Go Back
+ servings
sirka pyaz recipe
Print Pin
No ratings yet

ಸಿರ್ಕಾ ಪ್ಯಾಜ್ ರೆಸಿಪಿ | sirka pyaz in kannada | ಈರುಳ್ಳಿ ಉಪ್ಪಿನಕಾಯಿ

ಸುಲಭ ಸಿರ್ಕಾ ಪ್ಯಾಜ್ ಪಾಕವಿಧಾನ | ಈರುಳ್ಳಿ ಉಪ್ಪಿನಕಾಯಿ | ವಿನೆಗರ್ ಈರುಳ್ಳಿ
ಕೋರ್ಸ್ ಉಪ್ಪಿನಕಾಯಿ
ಪಾಕಪದ್ಧತಿ ಉತ್ತರ ಭಾರತೀಯ
ಕೀವರ್ಡ್ ಸಿರ್ಕಾ ಪ್ಯಾಜ್ ರೆಸಿಪಿ
ತಯಾರಿ ಸಮಯ 5 minutes
ಅಡುಗೆ ಸಮಯ 5 minutes
ವಿಶ್ರಾಂತಿ ಸಮಯ 1 day
ಸೇವೆಗಳು 1 ಜಾರ್
ಲೇಖಕ HEBBARS KITCHEN

ಪದಾರ್ಥಗಳು

  • 18 ಪರ್ಲ್ ಈರುಳ್ಳಿ   
  • 1 ಇಂಚಿನ ಶುಂಠಿ ಜುಲಿಯೆನ್
  • 2 ಮೆಣಸಿನಕಾಯಿ ಕತ್ತರಿಸಿದ
  • 1 ಟೇಬಲ್ಸ್ಪೂನ್ ಉಪ್ಪು
  • 1 ಕಪ್ ನೀರು
  • 1 ಇಂಚಿನ ದಾಲ್ಚಿನ್ನಿ
  • 1 ಟೀಸ್ಪೂನ್ ಪೆಪ್ಪರ್
  • 5 ಲವಂಗ
  • ¼ ಬೀಟ್ರೂಟ್ ಹೋಳು ಮಾಡಿದ
  • 1 ಕಪ್ ವಿನೆಗರ್

ಸೂಚನೆಗಳು

  • ಮೊದಲನೆಯದಾಗಿ, ಸಣ್ಣ ಈರುಳ್ಳಿಯನ್ನು ಕತ್ತರಿಸದೆ ಸಿಪ್ಪೆ ತಗೆಯಿರಿ.
  • ಈಗ ಈರುಳ್ಳಿಯನ್ನು ಕತ್ತರಿಸದೆ x ಅಂತ ಗುರುತಿಸಿ.
  • ಸಣ್ಣ ಈರುಳ್ಳಿಯನ್ನು ದೊಡ್ಡ ಗಾಜಿನ ಜಾರ್ ಗೆ ವರ್ಗಾಯಿಸಿ.
  • 1 ಇಂಚು ಶುಂಠಿ, 2 ಮೆಣಸಿನಕಾಯಿ ಮತ್ತು 1 ಟೇಬಲ್ಸ್ಪೂನ್ ಉಪ್ಪು ಸೇರಿಸಿ.
  • ಒಂದು ಲೋಹದ ಬೋಗುಣಿಗೆ 1 ಕಪ್ ನೀರು ತೆಗೆದುಕೊಂಡು 1 ಇಂಚಿನ ದಾಲ್ಚಿನ್ನಿ, 1 ಟೀಸ್ಪೂನ್ ಮೆಣಸು, 5 ಲವಂಗ ಮತ್ತು ¼ ಬೀಟ್ರೂಟ್ ಸೇರಿಸಿ.
  • 5 ನಿಮಿಷಗಳ ಕಾಲ ಅಥವಾ ಬೀಟ್ರೂಟ್ ಮೃದುವಾಗಿ ತಿರುಗಿ ಬಣ್ಣವನ್ನು ಹೊರಹಾಕುವವರೆಗೆ ಕುದಿಸಿ.
  • ಸಂಪೂರ್ಣವಾಗಿ ತಣ್ಣಗಾಗಿಸಿ ಜಾರ್ ಗೆ ವರ್ಗಾಯಿಸಿ.
  • ಹಾಗೆಯೇ, 1 ಕಪ್ ವಿನೆಗರ್ ಸೇರಿಸಿ, ಜಾರ್ ಅನ್ನು ಮುಚ್ಚಿ.
  • ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.
  • ರಸವನ್ನು ಈರುಳ್ಳಿಯು ಹೀರಿಕೊಳ್ಳಲು 24 ಗಂಟೆಗಳ ಕಾಲ ಹಾಗೆಯೇ ವಿಶ್ರಮಿಸಲು ಬಿಡಿ.
  • ಅಂತಿಮವಾಗಿ, ಸಿರ್ಕಾ ಪ್ಯಾಜ್ ಅನ್ನು ಸವಿಯಿರಿ ಅಥವಾ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿ, 2 ತಿಂಗಳು ಬಳಸಿ.