Go Back
+ servings
immunity booster drink recipes
Print Pin
No ratings yet

ಇಮ್ಮ್ಯೂನಿಟಿ ಬೂಸ್ಟರ್ ಪಾನೀಯ | immunity booster drink in kannada

ಸುಲಭ ಇಮ್ಮ್ಯೂನಿಟಿ ಬೂಸ್ಟರ್ ಪಾನೀಯ ಪಾಕವಿಧಾನಗಳು
ಕೋರ್ಸ್ ಪಾನೀಯ
ಪಾಕಪದ್ಧತಿ ಭಾರತೀಯ
ಕೀವರ್ಡ್ ಇಮ್ಮ್ಯೂನಿಟಿ ಬೂಸ್ಟರ್ ಪಾನೀಯ
ತಯಾರಿ ಸಮಯ 1 minute
ಅಡುಗೆ ಸಮಯ 5 minutes
ಒಟ್ಟು ಸಮಯ 6 minutes
ಸೇವೆಗಳು 4 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಶುಂಠಿ ಅರಿಶಿನ ಚಹಾಕ್ಕಾಗಿ:

  • 2 ಇಂಚಿನ ಶುಂಠಿ
  • 1 ಇಂಚಿನ ದಾಲ್ಚಿನ್ನಿ
  • ½ ಟೀಸ್ಪೂನ್ ಲವಂಗ
  • 5 ಏಲಕ್ಕಿ
  • 1 ಟೀಸ್ಪೂನ್ ಮೆಣಸು
  • 4 ಕಪ್ ನೀರು
  • ½ ಟೀಸ್ಪೂನ್ ಅರಿಶಿನ
  • 1 ಟೀಸ್ಪೂನ್ ಬೆಲ್ಲ
  • 1 ಟೀಸ್ಪೂನ್ ನಿಂಬೆ ರಸ

ಶುಂಠಿ ತುಳಸಿ ಚಹಾ:

  • 4 ಕಪ್ ನೀರು
  • 2 ಬೇ ಎಲೆ/ ಲವಂಗದ ಎಲೆ
  • ಕೆಲವು ತುಳಸಿ ದಳಗಳು
  • 1 ಇಂಚಿನ ಕತ್ತರಿಸಿದ ಶುಂಠಿ
  • 1 ಇಂಚಿನ ದಾಲ್ಚಿನ್ನಿ
  • 3 ಏಲಕ್ಕಿ
  • 1 ಟೀಸ್ಪೂನ್ ಮೆಣಸು
  • ½ ಟೀಸ್ಪೂನ್ ಲವಂಗ
  • 1 ಟೀಸ್ಪೂನ್ ಜೇನುತುಪ್ಪ

ತಾಜಾ ಪುದೀನ ಚಹಾ:

  • 1 ಮುಷ್ಟಿಯಷ್ಟು ಪುದೀನ ಎಲೆಗಳು
  • 1 ಇಂಚಿನ ದಾಲ್ಚಿನ್ನಿ
  • ½ ಟೀಸ್ಪೂನ್ ಲವಂಗ
  • ½ ಟೀಸ್ಪೂನ್ ಮೆಣಸು
  • 4 ಏಲಕ್ಕಿ
  • 4 ಕಪ್ ನೀರು
  • 1 ಟೀಸ್ಪೂನ್ ನಿಂಬೆ ರಸ

ಸೂಚನೆಗಳು

ಶುಂಠಿ ಅರಿಶಿನ ಚಹಾ ಪಾಕವಿಧಾನ:

  • ಮೊದಲನೆಯದಾಗಿ, ಕುಟ್ಟಾಣಿಯಲ್ಲಿ  2 ಇಂಚು ಶುಂಠಿ, 1 ಇಂಚಿನ ದಾಲ್ಚಿನ್ನಿ, ½ ಟೀಸ್ಪೂನ್ ಲವಂಗ, 5 ಏಲಕ್ಕಿ ಮತ್ತು 1 ಟೀಸ್ಪೂನ್ ಮೆಣಸು ತೆಗೆದುಕೊಳ್ಳಿ.
  • ಒರಟು ಪೇಸ್ಟ್ ಆಗಿ ಪುಡಿಮಾಡಿ. ಪಕ್ಕಕ್ಕೆ ಇರಿಸಿ.
  • ಒಂದು ಪಾತ್ರೆಯಲ್ಲಿ 4 ಕಪ್ ನೀರನ್ನು ತೆಗೆದುಕೊಂಡು ತಯಾರಾದ ಶುಂಠಿ ಅರಿಶಿನ ಮಸಾಲೆ ಮಿಶ್ರಣದಲ್ಲಿ ಸೇರಿಸಿ.
  • ಅದಕ್ಕೆ ½ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಬೆಲ್ಲ ಸೇರಿಸಿ.
  • ಚೆನ್ನಾಗಿ ಮಿಶ್ರಣ ಮಾಡಿ, 5 ನಿಮಿಷ ಅಥವಾ ಅದರ ಸುವಾಸನೆ ಚೆನ್ನಾಗಿ ಹೀರಿಕೊಳ್ಳುವವರೆಗೆ ಕುದಿಸಿ.
  • ಈ ಚಹಾವನ್ನು ಸೋಸಿ 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ.
  • ಅಂತಿಮವಾಗಿ, ಶುಂಠಿ ಅರಿಶಿನ ಚಹಾ ಕುಡಿಯಲು ಸಿದ್ಧವಾಗಿದೆ.

ಶುಂಠಿ ತುಳಸಿ ಚಹಾ ಪಾಕವಿಧಾನ:

  • ಮೊದಲನೆಯದಾಗಿ, ದೊಡ್ಡ ಪಾತ್ರೆಯಲ್ಲಿ 4 ಕಪ್ ನೀರನ್ನು ತೆಗೆದುಕೊಳ್ಳಿ.
  • 2 ಬೇ ಎಲೆ, ಸ್ವಲ್ಪ ತುಳಸಿ, 1 ಇಂಚು ಶುಂಠಿ, 1 ಇಂಚಿನ ದಾಲ್ಚಿನ್ನಿ, 3 ಪಾಡ್ ಏಲಕ್ಕಿ, 1 ಟೀಸ್ಪೂನ್ ಮೆಣಸು ಮತ್ತು ½ ಟೀಸ್ಪೂನ್ ಲವಂಗ ಸೇರಿಸಿ.
  • ಚೆನ್ನಾಗಿ ಬೆರೆಸಿ 5 ನಿಮಿಷ ಅಥವಾ ಸುವಾಸನೆ ಚೆನ್ನಾಗಿ ಹೀರಿಕೊಳ್ಳುವವರೆಗೆ ಕುದಿಸಿ.
  • ಚಹಾವನ್ನು ಸೋಸಿ 1 ಟೀಸ್ಪೂನ್ ಜೇನುತುಪ್ಪವನ್ನು ಸೇರಿಸಿ. ಕುದಿಯುವಾಗ ನೀವು ಇದರ ಬದಲಾಗಿ ಬೆಲ್ಲವನ್ನು ಬಳಸಬಹುದು.
  • ಅಂತಿಮವಾಗಿ, ಶುಂಠಿ ತುಳಸಿ ಚಹಾ ಕುಡಿಯಲು ಸಿದ್ಧವಾಗಿದೆ.

ತಾಜಾ ಪುದೀನ ಚಹಾ ಪಾಕವಿಧಾನ:

  • ಮೊದಲನೆಯದಾಗಿ, ಕುಟ್ಟಾಣಿಯಲ್ಲಿ 1 ಮುಷ್ಟಿಯಷ್ಟು ಪುದೀನನ್ನು ತೆಗೆದುಕೊಳ್ಳಿ.
  • ಇದಕ್ಕೆ 1 ಇಂಚಿನ ದಾಲ್ಚಿನ್ನಿ, ½ ಟೀಸ್ಪೂನ್ ಲವಂಗ, ½ ಟೀಸ್ಪೂನ್ ಮೆಣಸು ಮತ್ತು 4 ಏಲಕ್ಕಿ ಸೇರಿಸಿ.
  • ಒರಟು ಪೇಸ್ಟ್ ಆಗಿ ಪುಡಿಮಾಡಿ. ಪಕ್ಕಕ್ಕೆ ಇರಿಸಿ.
  • ಪಾತ್ರೆಗೆ 4 ಕಪ್ ನೀರು ತೆಗೆದುಕೊಂಡು ತಯಾರಾದ ಪುದೀನ ಮಸಾಲೆ ಮಿಶ್ರಣದಲ್ಲಿ ಸೇರಿಸಿ.
  • ಚೆನ್ನಾಗಿ ಮಿಶ್ರಣ ಮಾಡಿ, 5 ನಿಮಿಷ ಅಥವಾ ಸುವಾಸನೆ ಚೆನ್ನಾಗಿ ಹೀರಿಕೊಳ್ಳುವವರೆಗೆ ಕುದಿಸಿ.
  • ಚಹಾವನ್ನು ಸೋಸಿ 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ.
  • ಅಂತಿಮವಾಗಿ, ತಾಜಾ ಪುದೀನ ಚಹಾ ಸಿಪ್ ಮಾಡಲು ಸಿದ್ಧವಾಗಿದೆ.