Go Back
+ servings
tomato onion paratha recipe
Print Pin
No ratings yet

ಟೊಮೆಟೊ ಈರುಳ್ಳಿ ಪರೋಟ ರೆಸಿಪಿ | tomato onion paratha in kannada

ಸುಲಭ ಟೊಮೆಟೊ ಈರುಳ್ಳಿ ಪರೋಟ ಪಾಕವಿಧಾನ | ಪ್ಯಾಜ್ ಟಮಾಟರ್ ಪರಾಟ | ಟಮಾಟರ್ ಪ್ಯಾಜ್ ಪರಾಟ
ಕೋರ್ಸ್ ಪರಾಟ
ಪಾಕಪದ್ಧತಿ ಉತ್ತರ ಭಾರತೀಯ
ಕೀವರ್ಡ್ ಟೊಮೆಟೊ ಈರುಳ್ಳಿ ಪರೋಟ ರೆಸಿಪಿ
ತಯಾರಿ ಸಮಯ 10 minutes
ಅಡುಗೆ ಸಮಯ 40 minutes
ವಿಶ್ರಾಂತಿ ಸಮಯ 20 minutes
ಒಟ್ಟು ಸಮಯ 1 hour 10 minutes
ಸೇವೆಗಳು 8 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಪರೋಟ ಸ್ಟಫಿಂಗ್ಗಾಗಿ:

  • 2 ಟೇಬಲ್ಸ್ಪೂನ್ ಎಣ್ಣೆ
  • 1 ಟೀಸ್ಪೂನ್ ಜೀರಿಗೆ
  • ¼ ಟೀಸ್ಪೂನ್ ಓಮ
  • 1 ಟೀಸ್ಪೂನ್ ಕಸೂರಿ ಮೇಥಿ
  • 3 ಮೆಣಸಿನಕಾಯಿ (ಸಣ್ಣಗೆ ಕತ್ತರಿಸಿದ)
  • 3 ಬೆಳ್ಳುಳ್ಳಿ (ಸಣ್ಣಗೆ ಕತ್ತರಿಸಿದ)
  • 2 ಈರುಳ್ಳಿ (ಸಣ್ಣಗೆ ಕತ್ತರಿಸಿದ)
  • ½ ಟೀಸ್ಪೂನ್ ಅರಿಶಿನ
  • 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
  • ½ ಟೀಸ್ಪೂನ್ ಕೊತ್ತಂಬರಿ ಪೌಡರ್
  • ¼ ಟೀಸ್ಪೂನ್ ಜೀರಾ ಪೌಡರ್
  • ½ ಟೀಸ್ಪೂನ್ ಗರಂ ಮಸಾಲಾ
  • ½ ಟೀಸ್ಪೂನ್ ಉಪ್ಪು
  • 3 ಟೊಮೆಟೊ (ಸಣ್ಣಗೆ ಕತ್ತರಿಸಿದ)
  • ½ ಕಪ್ ಬೇಸನ್ / ಕಡಲೆ ಹಿಟ್ಟು (ಹುರಿದ)
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)

ಪರೋಟ ಹಿಟ್ಟಿಗಾಗಿ:

  • 3 ಕಪ್ ಗೋಧಿ ಹಿಟ್ಟು
  • ¼ ಟೀಸ್ಪೂನ್ ಅಜ್ಡೈನ್ / ಓಮ
  • ½ ಟೀಸ್ಪೂನ್ ಉಪ್ಪು
  • ನೀರು (ಬೆರೆಸಲು)
  • 2 ಟೀಸ್ಪೂನ್ ಎಣ್ಣೆ

ಸೂಚನೆಗಳು

ಪರೋಟಗೆ ಸ್ಟಫಿಂಗ್ ತಯಾರಿಸುವುದು ಹೇಗೆ:

  • ಮೊದಲಿಗೆ, ಕಡೈ ನಲ್ಲಿ 2 ಟೇಬಲ್ಸ್ಪೂನ್ ಎಣ್ಣೆ ಬಿಸಿ ಮಾಡಿ. 1 ಟೀಸ್ಪೂನ್ ಜೀರಾ, ¼ ಟೀಸ್ಪೂನ್ ಓಮ ಮತ್ತು 1 ಟೀಸ್ಪೂನ್ ಕಸೂರಿ ಮೇಥಿ ಸೇರಿಸಿ. ಮಸಾಲೆಗಳು ಪರಿಮಳ ಬರುವ ತನಕ ಸಾಟ್ ಮಾಡಿ.
  • ಈಗ 3 ಮೆಣಸಿನಕಾಯಿ, 3 ಬೆಳ್ಳುಳ್ಳಿ ಸೇರಿಸಿ ಮತ್ತು ಸ್ವಲ್ಪ ಸಾಟ್ ಮಾಡಿ.
  • ಈಗ, 2 ಈರುಳ್ಳಿ ಸೇರಿಸಿ ಮತ್ತು ಈರುಳ್ಳಿ ಮೃದುವಾಗುವವರೆಗೆ ಸಾಟ್ ಮಾಡಿ.
  • ½ ಟೀಸ್ಪೂನ್ ಅರಶಿನ, 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, ½ ಟೀಸ್ಪೂನ್ ಕೊತ್ತಂಬರಿ ಪುಡಿ, ¼ ಟೀಸ್ಪೂನ್ ಜೀರಿಗೆ ಪುಡಿ, ½ ಟೀಸ್ಪೂನ್ ಗರಂ ಮಸಾಲ, ½ ಟೀಸ್ಪೂನ್ ಉಪ್ಪು ಸೇರಿಸಿ.
  • ಮಸಾಲೆಗಳು ಪರಿಮಳ ಬರುವ ತನಕ ಸಾಟ್ ಮಾಡಿ.
  • ಈಗ 3 ಟೊಮ್ಯಾಟೊ ಸೇರಿಸಿ ಮತ್ತು ಟೊಮೆಟೊ ಮೃದು ಮತ್ತು ಮೆತ್ತಗೆ ತಿರುಗುವ ತನಕ ಸಾಟ್ ಮಾಡಿ.
  • ಟೊಮೆಟೊದಿಂದ ತೇವಾಂಶವನ್ನು ಹೀರಿಕೊಳ್ಳಲು, ½ ಕಪ್ ಬೇಸನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹುರಿದ ಬೇಸನ್ ಬಳಸುವುದನ್ನು ಖಚಿತಪಡಿಸಿಕೊಳ್ಳಿ
  • ಮೃದು ಮಿಶ್ರಣವನ್ನು ರೂಪಿಸಲು ಚೆನ್ನಾಗಿ ಬೆರೆಸಿ.
  • ಇದಲ್ಲದೆ, 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈರುಳ್ಳಿ ಟೊಮೆಟೊ ಸ್ಟಫಿಂಗ್ ಸಿದ್ಧವಾಗಿದೆ.

ಪರೋಟಗೆ ಹಿಟ್ಟು ಹೇಗೆ ತಯಾರಿಸುವುದು:

  • ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 3 ಕಪ್ ಗೋಧಿ ಹಿಟ್ಟು, ¼ ಟೀಸ್ಪೂನ್ ಓಮ ಮತ್ತು ½ ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
  • ಎಲ್ಲಾ ಪದಾರ್ಥಗಳನ್ನು ಸಂಯೋಜಿಸಲು ಚೆನ್ನಾಗಿ ಮಿಶ್ರಣ ಮಾಡಿ.
  • ಈಗ ನೀರು ಸೇರಿಸಿ ಹಿಟ್ಟನ್ನು ಬೆರೆಸಲು ಪ್ರಾರಂಭಿಸಿ. ಬೆಚ್ಚಗಿನ ನೀರಿನಿಂದ ಹಿಟ್ಟನ್ನು ಬೆರೆಸುವುದರಿಂದ ಮೃದುವಾದ ಪರೋಟ ಪಡೆಯಲು ಸಹಾಯ ಮಾಡುತ್ತದೆ.
  • ನೀರನ್ನು ಸೇರಿಸಿ ಮತ್ತು ಮೃದುವಾದ ಹಿಟ್ಟನ್ನು ಬೆರೆಸಿ.
  • ಎಣ್ಣೆಯಿಂದ ಗ್ರೀಸ್ ಮಾಡಿ ಮುಚ್ಚಿ 20 ನಿಮಿಷಗಳ ಹಾಗೆಯೇ ಬಿಡಿ.

ಪರೋಟಗೆ ಸ್ಟಫ್ ಮತ್ತು ರೋಸ್ಟ್ ಮಾಡುವುದು ಹೇಗೆ:

  • ಹಿಟ್ಟನ್ನು 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟ ನಂತರ, ಸ್ವಲ್ಪ ಬೆರೆಸಿ ಚೆಂಡಿನ ಗಾತ್ರದ ಹಿಟ್ಟನ್ನು ತೆಗೆಯಿರಿ.
  • ಬದಿಗಳಿಂದ ಹಿಟ್ಟನ್ನು ಒತ್ತುವ ಮೂಲಕ ಒಂದು ಕಪ್ ಅನ್ನು ರೂಪಿಸಿ.
  • ಚೆಂಡಿನ ಗಾತ್ರದ ಸ್ಟಫಿಂಗ್ ಅನ್ನು ಇರಿಸಿ.
  • ಯಾವುದೇ ಪ್ಲೀಟ್ಗಳನ್ನು ರೂಪಿಸದೆ ಹಿಟ್ಟನ್ನು ಎಳೆಯುವ ಮೂಲಕ ಸ್ಟಫಿಂಗ್ ಅನ್ನು ಒಳಗೆ ಹಾಕಿರಿ.
  • ಈಗ ಯಾವುದೇ ಬಿರುಕುಗಳಿಲ್ಲದೆ ಹಿಟ್ಟನ್ನು ಮುಚ್ಚಿ.
  • ಗೋಧಿ ಹಿಟ್ಟನ್ನು ಡಸ್ಟ್ ಮಾಡಿ ಚೆಂಡನ್ನು ಸ್ವಲ್ಪ ಚಪ್ಪಟೆ ಮಾಡಿ.
  • ಈಗ ಹೆಚ್ಚು ಒತ್ತಡವನ್ನು ಹಾಕದೇ ಪರೋಟವನ್ನು ನಿಧಾನವಾಗಿ ರೋಲ್ ಮಾಡಿ.
  • ಮಧ್ಯಮ ಜ್ವಾಲೆಯಲ್ಲಿಟ್ಟು ಬಿಸಿ ತವಾ ಮೇಲೆ ಪರೋಟವನ್ನು ಬೇಯಿಸಿ.
  • ಬೇಸ್ ಅರ್ಧ ಬೆಂದ ನಂತರ ಫ್ಲಿಪ್ ಮಾಡಿ.
  • ಎರಡೂ ಬದಿಗಳಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಹರಡಿ ಚೆನ್ನಾಗಿ ಬೇಯಿಸಿ.
  • ಪರೋಟವನ್ನು ಪಫ್ ಮಾಡಿ, ಮತ್ತು ಏಕರೂಪವಾಗಿ ಬೇಯಿಸುವುದನ್ನು ಖಚಿತಪಡಿಸಿಕೊಳ್ಳಿ.
  • ಅಂತಿಮವಾಗಿ, ಉಪ್ಪಿನಕಾಯಿ ಮತ್ತು ಮೊಸರಿನ ಜೊತೆ ಚಿಲ್ಲಿ ಬೆಳ್ಳುಳ್ಳಿ ಈರುಳ್ಳಿ ಟೊಮೆಟೊ ಪರೋಟ ಆನಂದಿಸಿ.