Go Back
+ servings
vermicelli pulao recipe
Print Pin
No ratings yet

ವರ್ಮಿಸೆಲ್ಲಿ ಪುಲಾವ್ ರೆಸಿಪಿ | vermicelli pulao in kannada | ಶಾವಿಗೆ ಪುಲಾವ್

ಸುಲಭ ವರ್ಮಿಸೆಲ್ಲಿ ಪುಲಾವ್ ಪಾಕವಿಧಾನ | ಶಾವಿಗೆ ಪುಲಾವ್
ಕೋರ್ಸ್ ಬೆಳಗಿನ ಉಪಾಹಾರ
ಪಾಕಪದ್ಧತಿ ದಕ್ಷಿಣ ಭಾರತೀಯ
ಕೀವರ್ಡ್ ವರ್ಮಿಸೆಲ್ಲಿ ಪುಲಾವ್ ರೆಸಿಪಿ
ತಯಾರಿ ಸಮಯ 5 minutes
ಅಡುಗೆ ಸಮಯ 15 minutes
ಒಟ್ಟು ಸಮಯ 20 minutes
ಸೇವೆಗಳು 2 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಹುರಿಯಲು:

  • 1 ಟೀಸ್ಪೂನ್ ತುಪ್ಪ
  • 1 ಕಪ್ ವರ್ಮಿಸೆಲ್ಲಿ / ಶಾವಿಗೆ

ಮಸಾಲಾ ಪೇಸ್ಟ್ಗಾಗಿ:

  • 1 ಮುಷ್ಟಿಯಷ್ಟು ಕೊತ್ತಂಬರಿ ಸೊಪ್ಪು
  • 1 ಮುಷ್ಟಿಯಷ್ಟು ಪುದೀನ ಸೊಪ್ಪು
  • 1 ಮೆಣಸಿನಕಾಯಿ

ಇತರ ಪದಾರ್ಥಗಳು:

  • 2 ಟೇಬಲ್ಸ್ಪೂನ್ ತುಪ್ಪ
  • 2 ಬೇ ಎಲೆ
  • 3 ಏಲಕ್ಕಿ
  • 1 ಇಂಚಿನ ದಾಲ್ಚಿನ್ನಿ
  • 4 ಲವಂಗ
  • 1 ಸ್ಟಾರ್ ಸೋಂಪು
  • 1 ಟೀಸ್ಪೂನ್ ಜೀರಿಗೆ
  • 15 ಇಡೀ ಗೋಡಂಬಿ
  • 1 ಈರುಳ್ಳಿ ಸಣ್ಣಗೆ ಕತ್ತರಿಸಿದ
  • 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ½ ಕ್ಯಾಪ್ಸಿಕಂ ಸಣ್ಣಗೆ ಕತ್ತರಿಸಿದ
  • ½ ಕ್ಯಾರೆಟ್ ಸಣ್ಣಗೆ ಕತ್ತರಿಸಿದ
  • 2 ಟೇಬಲ್ಸ್ಪೂನ್ ಬಟಾಣಿ / ಮಟರ್
  • 5 ಬೀನ್ಸ್ ಸಣ್ಣಗೆ ಕತ್ತರಿಸಿದ
  • ¾ ಟೀಸ್ಪೂನ್ ಗರಂ ಮಸಾಲ
  • ¾ ಟೀಸ್ಪೂನ್ ಉಪ್ಪು
  • ಕಪ್ ನೀರು
  • 2 ಟೀಸ್ಪೂನ್ ನಿಂಬೆ ರಸ

ಸೂಚನೆಗಳು

  • ಮೊದಲನೆಯದಾಗಿ, ಬಾಣಲೆಯಲ್ಲಿ 1 ಟೀಸ್ಪೂನ್ ತುಪ್ಪವನ್ನು ತೆಗೆದುಕೊಂಡು 1 ಕಪ್ ವರ್ಮಿಸೆಲ್ಲಿಯನ್ನು ಹುರಿಯಿರಿ.
  • ಗೋಲ್ಡನ್ ಬ್ರೌನ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ನೀವು ಮೊದಲೇ, ಹುರಿದ ವರ್ಮಿಸೆಲ್ಲಿಯನ್ನು ಬಳಸಬಹುದು. ಆದರೂ, ಅಂಟಾಗದೇ ಇರಲು, ವೇರ್ಮಿಸೆಲ್ಲಿಯನ್ನು ಹುರಿಯಲು ನಾನು ಶಿಫಾರಸು ಮಾಡುತ್ತೇನೆ. ನಂತರ ಪಕ್ಕಕ್ಕೆ ಇರಿಸಿ.
  • ಸಣ್ಣ ಮಿಕ್ಸರ್ ನಲ್ಲಿ 1 ಮುಷ್ಟಿಯಷ್ಟು ಕೊತ್ತಂಬರಿ, ಪುದೀನ ಮತ್ತು 1 ಮೆಣಸಿನಕಾಯಿ ತೆಗೆದುಕೊಳ್ಳಿ.
  • ಅಗತ್ಯವಿರುವಂತೆ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಪಕ್ಕಕ್ಕೆ ಇರಿಸಿ.
  • ದೊಡ್ಡ ಕಡಾಯಿಯಲ್ಲಿ, 2 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ, 2 ಬೇ ಎಲೆ, 3 ಏಲಕ್ಕಿ, 1 ಇಂಚಿನ ದಾಲ್ಚಿನ್ನಿ, 4 ಲವಂಗ, 1 ಸ್ಟಾರ್ ಸೋಂಪು, 1 ಟೀಸ್ಪೂನ್ ಜೀರಿಗೆ ಮತ್ತು 15 ಇಡೀ ಗೋಡಂಬಿ ಹಾಕಿ.
  • ಮಸಾಲೆಗಳು ಪರಿಮಳಭರಿತವಾಗಿ ಮತ್ತು ಗೋಡಂಬಿ ಕುರುಕಲು ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
  • ಈಗ 1 ಈರುಳ್ಳಿ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಸೇರಿಸಿ.
  • ಕತ್ತರಿಸಿದ ½ ಕ್ಯಾಪ್ಸಿಕಂ, ½ ಕ್ಯಾರೆಟ್, 2 ಟೀಸ್ಪೂನ್ ಬಟಾಣಿ ಮತ್ತು 5 ಬೀನ್ಸ್ ಸೇರಿಸಿ.
  • ತರಕಾರಿಗಳನ್ನು ಅತಿಯಾಗಿ ಬೇಯಿಸದೆ 2 ನಿಮಿಷಗಳ ಕಾಲ ಫ್ರೈ ಮಾಡಿ.
  • ತಯಾರಾದ ಮಸಾಲಾ ಪೇಸ್ಟ್, ¾ ಟೀಸ್ಪೂನ್ ಗರಂ ಮಸಾಲ ಮತ್ತು ¾ ಟೀಸ್ಪೂನ್ ಉಪ್ಪು ಸೇರಿಸಿ.
  • ಎಲ್ಲಾ ಮಸಾಲೆಗಳು ಸಂಯೋಜಿಸುವವರೆಗೆ ಚೆನ್ನಾಗಿ ಸಾಟ್ ಮಾಡಿ.
  • 1½ ಕಪ್ ನೀರು ಸುರಿಯಿರಿ ಮತ್ತು ನೀರನ್ನು ಚೆನ್ನಾಗಿ ಕುದಿಸಿ.
  • ಹುರಿದ ವರ್ಮಿಸೆಲ್ಲಿಯನ್ನು ಸೇರಿಸಿ, ಉತ್ತಮ ಮಿಶ್ರಣವನ್ನು ನೀಡಿ.
  • ಮುಚ್ಚಿ, 7 ನಿಮಿಷಗಳ ಕಾಲ ಅಥವಾ ನೀರನ್ನು ಸಂಪೂರ್ಣವಾಗಿ ಹೀರಿಕೊಳ್ಳುವವರೆಗೆ ಬಿಡಿ.
  • ಈಗ ನಿಧಾನವಾಗಿ ಮಿಶ್ರಣ ಮಾಡಿ, ವರ್ಮಿಸೆಲ್ಲಿ ಚೆನ್ನಾಗಿ ಬೇಯಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.
  • ಮುಚ್ಚಿ, 5 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ. ಇದು ಸೇಮಿಯಾವನ್ನು ಅಂಟಾಗದಂತೆ ಸಹಾಯ ಮಾಡುತ್ತದೆ.
  • ಅಂತಿಮವಾಗಿ, ವರ್ಮಿಸೆಲ್ಲಿ ಪುಲಾವ್ ಅನ್ನು ಬಡಿಸುವ ಮೊದಲು, 2 ಟೀಸ್ಪೂನ್ ನಿಂಬೆ ರಸವನ್ನು ಹಿಂಡಿ.