ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 1 ಆಲೂಗಡ್ಡೆಯನ್ನು ನುಣ್ಣಗೆ ತುರಿಯಿರಿ.
1½ ಕಪ್ ಕಡಲೆ ಹಿಟ್ಟು ಮತ್ತು ¼ ಕಪ್ ಅಕ್ಕಿ ಹಿಟ್ಟು ಸೇರಿಸಿ.
1 ಟೀಸ್ಪೂನ್ ಮೆಣಸಿನ ಪುಡಿ, ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಜೀರಿಗೆ ಪುಡಿ, ½ ಟೀಸ್ಪೂನ್ ಗರಂ ಮಸಾಲ, 1 ಟೀಸ್ಪೂನ್ ಚಾಟ್ ಮಸಾಲ, ½ ಟೀಸ್ಪೂನ್ ಆಮ್ಚೂರ್, ¾ ಟೀಸ್ಪೂನ್ ಉಪ್ಪು ಮತ್ತು 2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ.
ಎಲ್ಲವನ್ನೂ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
ನಯವಾದ ಮತ್ತು ಮೃದುವಾದ ಹಿಟ್ಟಿಗೆ ನಾದಿಕೊಳ್ಳಿ. ಅಗತ್ಯವಿದ್ದರೆ ನೀರು ಸೇರಿಸಿ.
ಹಿಟ್ಟು ಸ್ವಲ್ಪ ಜಿಗುಟಾಗಿರುತ್ತದೆ, 1 ಟೀಸ್ಪೂನ್ ಎಣ್ಣೆ ಗ್ರೀಸ್ ಮಾಡಿ, ಮತ್ತು ನಯವಾದ, ಮೃದು ಮತ್ತು ಜಿಗುಟಾಗದ ಹಾಗೆ ನಾದಿಕೊಳ್ಳಿ.
ಸಣ್ಣ ರಂಧ್ರವಿರುವ ಅಚ್ಚನ್ನು ಸ್ವಲ್ಪ ಎಣ್ಣೆಯಿಂದ ಗ್ರೀಸ್ ಮಾಡಿ, ಹಿಟ್ಟಿನ್ನು ತುಂಬಿಸಿ.
ಈಗ ಭುಜಿಯಾವನ್ನು ಒತ್ತಿ ಮತ್ತು ಬಿಸಿ ಎಣ್ಣೆಯಲ್ಲಿ ಹರಡಿ, ಎಣ್ಣೆಯಲ್ಲಿ ವೃತ್ತಾಕಾರವನ್ನು ರಚಿಸಿ. ಒಂದರ ಮೇಲೊಂದು ಬರುವಿಯುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
ಒಂದು ನಿಮಿಷದ ನಂತರ ತಿರುಗಿಸಿ, ಗೋಲ್ಡನ್ ಬಣ್ಣ ಮತ್ತು ಗರಿಗರಿಯಾಗುವವರೆಗೆ ಹುರಿಯಿರಿ.
ಎಣ್ಣೆಯನ್ನು ಹೀರಿಕೊಳ್ಳಲು ಅಡಿಗೆ ಕಾಗದದ ಮೇಲೆ ಹರಡಿ.
ಅಂತಿಮವಾಗಿ, ಆಲೂ ಭುಜಿಯಾವನ್ನು ತುಂಡುಗಳಾಗಿ ಮುರಿಯಿರಿ ಮತ್ತು ಚಹಾ ಸಮಯದಲ್ಲಿ ಆನಂದಿಸಿ.