ಮೊದಲನೆಯದಾಗಿ, ದಪ್ಪ ತಳವಿರುವ ಪ್ಯಾನ್ನಲ್ಲಿ 3 ಟೇಬಲ್ಸ್ಪೂನ್ ಕೊತ್ತಂಬರಿ ಬೀಜಗಳು, 1½ ಟೇಬಲ್ಸ್ಪೂನ್ ಜೀರಿಗೆ, 1 ಟೀಸ್ಪೂನ್ ಶಾಹಿ ಜೀರಾ, 2 ಟೀಸ್ಪೂನ್ ಫೆನ್ನೆಲ್, 1 ಟೀಸ್ಪೂನ್ ಕಡಲೆ ಬೇಳೆ, ಮತ್ತು 1 ಟೀಸ್ಪೂನ್ ಉದ್ದಿನ ಬೇಳೆ, 2 ಟೇಬಲ್ಸ್ಪೂನ್ ಹಳದಿ ಸಾಸಿವೆ ಮತ್ತು ¼ ಟೀಸ್ಪೂನ್ ಮೆಂತ್ಯ ತೆಗೆದುಕೊಳ್ಳಿ.
ಮಸಾಲೆಗಳು ಸುವಾಸನೆಯುಕ್ತವಾಗುವವರೆಗೆ ಕಡಿಮೆ ಉರಿಯಲ್ಲಿ ಡ್ರೈ ರೋಸ್ಟ್ ಮಾಡಿ.
ಈಗ 1 ಇಂಚು ದಾಲ್ಚಿನ್ನಿ, 2 ಬೇ ಎಲೆ ಮತ್ತು 1 ಇಂಚು ಒಣ ಶುಂಠಿಯನ್ನು ಸೇರಿಸಿ.
2 ಪಾಡ್ ಕಪ್ಪು ಏಲಕ್ಕಿ, 1 ಟೀಸ್ಪೂನ್ ಏಲಕ್ಕಿ, 1 ಜಾವಿತ್ರಿ, 1 ಸ್ಟಾರ್ ಅನೀಸ್, 1 ಟೀಸ್ಪೂನ್ ಲವಂಗ ಮತ್ತು ½ ಜಾಯಿಕಾಯಿ ಸೇರಿಸಿ.
ನಂತರ, 2 ಟೇಬಲ್ಸ್ಪೂನ್ ಗಸಗಸೆ ಬೀಜಗಳು, 2 ಟೇಬಲ್ಸ್ಪೂನ್ ಕಸೂರಿ ಮೇಥಿ, ½ ಟೇಬಲ್ಸ್ಪೂನ್ ಕಾಳು ಮೆಣಸು, ಮತ್ತು 8 ಒಣಗಿದ ಕೆಂಪು ಮೆಣಸಿನಕಾಯಿಯನ್ನು ಸೇರಿಸಿ.
ಮಸಾಲೆಗಳು ಕುರುಕಲು ಮತ್ತು ಸುವಾಸನೆಯುಕ್ತವಾಗುಗುವವರೆಗೆ ಕಡಿಮೆ ಉರಿಯಲ್ಲಿ ಡ್ರೈ ರೋಸ್ಟ್ ಮಾಡಿ.
ಸಂಪೂರ್ಣವಾಗಿ ತಣ್ಣಗಾಗಿಸಿ, ಮತ್ತು ಮಿಕ್ಸರ್ ಜಾರ್ಗೆ ವರ್ಗಾಯಿಸಿ.
1 ಟೀಸ್ಪೂನ್ ಕಪ್ಪು ಉಪ್ಪು, 1 ಟೀಸ್ಪೂನ್ ಅರಿಶಿನ, 1 ಟೇಬಲ್ಸ್ಪೂನ್ ಆಮ್ಚೂರ್, ಮತ್ತು 1 ಟೀಸ್ಪೂನ್ ಉಪ್ಪನ್ನು ಸೇರಿಸಿ.
ಪಲ್ಸ್ ಮಾಡಿ ಮತ್ತು ನುಣ್ಣಗೆ ಪುಡಿಮಾಡಿ.
ಅಂತಿಮವಾಗಿ, ಕಿಚನ್ ಕಿಂಗ್ ಮಸಾಲಾ ಸಬ್ಜಿ ಅಥವಾ ಪುಲಾವ್ ತಯಾರಿಕೆಯಲ್ಲಿ ಬಳಸಲು ಸಿದ್ಧವಾಗಿದೆ.