ಆಲೂ ಭುಜಿಯಾ ರೆಸಿಪಿ | aloo bhujia in kannada | ಆಲೂ ಸೇವ್


ಈ ಪೋಸ್ಟ್ ಅನ್ಯ ಭಾಷೆಯಲ್ಲಿ ಉಪಲಬ್ದವಿದೆ ಆಂಗ್ಲ (English), ಮತ್ತು हिन्दी (Hindi)

ಆಲೂ ಭುಜಿಯಾ ಪಾಕವಿಧಾನ | ಹಲ್ದಿರಾಮ್ ಆಲೂ ಭುಜಿಯಾ | ಆಲೂ ಸೇವ್ | ನಮ್ಕೀನ್ ಭುಜಿಯಾದ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಕಡಲೆ ಹಿಟ್ಟು ಮತ್ತು ಹಿಸುಕಿದ ಆಲೂಗಡ್ಡೆಗಳಿಂದ ತಯಾರಿಸಿದ ಸುಲಭ ಮತ್ತು ಸರಳ ಮಸಾಲೆಯುಕ್ತ ಮತ್ತು ಖಾರದ ಡೀಪ್ ಫ್ರೈಡ್ ತಿಂಡಿ. ಯಾವುದೇ ಸಂಕೀರ್ಣ ಹಂತಗಳಿಲ್ಲದ ಈ ಪಾಕವಿಧಾನ ತುಂಬಾ ಸರಳವಾಗಿದೆ, ಆದರೆ ಅಂತಿಮ ಫಲಿತಾಂಶವು ಮಾತ್ರ ತುಂಬಾನೇ ಟೇಸ್ಟಿ ಆಗಿದೆ. ಇದನ್ನು ಸಂಜೆಯ ಲಘು ಆಹಾರವಾಗಿ, ಊಟಕ್ಕೆ ಸೈಡ್ ಡಿಶ್ ಆಗಿ ಅಥವಾ ಸ್ಯಾಂಡ್‌ವಿಚ್ ಹಾಗೂ ಯಾವುದೇ ಉಪಾಹಾರ ಭಕ್ಷ್ಯಗಳಿಗೆ ಟಾಪ್ ಮಾಡಿ ನೀಡಬಹುದು.ಆಲೂ ಭುಜಿಯಾ ಪಾಕವಿಧಾನಆಲೂ ಭುಜಿಯಾ ಪಾಕವಿಧಾನ | ಹಲ್ದಿರಾಮ್ ಆಲೂ ಭುಜಿಯಾ | ಆಲೂ ಸೇವ್ | ನಮ್ಕೀನ್ ಭುಜಿಯಾದ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ನಮ್ಕೀನ್ ಅಥವಾ ಮಸಾಲೆಯುಕ್ತ ಸೇವ್ ಪಾಕವಿಧಾನಗಳು ಯಾವಾಗಲೂ ಭಾರತದಾದ್ಯಂತ ಹೆಚ್ಚಿನ ಬೇಡಿಕೆಯಲ್ಲಿರುತ್ತವೆ. ವಿಭಿನ್ನ ರೀತಿಯ ನಮ್‌ಕೀನ್ ಸೇವ್ ಅಥವಾ ಡೀಪ್ ಫ್ರೈಡ್ ನೂಡಲ್ಸ್ ತಯಾರಿಸಲು ಹಲವು ಮಾರ್ಗಗಳು ಮತ್ತು ಪಾಕವಿಧಾನಗಳಿವೆ. ಅಂತಹ ಅತ್ಯಂತ ಜನಪ್ರಿಯ ವಿಧವೆಂದರೆ, ಆಲೂ ಭುಜಿಯಾ ಪಾಕವಿಧಾನ. ಇದು ಹಲ್ಡಿರಾಮ್ ಫ್ರ್ಯಾಂಚೈಸ್‌ನಿಂದ ನೀಡುವ ಪ್ರಮುಖ ಕಾಂಡಿಮೆಂಟ್ ಆಗಿದೆ.

ನನ್ನ ಬ್ಲಾಗ್‌ನಲ್ಲಿ ನಾನು ಇಲ್ಲಿಯವರೆಗೆ ಕೆಲವು ಸೇವ್ ಅಥವಾ ನಮ್‌ಕೀನ್ ಪಾಕವಿಧಾನಗಳನ್ನು ಪೋಸ್ಟ್ ಮಾಡಿದ್ದೇನೆ, ಆದರೆ ನನ್ನ ಅನಿಸಿಕೆಯ ಪ್ರಕಾರ, ಆಲೂ ಭುಜಿಯಾ ಎಲ್ಲಕ್ಕಿಂತ ಸರಳವಾದದ್ದು. ಅದರಲ್ಲಿ ಬಳಸುವ ಸಾಮಾಗ್ರಿಗಳೇ ಇದಕ್ಕೆ ಮುಖ್ಯ ಕಾರಣ. ಮೂಲತಃ, ಇದಕ್ಕೆ ಹಿಟ್ಟಿನಲ್ಲಿ ಸೇರಿಸಿದ ಮಸಾಲೆ ಮತ್ತು ಉಪ್ಪನ್ನು ಹೊರತುಪಡಿಸಿ ಕೇವಲ 2 ಪದಾರ್ಥಗಳು ಬೇಕಾಗುತ್ತವೆ. ನಾನು ವೈಯಕ್ತಿಕವಾಗಿ ಈ ಸೇವ್ ರೆಸಿಪಿಯನ್ನು ಇಷ್ಟಪಡುತ್ತೇನೆ ಏಕೆಂದರೆ ಅದು ರುಚಿಯ ಸಂಯೋಜನೆಯನ್ನು ನೀಡುತ್ತದೆ. ಇದು ಆಲೂಗಡ್ಡೆಯ ಸ್ಟಾರ್ಚ್ ನ ರುಚಿಯನ್ನು ಹೊಂದಿರುತ್ತದೆ ಮತ್ತು ಕಡಲೆ ಹಿಟ್ಟಿನ ರುಚಿಯನ್ನು ಕೂಡ ಹೊಂದಿರುತ್ತದೆ. ನಾನು ಸಾಮಾನ್ಯವಾಗಿ ಇದನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ, ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸುತ್ತೇನೆ. ಮತ್ತು ಅದನ್ನು ನನ್ನ ಎಲ್ಲಾ ಲಘು ಪಾಕವಿಧಾನಗಳಲ್ಲಿ ಟೊಪ್ಪಿನ್ಗ್ಸ್ ಆಗಿ ಬಳಸುತ್ತೇನೆ. ಇದನ್ನು ಸಾಂಪ್ರದಾಯಿಕವಾಗಿ ಕೇವಲ ಬಾಯಿ ಆಡಿಸಲು ಲಘು ಆಹಾರವಾಗಿ ನೀಡಲಾಗಿದ್ದರೂ ಸಹ ಇದು ಬಹುಪಯೋಗಿ ತಿಂಡಿ.

ಹಲ್ಡಿರಾಮ್ ಅಲು ಭುಜಿಯಾಆಲೂ ಭುಜಿಯಾ ಪಾಕವಿಧಾನಕ್ಕಾಗಿ ಕೆಲವು ಸುಲಭ ಮತ್ತು ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲನೆಯದಾಗಿ, ಈ ಪಾಕವಿಧಾನದಲ್ಲಿ, ನಾನು ಕರಿಮೆಣಸಿನಂತಹ ಮಸಾಲೆಗಳನ್ನು ಸೇರಿಸಿಲ್ಲ ಮತ್ತು ಕೇವಲ ಮೂಲ ಮಸಾಲೆ ಪುಡಿಗಳಿಗೆ ಸೀಮಿತಗೊಳಿಸಿದ್ದೇನೆ. ನೀವು ಶುಂಠಿ ಪುಡಿ, ಈರುಳ್ಳಿ ಪುಡಿ ಮತ್ತು ಮೆಣಸು ಪುಡಿಯಂತಹ ಮಸಾಲೆಗಳನ್ನು ಸೇರಿಸಿ, ಪ್ರಯೋಗಿಸಬಹುದು. ಎರಡನೆಯದಾಗಿ, ನೀವು ಇವುಗಳನ್ನು ಮಧ್ಯಮದಿಂದ ಕಡಿಮೆ ಜ್ವಾಲೆಯಲ್ಲಿಟ್ಟು ಹುರಿಯಬೇಕು. ಹಳದಿ ಬಣ್ಣವನ್ನು ತಲುಪಿದಾಗ ನೀವು ಜಾಗರೂಕರಾಗಿರಬೇಕು ಮತ್ತು ಎಣ್ಣೆಯಿಂದ ತೆಗೆದುಹಾಕಬೇಕು. ಗಾಢ ಹಳದಿ ಬಣ್ಣವನ್ನು ತಲುಪುವವರೆಗೆ ಕಾಯಬೇಡಿ ಏಕೆಂದರೆ ಅದು ಎಣ್ಣೆಯಿಂದ ತೆಗೆದ ನಂತರವೂ ಬೇಯಿಸುವುದನ್ನು ಮುಂದುವರಿಸಿ ಕಪ್ಪಾಗಬಹುದು. ಕೊನೆಯದಾಗಿ, ಈ ಪಾಕವಿಧಾನದ ಪೋಸ್ಟ್ನಲ್ಲಿ, ನಾನು ಬೇಯಿಸಿದ ಮತ್ತು ತುರಿದ ಆಲೂಗಡ್ಡೆಯನ್ನು ಮಾತ್ರ ಬಳಸಿದ್ದೇನೆ. ನಿಮ್ಮ ಅಭಿರುಚಿಗೆ ಅನುಗುಣವಾಗಿ ನೀವು ಆಲೂ ಅಥವಾ ಕಡಲೆ ಹಿಟ್ಟಿನ ಪ್ರಮಾಣವನ್ನುಹೆಚ್ಚಿಸಿ ಪ್ರಯೋಗಿಸಬಹುದು.

ಅಂತಿಮವಾಗಿ, ಆಲೂ ಭುಜಿಯಾ ಪಾಕವಿಧಾನದ ಈ ಪಾಕವಿಧಾನದೊಂದಿಗೆ ನನ್ನ ಇತರ ವಿವರವಾದ ತಿಂಡಿಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸಲು ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ಆಲೂ ಮಂಚೂರಿಯನ್, ಆಲೂಗೆಡ್ಡೆ ಬೈಟ್ಸ್, ಸಮೋಸಾ, ಆಲೂ ಮಸಾಲ ಗ್ರಿಲ್ಡ್ ಸ್ಯಾಂಡ್‌ವಿಚ್, ಆಲೂ ಟಿಕ್ಕಿ, ಬ್ರೆಡ್ ಪಕೋಡ, ಆಲೂ ಪಕೋಡ, ಆಲೂ ಫ್ರೈ, ಆಲೂ ಲಚ್ಚಾ ನಮ್‌ಕೀನ್, ಆಲೂ ಬೋಂಡಾ ಮುಂತಾದ ಪಾಕವಿಧಾನಗಳನ್ನು ಒಳಗೊಂಡಿದೆ. ಇವುಗಳಿಗೆ ಮತ್ತಷ್ಟು ನನ್ನ ಇತರ ವಿವರವಾದ ಪಾಕವಿಧಾನಗಳ ಸಂಗ್ರಹವನ್ನು ಹೈಲೈಟ್ ಮಾಡಲು ನಾನು ಬಯಸುತ್ತೇನೆ,

ಆಲೂ ಭುಜಿಯಾ ವೀಡಿಯೊ ಪಾಕವಿಧಾನ:

ಆಲೂ ಭುಜಿಯಾ ಪಾಕವಿಧಾನ ಕಾರ್ಡ್:

aloo bhujia recipe

ಆಲೂ ಭುಜಿಯಾ ರೆಸಿಪಿ | aloo bhujia in kannada | ಆಲೂ ಸೇವ್

0 from 0 votes
ತಯಾರಿ ಸಮಯ: 5 minutes
ಅಡುಗೆ ಸಮಯ: 7 minutes
ಒಟ್ಟು ಸಮಯ : 12 minutes
ಸೇವೆಗಳು: 1 ಬಾಕ್ಸ್
AUTHOR: HEBBARS KITCHEN
ಕೋರ್ಸ್: ತಿಂಡಿಗಳು
ಪಾಕಪದ್ಧತಿ: ಭಾರತೀಯ
ಕೀವರ್ಡ್: ಆಲೂ ಭುಜಿಯಾ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಆಲೂ ಭುಜಿಯಾ ಪಾಕವಿಧಾನ | ಆಲೂ ಸೇವ್

ಪದಾರ್ಥಗಳು

 • 1 ಆಲೂಗಡ್ಡೆ / ಆಲೂ, ಬೇಯಿಸಿದ ಮತ್ತು ಸಿಪ್ಪೆ ಸುಲಿದ
 • ಕಪ್ ಕಡಲೆ ಹಿಟ್ಟು
 • ¼ ಕಪ್ ಅಕ್ಕಿ ಹಿಟ್ಟು
 • 1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
 • ¼ ಟೀಸ್ಪೂನ್ ಅರಿಶಿನ
 • ½ ಟೀಸ್ಪೂನ್ ಜೀರಿಗೆ ಪುಡಿ
 • ½ ಟೀಸ್ಪೂನ್ ಗರಂ ಮಸಾಲ
 • 1 ಟೀಸ್ಪೂನ್ ಚಾಟ್ ಮಸಾಲ
 • ½ ಟೀಸ್ಪೂನ್ ಆಮ್ಚೂರ್
 • ¾ ಟೀಸ್ಪೂನ್ ಉಪ್ಪು
 • 2 ಟೀಸ್ಪೂನ್ ಎಣ್ಣೆ
 • ಎಣ್ಣೆ, ಹುರಿಯಲು

ಸೂಚನೆಗಳು

 • ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 1 ಆಲೂಗಡ್ಡೆಯನ್ನು ನುಣ್ಣಗೆ ತುರಿಯಿರಿ.
 • 1½ ಕಪ್ ಕಡಲೆ ಹಿಟ್ಟು ಮತ್ತು ¼ ಕಪ್ ಅಕ್ಕಿ ಹಿಟ್ಟು ಸೇರಿಸಿ.
 • 1 ಟೀಸ್ಪೂನ್ ಮೆಣಸಿನ ಪುಡಿ, ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಜೀರಿಗೆ ಪುಡಿ, ½ ಟೀಸ್ಪೂನ್ ಗರಂ ಮಸಾಲ, 1 ಟೀಸ್ಪೂನ್ ಚಾಟ್ ಮಸಾಲ, ½ ಟೀಸ್ಪೂನ್ ಆಮ್ಚೂರ್, ¾ ಟೀಸ್ಪೂನ್ ಉಪ್ಪು ಮತ್ತು 2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ.
 • ಎಲ್ಲವನ್ನೂ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
 • ನಯವಾದ ಮತ್ತು ಮೃದುವಾದ ಹಿಟ್ಟಿಗೆ ನಾದಿಕೊಳ್ಳಿ. ಅಗತ್ಯವಿದ್ದರೆ ನೀರು ಸೇರಿಸಿ.
 • ಹಿಟ್ಟು ಸ್ವಲ್ಪ ಜಿಗುಟಾಗಿರುತ್ತದೆ, 1 ಟೀಸ್ಪೂನ್ ಎಣ್ಣೆ ಗ್ರೀಸ್ ಮಾಡಿ, ಮತ್ತು ನಯವಾದ, ಮೃದು ಮತ್ತು ಜಿಗುಟಾಗದ ಹಾಗೆ ನಾದಿಕೊಳ್ಳಿ.
 • ಸಣ್ಣ ರಂಧ್ರವಿರುವ ಅಚ್ಚನ್ನು ಸ್ವಲ್ಪ ಎಣ್ಣೆಯಿಂದ ಗ್ರೀಸ್ ಮಾಡಿ, ಹಿಟ್ಟಿನ್ನು ತುಂಬಿಸಿ.
 • ಈಗ ಭುಜಿಯಾವನ್ನು ಒತ್ತಿ ಮತ್ತು ಬಿಸಿ ಎಣ್ಣೆಯಲ್ಲಿ ಹರಡಿ, ಎಣ್ಣೆಯಲ್ಲಿ ವೃತ್ತಾಕಾರವನ್ನು ರಚಿಸಿ. ಒಂದರ ಮೇಲೊಂದು ಬರುವಿಯುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
 • ಒಂದು ನಿಮಿಷದ ನಂತರ ತಿರುಗಿಸಿ, ಗೋಲ್ಡನ್ ಬಣ್ಣ ಮತ್ತು ಗರಿಗರಿಯಾಗುವವರೆಗೆ ಹುರಿಯಿರಿ.
 • ಎಣ್ಣೆಯನ್ನು ಹೀರಿಕೊಳ್ಳಲು ಅಡಿಗೆ ಕಾಗದದ ಮೇಲೆ ಹರಡಿ.
 • ಅಂತಿಮವಾಗಿ, ಆಲೂ ಭುಜಿಯಾವನ್ನು ತುಂಡುಗಳಾಗಿ ಮುರಿಯಿರಿ ಮತ್ತು ಚಹಾ ಸಮಯದಲ್ಲಿ ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಆಲೂ ಭುಜಿಯಾವನ್ನು ಹೇಗೆ ಮಾಡುವುದು:

 1. ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 1 ಆಲೂಗಡ್ಡೆಯನ್ನು ನುಣ್ಣಗೆ ತುರಿಯಿರಿ.
 2. 1½ ಕಪ್ ಕಡಲೆ ಹಿಟ್ಟು ಮತ್ತು ¼ ಕಪ್ ಅಕ್ಕಿ ಹಿಟ್ಟು ಸೇರಿಸಿ.
 3. 1 ಟೀಸ್ಪೂನ್ ಮೆಣಸಿನ ಪುಡಿ, ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಜೀರಿಗೆ ಪುಡಿ, ½ ಟೀಸ್ಪೂನ್ ಗರಂ ಮಸಾಲ, 1 ಟೀಸ್ಪೂನ್ ಚಾಟ್ ಮಸಾಲ, ½ ಟೀಸ್ಪೂನ್ ಆಮ್ಚೂರ್, ¾ ಟೀಸ್ಪೂನ್ ಉಪ್ಪು ಮತ್ತು 2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ.
 4. ಎಲ್ಲವನ್ನೂ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
 5. ನಯವಾದ ಮತ್ತು ಮೃದುವಾದ ಹಿಟ್ಟಿಗೆನಾದಿಕೊಳ್ಳಿ. ಅಗತ್ಯವಿದ್ದರೆ ನೀರು ಸೇರಿಸಿ.
 6. ಹಿಟ್ಟು ಸ್ವಲ್ಪ ಜಿಗುಟಾಗಿರುತ್ತದೆ, 1 ಟೀಸ್ಪೂನ್ ಎಣ್ಣೆ ಗ್ರೀಸ್ ಮಾಡಿ, ಮತ್ತು ನಯವಾದ, ಮೃದು ಮತ್ತು ಜಿಗುಟಾಗದ ಹಾಗೆ ನಾದಿಕೊಳ್ಳಿ.
 7. ಸಣ್ಣ ರಂಧ್ರವಿರುವ ಅಚ್ಚನ್ನು ಸ್ವಲ್ಪ ಎಣ್ಣೆಯಿಂದ ಗ್ರೀಸ್ ಮಾಡಿ, ಹಿಟ್ಟಿನ್ನು ತುಂಬಿಸಿ.
 8. ಈಗ ಭುಜಿಯಾವನ್ನು ಒತ್ತಿ ಮತ್ತು ಬಿಸಿ ಎಣ್ಣೆಯಲ್ಲಿ ಹರಡಿ, ಎಣ್ಣೆಯಲ್ಲಿ ವೃತ್ತಾಕಾರವನ್ನು ರಚಿಸಿ. ಒಂದರ ಮೇಲೊಂದು ಬರುವಿಯುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
 9. ಒಂದು ನಿಮಿಷದ ನಂತರ ತಿರುಗಿಸಿ, ಗೋಲ್ಡನ್ ಬಣ್ಣ ಮತ್ತು ಗರಿಗರಿಯಾಗುವವರೆಗೆ ಹುರಿಯಿರಿ.
 10. ಎಣ್ಣೆಯನ್ನು ಹೀರಿಕೊಳ್ಳಲು ಅಡಿಗೆ ಕಾಗದದ ಮೇಲೆ ಹರಡಿ.
 11. ಅಂತಿಮವಾಗಿ, ಆಲೂ ಭುಜಿಯಾವನ್ನು ತುಂಡುಗಳಾಗಿ ಮುರಿಯಿರಿ ಮತ್ತು ಚಹಾ ಸಮಯದಲ್ಲಿ ಆನಂದಿಸಿ.
  ಆಲೂ ಭುಜಿಯಾ ಪಾಕವಿಧಾನ

ಟಿಪ್ಪಣಿಗಳು:

 • ಮೊದಲನೆಯದಾಗಿ, ಆಲೂಗಡ್ಡೆಯನ್ನು ಚೆನ್ನಾಗಿ ತುರಿಯಿರಿ. ಉಂಡೆಗಳಿದ್ದರೆ ಸೇವ್ ಅಚ್ಚಿನಲ್ಲಿ ಹಾದುಹೋಗುವುದು ಕಷ್ಟವಾಗಬಹುದು.
 • ಹಾಗೆಯೇ, ಅಕ್ಕಿ ಹಿಟ್ಟನ್ನು ಸೇರಿಸುವುದರಿಂದ ಸೇವ್ ಗರಿಗರಿ ಆಗುತ್ತದೆ.
 • ವಿಭಿನ್ನ ಫ್ಲೇವರ್ ಅನ್ನು ಪಡೆಯಲು ಹಿಟ್ಟಿನಲ್ಲಿ ಪುದೀನ ಪೇಸ್ಟ್ ಸೇರಿಸಿ.
 • ಅಂತಿಮವಾಗಿ, ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿದಾಗ ಆಲೂ ಭುಜಿಯಾ ಪಾಕವಿಧಾನ 2 ವಾರಗಳವರೆಗೆ ಉತ್ತಮ ರುಚಿ ನೀಡುತ್ತದೆ.

ಈ ಪೋಸ್ಟ್ ಅನ್ಯ ಭಾಷೆಯಲ್ಲಿ ಉಪಲಬ್ದವಿದೆ ಆಂಗ್ಲ (English), ಮತ್ತು हिन्दी (Hindi)