Go Back
+ servings
thandai recipe
Print Pin
No ratings yet

ಥಂಡಾಯ್ ರೆಸಿಪಿ | thandai in kannada | 3 ವೇಸ್ ಥಂಡಾಯ್ ಮಿಕ್ಸ್

ಸುಲಭ ಥಂಡಾಯ್ ಪಾಕವಿಧಾನ | 3 ವೇಸ್ ಥಂಡಾಯ್ ಮಿಕ್ಸ್ | ಸರ್ದಾಯ್ | ಥಂಡೈ ಮಸಾಲಾ
ಕೋರ್ಸ್ ಪಾನೀಯ
ಪಾಕಪದ್ಧತಿ ಉತ್ತರ ಭಾರತೀಯ
ಕೀವರ್ಡ್ ಥಂಡಾಯ್ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 10 minutes
ನೆನೆಸುವ ಸಮಯ 6 hours
ಒಟ್ಟು ಸಮಯ 6 hours 20 minutes
ಸೇವೆಗಳು 6 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಥಂಡಾಯ್ ಮಸಾಲಾ ಪೇಸ್ಟ್ ಗೆ:

  • ¼ ಕಪ್ ಆಲ್ಮಂಡ್ / ಬಾದಾಮ್ (ಬ್ಲಾಂಚ್ಡ್)
  • 2 ಟೇಬಲ್ಸ್ಪೂನ್ ಪಿಸ್ತಾ
  • ¼ ಕಪ್ ಗೋಡಂಬಿ
  • ¼ ಕಪ್ ಕಲ್ಲಂಗಡಿ ಬೀಜಗಳು
  • ½ ಟೇಬಲ್ಸ್ಪೂನ್ ಪೆಪ್ಪರ್
  • 2 ಟೇಬಲ್ಸ್ಪೂನ್ ಗಸಗಸೆ ಬೀಜಗಳು
  • 2 ಟೇಬಲ್ಸ್ಪೂನ್ ಫೆನ್ನೆಲ್ / ಸೋಂಪು
  • 8 ಏಲಕ್ಕಿ
  • ¼ ಟೀಸ್ಪೂನ್ ಕೇಸರಿ
  • 3 ಟೇಬಲ್ಸ್ಪೂನ್ ಗುಲಾಬಿ ದಳಗಳು (ಒಣಗಿದ)
  • ಕಪ್ ನೀರು (ನೆನೆಸಲು)

ಇತರ ಪದಾರ್ಥಗಳು:

  • ಸಕ್ಕರೆ
  • ಹಾಲು
  • ಐಸ್ ಕ್ಯೂಬ್ಸ್
  • ಮಾವು
  • ಹಳದಿ ಆಹಾರ ಬಣ್ಣ (ಐಚ್ಛಿಕ)
  • ಪಾನ್ ಲೀಫ್ / ಬೀಟಲ್ ಲೀಫ್
  • ಹಸಿರು ಆಹಾರ ಬಣ್ಣ (ಐಚ್ಛಿಕ)

ಸೂಚನೆಗಳು

ಥಂಡಾಯ್ ಮಸಾಲಾ ಪೇಸ್ಟ್ ಮಾಡುವುದು ಹೇಗೆ:

  • ಮೊದಲಿಗೆ, ದೊಡ್ಡ ಬೌಲ್ನಲ್ಲಿ ½ ಕಪ್ ಬಾದಾಮಿ, 2 ಟೀಸ್ಪೂನ್ ಪಿಸ್ತಾ, ¼ ಕಪ್ ಗೋಡಂಬಿ, ¼ ಕಪ್ ಕಲ್ಲಂಗಡಿ ಬೀಜಗಳು ಮತ್ತು ½ ಟೇಬಲ್ಸ್ಪೂನ್ ಪೆಪ್ಪರ್ ತೆಗೆದುಕೊಳ್ಳಿ.
  • 2 ಟೇಬಲ್ಸ್ಪೂನ್ ಗಸಗಸೆ ಬೀಜಗಳು, 2 ಟೇಬಲ್ಸ್ಪೂನ್ ಫೆನ್ನೆಲ್, 8 ಏಲಕ್ಕಿಗಳು, ¼ ಟೀಸ್ಪೂನ್ ಕೇಸರಿ ಮತ್ತು 3 ಟೇಬಲ್ಸ್ಪೂನ್ ಗುಲಾಬಿ ದಳಗಳನ್ನು ಕೂಡಾ ಸೇರಿಸಿ.
  • 1½ ಕಪ್ ನೀರು ಸೇರಿಸಿ ಮತ್ತು 6 ಗಂಟೆಗಳ ಕಾಲ ನೆನೆಸಿಡಿ. ನೀವು ಗಡಿಬಿಡಿಯಲ್ಲಿದ್ದರೆ ಬಿಸಿ ನೀರಿನಲ್ಲಿ 1 ಗಂಟೆಗೆ ನೆನೆಸಿಡಿ.
  • 6 ಗಂಟೆಗಳ ಕಾಲ ನೆನೆಸಿದ ನಂತರ, ಒಣ ಹಣ್ಣುಗಳು ಚೆನ್ನಾಗಿ ನೆನೆಸಿರುವದನ್ನು ನೀವು ನೋಡಬಹುದು.
  • ಈಗ ನೆನೆಸಿದ ಒಣ ಹಣ್ಣುಗಳನ್ನು ನೀರಿನ ಜೊತೆಗೆ ಮಿಕ್ಸರ್ ಗೆ ವರ್ಗಾಯಿಸಿ.
  • ಬಹಳ ಮೃದುವಾದ ಪೇಸ್ಟ್ಗೆ ರುಬ್ಬಿಕೊಳ್ಳಿ. ಥಂಡಾಯಿ ಮಸಾಲಾ ಪೇಸ್ಟ್ ಸಿದ್ಧವಾಗಿದೆ.
  • ಕ್ಲಾಸಿಕ್ ಥಂಡಾಯ್ ತಯಾರಿಸಲು, ಬ್ಲೆಂಡರ್ನಲ್ಲಿ 3 ಟೇಬಲ್ಸ್ಪೂನ್ ತಯಾರಿಸಿದ ಥಂಡಾಯ್ ಮಸಾಲಾ ಪೇಸ್ಟ್ ಮತ್ತು 2 ಟೇಬಲ್ಸ್ಪೂನ್ ಸಕ್ಕರೆ ತೆಗೆದುಕೊಳ್ಳಿ.
  • 1 ಕಪ್ ತಣ್ಣಗಿರುವ ಹಾಲು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
  • ಕ್ಲಾಸಿಕ್ ಥಂಡಾಯ್ ಅನ್ನು ಎತ್ತರದ ಗ್ಲಾಸ್ ಗೆ ವರ್ಗಾಯಿಸಿ, ಒಣ ಹಣ್ಣುಗಳು, ಐಸ್ ಕ್ಯೂಬ್ಸ್ ಗಳು ಮತ್ತು ಒಣಗಿದ ಗುಲಾಬಿ ದಳಗಳೊಂದಿಗೆ ಅಲಂಕರಿಸಿ.

ಮಾವು ಫ್ಲೇವರ್ ಥಂಡಾಯ್ ಹೇಗೆ ತಯಾರಿಸುವುದು:

  • ಬ್ಲೆಂಡರ್ನಲ್ಲಿ 3 ಟೇಬಲ್ಸ್ಪೂನ್ ತಯಾರಿಸಿದ ಥಂಡಾಯ್ ಮಸಾಲಾ ಪೇಸ್ಟ್ ಮತ್ತು 2 ಟೇಬಲ್ಸ್ಪೂನ್ ಸಕ್ಕರೆ ತೆಗೆದುಕೊಳ್ಳಿ.
  • 3 ಟೇಬಲ್ಸ್ಪೂನ್ ಮಾವು ಸೇರಿಸಿ, 2 ಹನಿ ಹಳದಿ ಆಹಾರ ಬಣ್ಣ ಮತ್ತು 1 ಕಪ್ ತಣ್ಣಗಿರುವ ಹಾಲು ತೆಗೆದುಕೊಂಡು ತೆಗದುಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.
  • ಮಾವಿನ ಫ್ಲೇವರ್ ನ ಥಂಡಾಯ್ ಅನ್ನು ಎತ್ತರದ ಗ್ಲಾಸ್ ಗೆ ವರ್ಗಾಯಿಸಿ, ಒಣ ಹಣ್ಣುಗಳು, ಐಸ್ ಕ್ಯೂಬ್ಸ್ ಗಳು ಮತ್ತು ಒಣಗಿದ ಗುಲಾಬಿ ದಳಗಳೊಂದಿಗೆ ಅಲಂಕರಿಸಿ.

ಪಾನ್ ಫ್ಲೇವರ್ ಥಂಡಾಯ್ ಹೇಗೆ ತಯಾರಿಸುವುದು:

  • ಬ್ಲೆಂಡರ್ನಲ್ಲಿ 3 ಟೇಬಲ್ಸ್ಪೂನ್ ತಯಾರಿಸಿದ ಥಂಡಾಯ್ ಮಸಾಲಾ ಪೇಸ್ಟ್ ಮತ್ತು 2 ಟೇಬಲ್ಸ್ಪೂನ್ ಸಕ್ಕರೆ ತೆಗೆದುಕೊಳ್ಳಿ.
  • 2 ಬೀಟಲ್ ಎಲೆಗಳು, 2 ಹನಿ ಹಸಿರು ಆಹಾರ ಬಣ್ಣ ಮತ್ತು 1 ಕಪ್ ತಣ್ಣಗಿರುವ ಹಾಲನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
  • ಪಾನ್ ಥಂಡಾಯ್ ಅನ್ನು ಎತ್ತರದ ಗ್ಲಾಸ್ ಗೆ ವರ್ಗಾಯಿಸಿ, ಒಣ ಹಣ್ಣುಗಳು, ಐಸ್ ಕ್ಯೂಬ್ಸ್ ಗಳು ಮತ್ತು ಒಣಗಿದ ಗುಲಾಬಿ ದಳಗಳೊಂದಿಗೆ ಅಲಂಕರಿಸಿ.