ಮೊದಲಿಗೆ, ದೊಡ್ಡ ಮಿಶ್ರಣ ಬಟ್ಟಲಿನಲ್ಲಿ 2 ಬೇಯಿಸಿದ ಮತ್ತು ಹಿಸುಕಿದ ಆಲೂಗೆಡ್ಡೆ, 2 ಟೇಬಲ್ಸ್ಪೂನ್ ಈರುಳ್ಳಿ, 2 ಟೇಬಲ್ಸ್ಪೂನ್ ಕ್ಯಾಪ್ಸಿಕಮ್ ಮತ್ತು 1 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ.
½ ಟೀಸ್ಪೂನ್ ಮೆಣಸಿನ ಪುಡಿ, 1 ಟೀಸ್ಪೂಟ್ ಚಾಟ್ ಮಸಾಲಾ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
ಎಲ್ಲಾ ಪದಾರ್ಥಗಳು ಚೆನ್ನಾಗಿ ಮಿಶ್ರಣವಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.
ಈಗ ಬ್ರೆಡ್ನ 2 ಸ್ಲೈಸ್ ಗಳು ಮತ್ತು 1 ಟೇಬಲ್ಸ್ಪೂನ್ ಟೊಮೆಟೊ ಸಾಸ್ ಮತ್ತು 1 ಟೇಬಲ್ಸ್ಪೂನ್ ಗ್ರೀನ್ ಚಟ್ನಿ ಬ್ರೆಡ್ನ ಪ್ರತಿ ಸ್ಲೈಸ್ನಲ್ಲಿ ಹರಡಿ.
ಬ್ರೆಡ್ ಸ್ಲೈಸ್ ಮೇಲೆ ತಯಾರಾದ ಆಲೂ ಮಸಾಲಾದ ಒಂದು ಟೇಬಲ್ಸ್ಪೂನ್ ಹರಡಿ.
ಅಲ್ಲದೆ, ಆಲೂ ಮಸಾಲಾ ಮೇಲೆ ಟೊಮೇಟೊ ಸ್ಲೈಸ್ ಗಳನ್ನು ಇರಿಸಿ.
ನಂತರ ಪುಡಿಮಾಡಿದ ಪೆಪ್ಪರ್ ಸಿಂಪಡಿಸಿ.
ಮತ್ತಷ್ಟು ಚೆಡ್ಡರ್ ಚೀಸ್ ಅನ್ನು ಉದಾರವಾಗಿ ತುರಿಯಿರಿ.
ಬ್ರೆಡ್ನ ಮತ್ತೊಂದು ಸ್ಲೈಸ್ನೊಂದಿಗೆ ಕವರ್ ಮಾಡಿ ನಿಧಾನವಾಗಿ ಒತ್ತಿರಿ.
ಎರಡೂ ಬದಿಗಳಲ್ಲಿ ಬೆಣ್ಣೆಯನ್ನು ಹರಡಿ ಸ್ಯಾಂಡ್ವಿಚ್ ರೋಸ್ಟ್ ಮಾಡಿ.
ಅಂತಿಮವಾಗಿ, ಅರ್ಧದಷ್ಟು ಬ್ರೆಡ್ ಕತ್ತರಿಸಿ ಮಸಾಲೆಯುಕ್ತ ಆಲೂ ಸ್ಯಾಂಡ್ವಿಚ್ ಅನ್ನು ಸೇವಿಸಿ.