವ್, ಮೇಥಿ ರೈಸ್, ಲೆಮನ್ ರೈಸ್, ಕಡಲೆ ರೈಸ್, ಬೀಟ್ರೂಟ್ ರೈಸ್, ವೆಜ್ ಫ್ರೈಡ್ ರೈಸ್, ಜೀರಾ ರೈಸ್ ಮತ್ತು ವೆಜ್ ತಹ್ರಿ ರೈಸ್ ಪಾಕವಿಧಾನಗಳನ್ನು ಒಳಗೊಂಡಿದೆ. ಜೊತೆಗೆ, ನಾನು ಕೆಲವು ಇತರ ಪಾಕವಿಧಾನಗಳ ಸಂಗ್ರಹವನ್ನು ಪೋಸ್ಟ್ ಮಾಡಿದ್ದೇನೆ,

ವೆಜಿಟೇಬಲ್ ರೈಸ್ ವೀಡಿಯೊ ಪಾಕವಿಧಾನ:

ಮಿಕ್ಸ್ ವೆಜ್ ರೈಸ್ ಪಾಕವಿಧಾನ ಕಾರ್ಡ್:

mix veg rice

ವೆಜಿಟೇಬಲ್ ರೈಸ್ ರೆಸಿಪಿ | vegetable rice in kannada | ಮಿಕ್ಸ್ ವೆಜ್ ರೈಸ್

0 from 0 votes
ತಯಾರಿ ಸಮಯ: 10 minutes
ಅಡುಗೆ ಸಮಯ: 9 minutes
ಒಟ್ಟು ಸಮಯ : 19 minutes
ಸೇವೆಗಳು: 2 ಸೇವೆಗಳು
AUTHOR: HEBBARS KITCHEN
ಕೋರ್ಸ್: ಅನ್ನ - ರೈಸ್
ಪಾಕಪದ್ಧತಿ: ಭಾರತೀಯ
ಕೀವರ್ಡ್: ವೆಜಿಟೇಬಲ್ ರೈಸ್ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ವೆಜಿಟೇಬಲ್ ರೈಸ್ ಪಾಕವಿಧಾನ | ಮಿಕ್ಸ್ ವೆಜ್ ರೈಸ್

ಪದಾರ್ಥಗಳು

  • 3 ಟೀಸ್ಪೂನ್ ಎಣ್ಣೆ
  • 1 ಬೇ ಎಲೆ / ತೇಜ್ ಪತ್ತಾ
  • 1 ಇಂಚಿನ ದಾಲ್ಚಿನ್ನಿ
  • 2 ಏಲಕ್ಕಿ
  • ½ ಈರುಳ್ಳಿ, ಸಣ್ಣಗೆ ಕತ್ತರಿಸಿದ
  • 1 ಮೆಣಸಿನಕಾಯಿ, ಸೀಳಿದ
  • 5 ಬೀನ್ಸ್, ಕತ್ತರಿಸಿದ
  • 1 ಕ್ಯಾರೆಟ್, ಕತ್ತರಿಸಿದ
  • 2 ಟೇಬಲ್ಸ್ಪೂನ್ ಬಟಾಣಿ
  • ¼ ಕ್ಯಾಪ್ಸಿಕಂ, ಕತ್ತರಿಸಿದ
  • 1 ಕಪ್ ಬಾಸ್ಮತಿ ಅಕ್ಕಿ, 20 ನಿಮಿಷ ನೆನೆಸಿ
  • 2 ಕಪ್ ನೀರು
  • 1 ಟೀಸ್ಪೂನ್ ಉಪ್ಪು
  • 1 ಟೀಸ್ಪೂನ್ ನಿಂಬೆ ರಸ
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು, ಸಣ್ಣಗೆ ಕತ್ತರಿಸಿದ

ಸೂಚನೆಗಳು

  • ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 1 ಬೇ ಎಲೆ, 1 ಇಂಚಿನ ದಾಲ್ಚಿನ್ನಿ ಮತ್ತು 2 ಏಲಕ್ಕಿ ಪರಿಮಳ ಬರುವವರೆಗೆ ಹುರಿಯಿರಿ.
  • ಈಗ ½ ಈರುಳ್ಳಿ, 1 ಮೆಣಸಿನಕಾಯಿ ಸೇರಿಸಿ, ಅವು ಸ್ವಲ್ಪ ಕುಗ್ಗುವವರೆಗೆ ಸಾಟ್ ಮಾಡಿ.
  • ಈಗ 5 ಬೀನ್ಸ್, 1 ಕ್ಯಾರೆಟ್, 2 ಟೀಸ್ಪೂನ್ ಬಟಾಣಿ ಮತ್ತು ¼ ಕ್ಯಾಪ್ಸಿಕಂ ಸೇರಿಸಿ.
  • ತರಕಾರಿಗಳನ್ನು ಜಾಸ್ತಿ ಬೇಯಿಸದೆ 2 ನಿಮಿಷಗಳ ಕಾಲ ಹುರಿಯಿರಿ.
  • ಈಗ 1 ಕಪ್ ಬಾಸ್ಮತಿ ಅಕ್ಕಿ ಸೇರಿಸಿ (20 ನಿಮಿಷಗಳ ಕಾಲ ನೆನೆಸಿದ).
  • ಅಕ್ಕಿ ಮುರಿಯದ ಹಾಗೆ 2 ನಿಮಿಷ ಹುರಿಯಿರಿ.
  • ಇದಲ್ಲದೆ, 2 ಕಪ್ ನೀರು, 1 ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ.
  • ಚೆನ್ನಾಗಿ ಮಿಶ್ರಣ ಮಾಡಿ, 20 ನಿಮಿಷಗಳ ಕಾಲ ಸಿಮ್ಮೆರ್ ನಲ್ಲಿಟ್ಟು ಮುಚ್ಚಿಡಿ. ಅಥವಾ ಕುಕ್ಕರ್ ನಲ್ಲಿ ಮಧ್ಯಮ ಜ್ವಾಲೆಯ ಮೇಲೆ 2 ಸೀಟಿಗಳನ್ನು ಹಾಕಿರಿ.
  • 20 ನಿಮಿಷಗಳ ನಂತರ ತೆರೆದು, ನಿಧಾನವಾಗಿ ಬೆರೆಸಿ. ಅನ್ನ ಇನ್ನೂ ತೇವವಾಗಿರುತ್ತದೆ.
  • ಜ್ವಾಲೆಯನ್ನು ಆಫ್ ಮಾಡಿ, ಮುಚ್ಚಿ, 10 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.
  • ಅಂತಿಮವಾಗಿ, 2 ಟೀಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ರಾಯಿತಾ ಅಥವಾ ಮೇಲೋಗರದೊಂದಿಗೆ ವೆಜಿಟೇಬಲ್ ರೈಸ್ ಅನ್ನು ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ವೆಜಿಟೇಬಲ್ ರೈಸ್ ಮಾಡುವುದು ಹೇಗೆ:

  1. ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 1 ಬೇ ಎಲೆ, 1 ಇಂಚಿನ ದಾಲ್ಚಿನ್ನಿ ಮತ್ತು 2 ಏಲಕ್ಕಿ ಪರಿಮಳ ಬರುವವರೆಗೆ ಹುರಿಯಿರಿ.
  2. ಈಗ ½ ಈರುಳ್ಳಿ, 1 ಮೆಣಸಿನಕಾಯಿ ಸೇರಿಸಿ, ಅವು ಸ್ವಲ್ಪ ಕುಗ್ಗುವವರೆಗೆ ಸಾಟ್ ಮಾಡಿ.
  3. ಈಗ 5 ಬೀನ್ಸ್, 1 ಕ್ಯಾರೆಟ್, 2 ಟೀಸ್ಪೂನ್ ಬಟಾಣಿ ಮತ್ತು ¼ ಕ್ಯಾಪ್ಸಿಕಂ ಸೇರಿಸಿ.
  4. ತರಕಾರಿಗಳನ್ನು ಜಾಸ್ತಿ ಬೇಯಿಸದೆ 2 ನಿಮಿಷಗಳ ಕಾಲ ಹುರಿಯಿರಿ.
  5. ಈಗ 1 ಕಪ್ ಬಾಸ್ಮತಿ ಅಕ್ಕಿ ಸೇರಿಸಿ (20 ನಿಮಿಷಗಳ ಕಾಲ ನೆನೆಸಿದ).
  6. ಅಕ್ಕಿ ಮುರಿಯದ ಹಾಗೆ 2 ನಿಮಿಷ ಹುರಿಯಿರಿ.
  7. ಇದಲ್ಲದೆ, 2 ಕಪ್ ನೀರು, 1 ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ.
  8. ಚೆನ್ನಾಗಿ ಮಿಶ್ರಣ ಮಾಡಿ, 20 ನಿಮಿಷಗಳ ಕಾಲ ಸಿಮ್ಮೆರ್ ನಲ್ಲಿಟ್ಟು ಮುಚ್ಚಿಡಿ. ಅಥವಾ ಕುಕ್ಕರ್ ನಲ್ಲಿ ಮಧ್ಯಮ ಜ್ವಾಲೆಯ ಮೇಲೆ 2 ಸೀಟಿಗಳನ್ನು ಹಾಕಿರಿ.
  9. 20 ನಿಮಿಷಗಳ ನಂತರ ತೆರೆದು, ನಿಧಾನವಾಗಿ ಬೆರೆಸಿ. ಅನ್ನ ಇನ್ನೂ ತೇವವಾಗಿರುತ್ತದೆ.
  10. ಜ್ವಾಲೆಯನ್ನು ಆಫ್ ಮಾಡಿ, ಮುಚ್ಚಿ, 10 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.
  11. ಅಂತಿಮವಾಗಿ, 2 ಟೀಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ರಾಯಿತಾ ಅಥವಾ ಮೇಲೋಗರದೊಂದಿಗೆ ವೆಜಿಟೇಬಲ್ ರೈಸ್ ಅನ್ನು ಆನಂದಿಸಿ.
    ವೆಜಿಟೇಬಲ್ ರೈಸ್ ಪಾಕವಿಧಾನ

ಟಿಪ್ಪಣಿಗಳು:

  • ಮೊದಲನೆಯದಾಗಿ, ಹೆಚ್ಚು ಪೌಷ್ಟಿಕವಾಗಿಸಲು ನಿಮ್ಮ ಆಯ್ಕೆಯ ತರಕಾರಿಗಳನ್ನು ಸೇರಿಸಿ.
  • ಮಸಾಲೆಯುಕ್ತವಾಗಿಸಲು ಹಸಿರು ಮೆಣಸಿನಕಾಯಿಯನ್ನು ಹೆಚ್ಚಿಸಿ.
  • ಇದಲ್ಲದೆ, ನೀವು ಸಿಮ್ಮೆರ್ ನಲ್ಲಿ ಇಡಲು ಬಯಸದಿದ್ದರೆ, ವೆಜಿಟೇಬಲ್ ರೈಸ್ ಅನ್ನು 2 ಸೀಟಿಗಳಿಗೆ ಬೇಯಿಸಬಹುದು.
  • ಅಂತಿಮವಾಗಿ, ಬಾಸ್ಮತಿ ಅಕ್ಕಿಯೊಂದಿಗೆ ತಯಾರಿಸಿದಾಗ ವೆಜಿಟೇಬಲ್ ರೈಸ್ ಪಾಕವಿಧಾನವು ರುಚಿಯಾಗಿರುತ್ತದೆ.
ಈ ಪೋಸ್ಟ್ ಅನ್ಯ ಭಾಷೆಯಲ್ಲಿ ಉಪಲಬ್ದವಿದೆ ಆಂಗ್ಲ (English)
street food recipes[sp_wpcarousel id="55071"]
related articles