ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ ¼ ಕಪ್ ಎಣ್ಣೆ ಬಿಸಿ ಮಾಡಿ, 1 ಟೀಸ್ಪೂನ್ ಅರಿಶಿನ, 3 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ, 3 ಟೀಸ್ಪೂನ್ ಕೊತ್ತಂಬರಿ ಪುಡಿ, 1 ಟೀಸ್ಪೂನ್ ಜೀರಿಗೆ ಪುಡಿ ಮತ್ತು 1 ಟೀಸ್ಪೂನ್ ಗರಂ ಮಸಾಲಾ ಸೇರಿಸಿ.
ಮಸಾಲೆಗಳು ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
ಈಗ ತಯಾರಾದ ಈರುಳ್ಳಿ ಟೊಮೆಟೊ ಮಸಾಲಾ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಕಡಾಯಿಯ ಬಾಯಿ ಮುಚ್ಚಿ 20 ನಿಮಿಷ ಅಥವಾ ಎಣ್ಣೆ ಬಿಡುವವರೆಗೆ ಬೇಯಿಸಿ. ಮಸಾಲೆ ಸುಡುವುದನ್ನು ತಡೆಯಲು ನಡುವೆ ಕೈಆಡಿಸಿ.
ತಯಾರಾದ ಗೋಡಂಬಿ ಕಲ್ಲಂಗಡಿ ಪೇಸ್ಟ್ ನ್ನು ಸೇರಿಸಿ ಚೆನ್ನಾಗಿ ಬೇಯಿಸಿ.
ಮಿಶ್ರಣವು ಎಣ್ಣೆ ಬಿಡುವವರೆಗೆ ಬೇಯಿಸಿ.
ಅಂತಿಮವಾಗಿ, ಕರಿ ಬೇಸ್ ಸಿದ್ಧವಾಗಿದೆ. ಸಂಪೂರ್ಣವಾಗಿ ತಣ್ಣಗಾಗಿಸಿ ಮತ್ತು ಗಾಳಿಯಾಡದ ಡಬ್ಬದಲ್ಲಿ 10 ದಿನಗಳವರೆಗೆ ಫ್ರಿಡ್ಜ್ ನಲ್ಲಿಡಿ. ಇದನ್ನು ನೀವು ಒಂದು ತಿಂಗಳವರೆಗೆ ಫ್ರೀಜ್ ಮಾಡಬಹುದು.