ಮೊದಲನೆಯದಾಗಿ, ಬಾಣಲೆಯಲ್ಲಿ ½ ಟೀಸ್ಪೂನ್ ತುಪ್ಪದ ಜೊತೆ ½ ಕಪ್ ವರ್ಮಿಸೆಲ್ಲಿ ಹುರಿಯಿರಿ.
ಸೇಮಿಯಾ ಗೋಲ್ಡನ್ ಬ್ರೌನ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
ದೊಡ್ಡ ಕಡಾಯಿಯಲ್ಲಿ, 4 ಕಪ್ ಹಾಲು ಮತ್ತು ¼ ಟೀಸ್ಪೂನ್ ಕೇಸರಿ ಸೇರಿಸಿ ಬಿಸಿ ಮಾಡಿ.
ಚೆನ್ನಾಗಿ ಬೆರೆಸಿ ಹಾಲನ್ನು ಕುದಿಸಿ.
ಹುರಿದ ಸೇಮಿಯಾವನ್ನು ಹಾಲಿನಲ್ಲಿ ಸೇರಿಸಿ ಚೆನ್ನಾಗಿ ಬೆರೆಸಿ.
ಈಗ ¼ ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
7 ನಿಮಿಷ ಅಥವಾ ಸೇಮಿಯಾ ಸಂಪೂರ್ಣವಾಗಿ ಬೇಯಿಸುವವರೆಗೆ ಕುದಿಸಿ.
ಸಣ್ಣ ಬಟ್ಟಲಿನಲ್ಲಿ 2 ಟೀಸ್ಪೂನ್ ಕಸ್ಟರ್ಡ್ ಪೌಡರ್ ಮತ್ತು ½ ಕಪ್ ಹಾಲು ತೆಗೆದುಕೊಳ್ಳಿ.
ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
ಅದನ್ನು ಕಡಾಯಿ ಗೆ ಸುರಿಯಿರಿ ಮತ್ತು ನಿರಂತರವಾಗಿ ಬೆರೆಸಿರಿ.
ಹಾಲು ದಪ್ಪವಾಗುವವರೆಗೆ ಮತ್ತು ಕೆನೆಯುಕ್ತ ವಾಗುವವವರೆಗೆ ಚೆನ್ನಾಗಿ ಬೇಯಿಸಿ.
ಕಸ್ಟರ್ಡ್ ಸೆಮಿಯಾವನ್ನು ದೊಡ್ಡ ಬಟ್ಟಲಿನಲ್ಲಿ ವರ್ಗಾಯಿಸಿ.
ಸಂಪೂರ್ಣವಾಗಿ ತಣ್ಣಗಾಗಿಸಿ, ಹಾಗೂ 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ.
ಸರ್ವ್ ಮಾಡಲು, ಎತ್ತರದ ಗಾಜಿನ ಲೋಟೆಯನ್ನು ತೆಗೆದುಕೊಂಡು 2 ಟೀಸ್ಪೂನ್ ಸಬ್ಜಾ ಸೇರಿಸಿ. ಸಬ್ಜಾ ತಯಾರಿಸಲು, ಸಬ್ಜಾ ಬೀಜಗಳನ್ನು ನೀರಿನಲ್ಲಿ 15 ನಿಮಿಷಗಳ ಕಾಲ ಅಥವಾ ಅದು ಉಬ್ಬುವವರೆಗೆ ನೆನೆಸಿಡಿ.
¼ ಕಪ್ ತಣ್ಣಗಾಗಿರುವ ವರ್ಮಿಸೆಲ್ಲಿ ಕಸ್ಟರ್ಡ್ ಸೇರಿಸಿ.
ಈಗ 2 ಟೀಸ್ಪೂನ್ ದಾಳಿಂಬೆ, 5 ದ್ರಾಕ್ಷಿ, 2 ಟೀಸ್ಪೂನ್ ಮಾವು ಮತ್ತು 2 ಟೀಸ್ಪೂನ್ ಸೇಬನ್ನು ಹಾಕಿ.
ಮತ್ತಷ್ಟು, ¼ ಕಪ್ ತಣ್ಣಗಾಗಿರುವ ವರ್ಮಿಸೆಲ್ಲಿ ಕಸ್ಟರ್ಡ್ ಅನ್ನು ಸುರಿಯಿರಿ.
2 ಟೀಸ್ಪೂನ್ ಬೀಜಗಳು ಮತ್ತು 2 ಟೀಸ್ಪೂನ್ ಟುಟ್ಟಿ ಫ್ರೂಟಿಯೊಂದಿಗೆ ಟೊಪ್ಪಿನ್ಗ್ಸ್ ಮಾಡಿ.
ಅಂತಿಮವಾಗಿ, ಚೆರ್ರಿ ಜೊತೆ ಅಲಂಕರಿಸಿ ವರ್ಮಿಸೆಲ್ಲಿ ಕಸ್ಟರ್ಡ್ ಅನ್ನು ಆನಂದಿಸಿ.