Go Back
+ servings
pancharatna dal
Print Pin
5 from 14 votes

ಪಂಚಮೇಲ್ ದಾಲ್ ರೆಸಿಪಿ | panchmel dal in kannada | ಪಂಚರತ್ನ ದಾಲ್

ಸುಲಭ ಪಂಚಮೇಲ್ ದಾಲ್ ಪಾಕವಿಧಾನ | ಪಂಚರತ್ನ ದಾಲ್ | ರಾಜಸ್ಥಾನಿ ದಾಲ್ ಪಂಚರತನ್
ಕೋರ್ಸ್ ದಾಲ್
ಪಾಕಪದ್ಧತಿ ರಾಜಸ್ಥಾನ
ಕೀವರ್ಡ್ ಪಂಚಮೇಲ್ ದಾಲ್ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 30 minutes
ನೆನೆಸುವ ಸಮಯ 30 minutes
ಒಟ್ಟು ಸಮಯ 1 hour 10 minutes
ಸೇವೆಗಳು 4 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಪ್ರೆಷರ್ ಕುಕ್ ಗಾಗಿ:

  • ¼ ಕಪ್ ತೊಗರಿ ಬೇಳೆ
  • ¼ ಕಪ್ ಉದ್ದಿನ ಬೇಳೆ
  • ¼ ಕಪ್ ಹೆಸರು ಬೇಳೆ
  • ¼ ಕಪ್ ಮಸೂರ್ ದಾಲ್
  • ¼ ಕಪ್ ಕಡ್ಲೆ ಬೇಳೆ
  • ½ ಟೀಸ್ಪೂನ್ ಅರಿಶಿನ
  • ½ ಟೀಸ್ಪೂನ್ ಉಪ್ಪು
  • 2 ಬೇ ಎಲೆ
  • 1 ಟೀಸ್ಪೂನ್ ತುಪ್ಪ
  • 3 ಕಪ್ ನೀರು

ದಾಲ್ ಗಾಗಿ:

  • 2 ಟೇಬಲ್ಸ್ಪೂನ್ ತುಪ್ಪ
  • 1 ಬೇ ಎಲೆ
  • 4 ಲವಂಗ
  • 1 ಕಪ್ಪು ಏಲಕ್ಕಿ
  • 1 ಟೀಸ್ಪೂನ್ ಜೀರಿಗೆ
  • 1 ಒಣಗಿದ ಕೆಂಪು ಮೆಣಸಿನಕಾಯಿ
  • 1 ಈರುಳ್ಳಿ (ಸಣ್ಣಗೆ ಕತ್ತರಿಸಿದ)
  • 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ¼ ಟೀಸ್ಪೂನ್ ಅರಿಶಿನ
  • 1 ಟೀಸ್ಪೂನ್ ಚಿಲ್ಲಿ ಪೌಡರ್
  • 1 ಟೀಸ್ಪೂನ್ ಕೊತ್ತಂಬರಿ ಪುಡಿ
  • ½ ಟೀಸ್ಪೂನ್ ಜೀರಾ ಪೌಡರ್
  • ½ ಟೀಸ್ಪೂನ್ ಉಪ್ಪು
  • 2 ಟೊಮೆಟೊ (ಸಣ್ಣಗೆ ಕತ್ತರಿಸಿದ)
  • ¼ ಟೀಸ್ಪೂನ್ ಗರಂ ಮಸಾಲಾ
  • 1 ಟೀಸ್ಪೂನ್ ಕಸೂರಿ ಮೇಥಿ (ಪುಡಿಮಾಡಿದ)
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)

ಒಗ್ಗರಣೆಗಾಗಿ:

  • 1 ಟೀಸ್ಪೂನ್ ತುಪ್ಪ
  • 1 ಟೀಸ್ಪೂನ್ ಜೀರಿಗೆ
  • ¼ ಟೀಸ್ಪೂನ್ ಚಿಲ್ಲಿ ಪೌಡರ್
  • 1 ಒಣಗಿದ ಕೆಂಪು ಮೆಣಸಿನಕಾಯಿ

ಸೂಚನೆಗಳು

  • ಮೊದಲಿಗೆ, ಒಂದು ಬಟ್ಟಲಿನಲ್ಲಿ ½ ಕಪ್ ತೊಗರಿ ಬೇಳೆ, ¼ ಕಪ್ ಉದ್ದಿನ ಬೇಳೆ, ¼ ಕಪ್ ಹೆಸರು ಬೇಳೆ, ¼ ಕಪ್ ಮಸೂರ್ ದಾಲ್ ಮತ್ತು ¼ ಕಪ್ ಕಡ್ಲೆ ಬೇಳೆಯನ್ನು ತೆಗೆದುಕೊಳ್ಳಿ.
  • ಚೆನ್ನಾಗಿ ತೊಳೆದು ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ.
  • ಪ್ರೆಷರ್ ಕುಕ್ಕರ್ಗೆ ನೆನೆಸಿದ ದಾಲ್ ಅನ್ನು ವರ್ಗಾಯಿಸಿ.
  • ½ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಉಪ್ಪು, 2 ಬೇ ಎಲೆ, 1 ಟೀಸ್ಪೂನ್ ತುಪ್ಪ ಮತ್ತು 3 ಕಪ್ ನೀರು ಸೇರಿಸಿ.
  • 5 ಸೀಟಿಗಳಿಗೆ ಅಥವಾ ಬೇಳೆ ಸಂಪೂರ್ಣವಾಗಿ ಬೇಯುವವರೆಗೆ ಪ್ರೆಷರ್ ಕುಕ್ ಮಾಡಿ.
  • ಕುಕ್ಕರ್ ತೆರೆಯಿರಿ ಮತ್ತು ದಾಲ್ ಚೆನ್ನಾಗಿ ಬೆಂದಿದೆಯಾ ಎಂದು ಪರಿಶೀಲಿಸಿ. ಪಕ್ಕಕ್ಕೆ ಇರಿಸಿ.
  • ದೊಡ್ಡ ಕಡೈ ನಲ್ಲಿ 2 ಟೇಬಲ್ಸ್ಪೂನ್ ತುಪ್ಪ ಬಿಸಿ ಮಾಡಿ. 1 ಬೇ ಎಲೆ, 4 ಲವಂಗ, 1 ಕಪ್ಪು ಏಲಕ್ಕಿ, 1 ಟೀಸ್ಪೂನ್ ಜೀರಾ ಮತ್ತು 1 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
  • ಮಸಾಲೆಗಳು ಪರಿಮಳ ಬರುವವರೆಗೂ ಕಡಿಮೆ ಜ್ವಾಲೆಯ ಮೇಲೆ ಸಾಟ್ ಮಾಡಿ.
  • ಈಗ 1 ಈರುಳ್ಳಿ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಮತ್ತು ಈರುಳ್ಳಿ ಗೋಲ್ಡನ್ ಬ್ರೌನ್ ಆಗುವ ತನಕ ಸಾಟ್ ಮಾಡಿ.
  • ಈಗ ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಚಿಲ್ಲಿ ಪೌಡರ್, 1 ಟೀಸ್ಪೂನ್ ಕೊತ್ತಂಬರಿ ಪುಡಿ, ½ ಟೀಸ್ಪೂನ್ ಜೀರಾ ಪುಡಿ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
  • ಮಸಾಲೆಗಳು ಪರಿಮಳ ಬರುವ ತನಕ ಸಾಟ್ ಮಾಡಿ.
  • 2 ಟೊಮೆಟೊ ಸೇರಿಸಿ ಮತ್ತು ಟೊಮೆಟೊಗಳು ಮೃದು ಮತ್ತು ಮೆತ್ತಗಾಗುವವವರೆಗೂ ಸಾಟ್ ಮಾಡಿ.
  • ಈಗ ಬೇಯಿಸಿದ ದಾಲ್ ಅನ್ನು ಸೇರಿಸಿ ಮತ್ತು ಅಗತ್ಯವಿರುವಂತೆ ಸ್ಥಿರತೆಯನ್ನು ಸರಿಹೊಂದಿಸಿ.
  • ಮುಚ್ಚಿ 10 ನಿಮಿಷಗಳ ಕಾಲ ಅಥವಾ ಸುವಾಸನೆಯನ್ನು ಹೀರಿಕೊಳ್ಳುವವರೆಗೆ ಸಿಮ್ಮರ್ ನಲ್ಲಿಡಿ.
  • ಈಗ ¼ ಟೀಸ್ಪೂನ್ ಗರಮ್ ಮಸಾಲಾ, 1 ಟೀಸ್ಪೂನ್ ಕಸೂರಿ ಮೇಥಿ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ.
  • ಒಗ್ಗರಣೆಯನ್ನು ತಯಾರಿಸಲು, 1 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ. 1 ಟೀಸ್ಪೂನ್ ಜೀರಾ, ¼ ಟೀಸ್ಪೂನ್ ಚಿಲ್ಲಿ ಪೌಡರ್ ಮತ್ತು 1 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
  • ತಕ್ಷಣ ದಾಲ್ ಮೇಲೆ ಒಗ್ಗರಣೆಯನ್ನು ಸುರಿಯಿರಿ. ಒಗ್ಗರಣೆ ಸುಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
  • ಅಂತಿಮವಾಗಿ, ರೊಟ್ಟಿ ಅಥವಾ ಜೀರಾ ರೈಸ್ನೊಂದಿಗೆ ಪಂಚಮೇಲ್ ದಾಲ್ ಅಥವಾ ಪಂಚರತ್ನ ದಾಲ್ ಅನ್ನು ಆನಂದಿಸಿ.